ಹರಿತಲೇಖನಿ ದಿನಕ್ಕೊಂದು ಕಥೆ: ಸ್ವಭಾವದೋಷಗಳಿಂದಾಗುವ ಹಾನಿ

ಅ. ತನಗೆ ಮತ್ತು ಇತರರಿಗೆ ತೊಂದರೆಯಾಗುವುದು: ನಮ್ಮಲ್ಲಿರುವ ವಿವಿಧ ಸ್ವಭಾವ ದೋಷಗಳಿಂದಾಗಿ ಕೇವಲ ನಮಗೆ ಮಾತ್ರವಲ್ಲ, ಇತರರಿಗೂ ತೊಂದರೆಯಾಗುತ್ತದೆ.

ಆ. ಸ್ವಭಾವದೋಷಗಳಿಂದಾಗುವ ದುಷ್ಪರಿಣಾಮಗಳು: ಭಯವಾಗುವುದು, ನಾಚಿಕೆಯಾಗುವುದು, ಮನಬಿಚ್ಚಿ ಮಾತನಾಡದಿರುವುದು ಮತ್ತು ಸಂಕೋಚವಾಗುವುದು ಇವು ಸ್ವಭಾವದೋಷಗಳ ವಿವಿಧ ಲಕ್ಷಣಗಳಾಗಿವೆ. ನಮ್ಮಲ್ಲಿರುವ ಸ್ವಭಾವದೋಷಗಳಿಂದಾಗಿ ನಮಗೆ ‘ಒತ್ತಡವಾಗುವುದು, ಚಿಂತೆ ಮಾಡುವುದು ಮತ್ತು ಅಸ್ವಸ್ಥತೆ ಅನಿಸುವುದು’ ಇಂತಹ ತೊಂದರೆಗಳಾಗುತ್ತವೆ ಮತ್ತು ಇದರಿಂದ ನಮ್ಮ ರೋಗಗಳೂ ಹೆಚ್ಚಾಗಬಹುದು.

ಶಾರೀರಿಕ ಸ್ತರದಲ್ಲಿ: ಸ್ವಭಾವದೋಷಗಳಿಂದ ಶಾರೀರಿಕ ರೋಗಗಳೂ ಉದ್ಭವಿಸುತ್ತವೆ. ಅವುಗಳಿಗೆ ‘ಮನೋಕಾಯಿಕ ರೋಗಗಳು’ ಎಂದು ಹೇಳುತ್ತಾರೆ, ಉದಾ. ಹೆಚ್ಚು ಚಿಂತೆ ಮಾಡುವ ಸ್ವಭಾವವಿದ್ದರೆ ಶರೀರದಲ್ಲಿನ ಎಲ್ಲಾ ಅವಯವಗಳ ಮೇಲೆ ಅದರ ದುಷ್ಪರಿಣಾಮವಾಗುತ್ತದೆ. ಇದರಿಂದ ಆಮ್ಲಪಿತ್ತ, ಅಲ್ಸರ್, ದಮ್ಮು, ಹೃದಯದ ರೋಗಗಳು, ರಕ್ತದೊತ್ತಡ ಇತ್ಯಾದಿ ಕಾಯಿಲೆಗಳು ಉದ್ಭವಿಸುತ್ತವೆ.

ಮಾನಸಿಕ ಸ್ತರದಲ್ಲಿ

ಮನೋರೋಗಗಳು ಉದ್ಭವಿಸುವುದು: ಮನಸ್ಸಿನ ಕಾರ್ಯಕ್ಷಮತೆಯು ಕಡಿಮೆಯಾಗಿ ಮನೋರೋಗಗಳು ಉದ್ಭವಿಸುತ್ತವೆ.

ಮಾನಸಿಕ ರೋಗಗಳಾಗುವುದು:‌ ಸ್ವಭಾವದೋಷಗಳಿಂದ ನಿರಾಶೆ, ಏಕಾಗ್ರತೆ ಮತ್ತು ಅತ್ಮವಿಶ್ವಾಸದ ಅಭಾವ, ಮರೆವು, ಉಧ್ವಸ್ತ ವ್ಯಕ್ತಿತ್ವ (ಸ್ಕಿಜೋಫ್ರೆನಿಯಾ) ಇಂತಹ ವಿವಿಧ ಮಾನಸಿಕ ರೋಗಗಳು ಉದ್ಭವಿಸುತ್ತವೆ.

ಒತ್ತಡಗ್ರಸ್ತ ಜೀವನ: ಸ್ವಭಾವದೋಷಗಳು ಹೆಚ್ಚಿದ್ದಷ್ಟು ಮನಸ್ಸಿನ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಯಾರಾದರೊಬ್ಬ ವ್ಯಕ್ತಿಯ ಸ್ವಭಾವವು ಚಿಂತೆ ಮಾಡುವುದಾಗಿದ್ದಲ್ಲಿ ಮತ್ತು ಅವನು ಕೋಪಿಷ್ಠನಾಗಿದ್ದರೆ ಚಿಂತೆ ಮಾಡುವುದು ಮತ್ತು ಕೋಪ ಇವೆರಡರ ಒತ್ತಡವು ಅವನ ಮನಸ್ಸಿನ ಮೇಲಾಗುತ್ತದೆ. ಮನಸ್ಸಿನ ಮೇಲೆ ಒತ್ತಡ ಬರುವುದರಿಂದ ಅವನಿಗೆ ಇತರರೊಂದಿಗೆ ಹೊಂದಿಕೊಳ್ಳುವುದು ಕಠಿಣವಾಗುತ್ತದೆ. ಕ್ಷುಲ್ಲಕ ಘಟನೆಗಳಿಂದಲೂ ಅವನ ಮನಸ್ಸಿನ ಮೇಲೆ ಒತ್ತಡವುಂಟಾಗುತ್ತದೆ.

ವ್ಯಸನಾಧೀನತೆ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಕ್ತಿ ಸಿಗರೇಟು, ಸಾರಾಯಿ ಮುಂತಾದ ವ್ಯಸನಗಳ ಆಧಾರವನ್ನು ಪಡೆಯುತ್ತಾನೆ.

ಬೌದ್ಧಿಕ ಸ್ತರದಲ್ಲಿ: ಸ್ವಭಾವದೋಷಗಳಿಂದಾಗಿ ಮನಸ್ಸಿನ ಮೇಲೆ ವಿವೇಕ ಬುದ್ಧಿಯ ಪ್ರಭಾವ ನಿರ್ಮಾಣವಾಗಲಾರದು, ಜೀವನದಲ್ಲಿ ಯಾವ ಕೃತಿಯನ್ನು ಯೋಗ್ಯ ರೀತಿಯಲ್ಲಿ ಮತ್ತು ಹೇಗೆ ಮಾಡಬೇಕು ಎಂಬುದು ಬುದ್ಧಿಯಿಂದ ತಿಳಿಯುತ್ತದೆ. ಸ್ವಭಾವದೋಷಗಳು ಹೆಚ್ಚಿರುವುದರಿಂದ ಆ ದೋಷಗಳಿಗನುಸಾರ ಯಾವುದಾದರೊಂದು ಅಯೋಗ್ಯ ಕೃತಿ ಅಥವಾ ಪ್ರತಿಕ್ರಿಯೆಯು ಏಕೆ ಅಯೋಗ್ಯವಾಗಿದೆ ಎಂಬುದು ಬುದ್ಧಿಯಿಂದ ಸ್ಪಷ್ಟವಾಗಿದ್ದರೂ, ಆ ಅಯೋಗ್ಯ ಕೃತಿ ವ್ಯಕ್ತಿಯಿಂದ ಪುನಃ ಪುನಃ ಆಗುತ್ತಿರುತ್ತದೆ ಮತ್ತು ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆ ನಿರಂತರವಾಗಿ ಬರುತ್ತಿರುತ್ತದೆ.

ಸ್ವಭಾವದೋಷ ನಿರ್ಮೂಲನೆಯಿಂದ ವಿವೇಕಬುದ್ಧಿಯು ಜಾಗೃತವಾಗಿ ಚಿತ್ತ ಶುದ್ಧವಾಗುವ ಪ್ರಕ್ರಿಯೆ: ಸಾಧನೆಯಲ್ಲಿ ಚಿತ್ತಶುದ್ಧಿಗೆ ಮಹತ್ವವಿದೆ. ಮನಸ್ಸು ಸಂಕಲ್ಪ ಹಾಗೂ ವಿಕಲ್ಪಗಳನ್ನು ನಿರ್ಮಿಸುತ್ತದೆ ಮತ್ತು ನಿರ್ಣಯಕ್ಕಾಗಿ ಬುದ್ಧಿಯೆಡೆಗೆ ಕಳುಹಿಸುತ್ತದೆ. ಬುದ್ಧಿಯಲ್ಲಿ ವಿವೇಕ ಇಲ್ಲದಿದ್ದರೆ, ವಿಕಲ್ಪಗಳು ಪುನಃ ಹಾಗೆಯೇ ಚಿತ್ತದೆಡೆಗೆ ಹೋಗುತ್ತವೆ. ಚಿತ್ತವು ಮೊದಲು ಹೇಗೆ ಅಶುದ್ಧವಾಗಿತ್ತೋ, ಹಾಗೆಯೇ ಅಶುದ್ಧವಾಗಿರುತ್ತದೆ. ಆದುದರಿಂದ ಬುದ್ಧಿಯಲ್ಲಿ ವಿವೇಕ ಜಾಗೃತವಾದಲ್ಲಿ ಚಿತ್ತವು ವಿವೇಕದ ಮೂಲಕ ಕೆಟ್ಟ ವಿಚಾರಗಳನ್ನು ಒಳಗೆ ಬರಲು ಬಿಡದೆ ದೈವೀ ವಿಚಾರಗಳಿಗೆ ಪ್ರಾಧಾನ್ಯತೆಯನ್ನು ಕೊಡುತ್ತದೆ. ಈ ರೀತಿ ದೈವೀ ವಿಚಾರಗಳು ಹೆಚ್ಚುತ್ತಾ ಹೋಗಿ ನಿಧಾನವಾಗಿ ಚಿತ್ತವು ಶುದ್ಧವಾಗುತ್ತದೆ. – ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಸ್ವಭಾವದೋಷಗಳು ಅಧಿಕವಾಗಿದ್ದಲ್ಲಿ ಗ್ರಹಿಸುವ ಶಕ್ತಿ ಮತ್ತು ವಿಚಾರ ಪ್ರಕ್ರಿಯೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ.

ಕೌಟುಂಬಿಕ ಸ್ತರದಲ್ಲಿ: ಕುಟುಂಬದಲ್ಲಿನ ಸದಸ್ಯರಲ್ಲಿರುವ ಸ್ವಭಾವ ದೋಷಗಳಿಂದಾಗಿ ಪರಸ್ಪರರಲ್ಲಿ ಸುಸಂವಾದ ಸಾಧಿಸಲು ಅಡಚಣೆಗಳು ಬರುತ್ತವೆ. ಕುಟುಂಬದಲ್ಲಿನ ಯಾರಾದರೊಬ್ಬ ವ್ಯಕ್ತಿಯು ಸಿಟ್ಟಿನ ಸ್ವಭಾವದವನಾಗಿದ್ದಲ್ಲಿ, ಆ ಒಬ್ಬ ವ್ಯಕ್ತಿಯಿಂದ ಮನೆಯಲ್ಲಿನ ಸಂಪೂರ್ಣ ವಾತಾವರಣದಲ್ಲಿ ಒತ್ತಡ ನಿರ್ಮಾಣವಾಗುತ್ತದೆ ಮತ್ತು ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ.

ಸಾಮಾಜಿಕ: ವ್ಯಕ್ತಿಯ ಸ್ವಭಾವದೋಷಗಳಿಂದಾಗಿ ಅವನ ಸಂಪರ್ಕದಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೆ ತೊಂದರೆಯಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಯಿಂದ: ಈಶ್ವರನು ದೋಷರಹಿತ, ಸರ್ವಗುಣಸಂಪನ್ನ ಮತ್ತು ಪರಿಪೂರ್ಣನಾಗಿರುವುದರಿಂದ ಸಾಧನೆಯಿಂದ ಅವನೊಂದಿಗೆ ಏಕರೂಪವಾಗುವಾಗ ಸ್ವಭಾವದೋಷ ನಿರ್ಮೂಲನ ಮತ್ತು ಗುಣವೃದ್ಧಿಯನ್ನು ಮಾಡುವುದು ಆವಶ್ಯಕವಾಗಿದೆ.

ಕೃಪೆ: ಸನಾತನ ಸಂಸ್ಥೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!