ಬೆಂಗಳೂರು, (ಜ.12); ಕಾಟೇರ ಸಿನಿಮಾ ಯಶಸ್ವಿ ಸಹಿಸಲಾಗದೇ ದರ್ಶನ್ ಅವರಿಗೆ ಮಸಿ ಬಳಿಯಲು ಈ ರೀತಿ ಟಾರ್ಗೆಟ್ ಮಾಡಿದ್ದಾರೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಿಡಿಕಾರಿದರು.
ಅವಧಿ ಮೀರಿ ಪಾರ್ಟಿ ಮಾಡಿದ ಕೇಸ್‌ಗೆ ಸಂಬಂಧಿಸಿದಂತೆ ಕಾಟೇರ ಚಿತ್ರತಂಡದ ವಿರುದ್ಧ ಸುಬ್ರಮಣ್ಯಪುರ ಪೊಲೀಸರಿಂದ ಕೇಸ್ ವಿಚಾರಣೆ ಬಳಿಕ ಅವರು ಮಾತನಾಡಿದರು.
ಸಿನಿಮಾ ಯಶಸ್ವಿ ಸಂಭ್ರಮಾಚರಣೆ ನಂತರ ಊಟಕ್ಕಾಗಿ ನಾನೇ ಎಲ್ಲಾ ನಟರನ್ನು ಕರೆದೊಯ್ದಿದ್ದೆ. ಆ ವೇಳೆಗೆ ದರ್ಶನ್ ಹೊರಟು ಹೋಗಿದ್ದರು. ಆದರೂ ಬಲವಂತದಿಂದ ಊಟಕ್ಕಾಗಿ ವಾಪಸ್ ಕರೆಸಿದೆವು.
ಈ ಸಂದರ್ಭದಲ್ಲಿ ಹೋಟೆಲ್ ಅಡಿಗೆ ಸಿಬ್ಬಂದಿಯ ಕೆಲವರು ಹೊರಟು ಬಿಟ್ಟಿದ್ದರು. ಆ ಕಾರಣ ಸ್ವಲ್ಪ ವಿಳಂಬವಾಗಿದೆ. ನಾವು ಕೇವಲ ಊಟಕ್ಕಷ್ಟೇ ಹೋಗಿದ್ದು, ಈ ರೀತಿ ಊಟಕ್ಕೆ ಹೋದ ಗ್ರಾಹಕರಿಗೆ ನೋಟೀಸ್ ಕೊಟ್ಟಿರುವುದು ಇದೆ ಮೊದಲು. ಕಾನೂನು ಎಲ್ಲರಿಗೂ ಒಂದೇ.. ನಾವು ಯಾವುದೇ ಸಾರ್ವಜನಿಕರಿಗೆ ತೊಂದರೆ ಕೊಟ್ಟಿಲ್ಲ. ಆದರೆ ನೋಟೀಸ್ ನೀಡಿ ಇಷ್ಟು ಜನ ಸಾರ್ವಜನಿಕರಿಗೆ ತೊಂದರೆ ಆಗಿದೆ, ಹೊಣೆಯಾರು ಎಂದು ರಾಕ್ಲೈನ್ ಪ್ರಶ್ನಿಸಿದರು.
‘ಈ ಷಡ್ಯಂತ್ರ ಹಿಂದೆ ಯಾರಿದ್ದಾರೆ ಅಂತಾ ಜನರಿಗೆ ಗೊತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ’ ಕನ್ನಡ ಚಿತ್ರರಂಗ, ಅನೇಕ ನಟರನ್ನು ಬೆಳೆಸಲು ಶ್ರಮಿಸುತ್ತಿರುವ ದರ್ಶನ್ ಅವರಿಗೆ ಪದೇ ಪದೇ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ವಾರ್ನ್ ಮಾಡಿದರು. ಅಲ್ಲದೆ ಅಬಕಾರಿ ಕಾಯ್ದೆ ಪ್ರಕಾರ ನಾವು ಏನೂ ಉಲ್ಲಂಘಿಸಿಲ್ಲ’ ಎಂದು ರಾಕ್ಲೈನ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನಟರಾದ ದರ್ಶನ್, ನೀನಾಸಂ ಸತೀಶ್, ಚಿಕ್ಕಣ್ಣ, ಡಾಲಿ ಧನಂಜಯ್, ನಿರ್ದೇಶಕ ತರುಣ್ ಕಿಶೋರ್ ಮುಂತಾದವರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….