ದೊಡ್ಡಬಳ್ಳಾಪುರ, (ಜ.12); ಇಲ್ಲಿನ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿಂದು ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ವಿವೇಕಾನಂದರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಸಿ.ಮಂಜುನಾಥ್ ಸ್ವಾಮಿ, ವಿವೇಕಾನಂದರು ಯುವಕರಿಗೆ ಸ್ಫೂರ್ತಿ, ಅವರ ತತ್ವಗಳು ವಿಶ್ವಾದ್ಯಂತ ಇಂದಿಗೂ ಜನಮನದಲ್ಲಿ ಆಳವಾಗಿ ಬೇರೂರಿದೆ. “ಯುವಕರೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”ಎಂದು ಹೇಳುವ ಮೂಲಕ ಯುವಜನತೆಯ ಸ್ಪೂರ್ತಿಯ ಚಿಲುಮೆಯಾಗಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಐ.ಐ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಚೆನೈ ಐ.ಐ.ಟಿ.ಕಾಲೇಜಿಗೆ ಪ್ರವೇಶ ಪಡೆದಿರುವ ದೊಡ್ಡಬಳ್ಳಾಪುರ ತಾಲೂಕಿನ ಎಕೈಕ ವಿದ್ಯಾರ್ಥಿಯಾದ ವರುಣ್ ಅವರನ್ನು ಆಡಳಿತ ಮಂಡಳಿಯ ಪರವಾಗಿ ಗೌರವಿಸಲಾಯಿತು.
ಈ ವೇಳೆ ಶ್ರೀ ಸೂರ್ಯ ಕಾಲೇಜಿನ ಆಡಳಿತಾಧಿಕಾರಿ ಶಾಮನಾಸ್ ಉಪನ್ಯಾಸಕರಾದ ವಿ.ಕೆ. ಅನಿಲ್ ಕುಮಾರ್.ಟಿ. ಪುನೀತ್.ಎಂ.ಎನ್. ಕಲ್ಪನಾ.ಪವನ್ ಕುಮಾರ್ ಉಮ್ಮೇಮುಸ್ಕಾನ್ ರೂಪ ಮಿಥುನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….