ಬೆಂಗಳೂರು, (ಫೆ.05); ಜೆಡಿಎಸ್ ಪಕ್ಷದ ನೂತನ ಪದಾಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ನೇಮಕ ಮಾಡಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಇದರನ್ವಯ ದೊಡ್ಡಬಳ್ಳಾಪುರದ ಡಾ.ವಿಜಯ್ ಕುಮಾರ್ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಉಳಿದಂತೆ ಕಾರ್ಯಾಧ್ಯಕ್ಷನ್ನಾಗಿ ಮಾಜಿ ಶಾಸಕರಾದ ಹನುಮಂತಪ್ಪ ವೈಮ ಅಲ್ಕೋಡು, ಸಾ.ರಾ.ಮಹೇಶ್, ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರೆಬೋಳ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟೀಲ್ (ರಾಜು ಗೌಡ).
ಹಿರಿಯ ಉಪಾಧ್ಯಕ್ಷರಾಗಿ ಮಾಜಿ ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ, ರವೀಂದ್ರ ಶ್ರೀಕಂಠಯ್ಯ, ಸೋಮಣ್ಣಪಾಟಿಲ್, ಮುಖಂಡರಾದ ಜ್ಯೊತಿ ಪ್ರಕಾಶ್.
ಉಪಾಧ್ಯಕ್ಷರಾಗಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ರಾಜ ವೆಂಕಟಪ್ಪ ನಾಯಕದೊರೆ, ಚೌಢರೆಡ್ಡಿತೋಪಲ್ಲಿ, ಕೆಬಿ ಪ್ರಸನ್ನ ಕುಮಾರ್, ಶಾಸಕರಾದ ಕರೆಮ್ಮ ಜಿ. ನಾಯಕ್. ಟಿ.ಎ.ಶರವಣ.
ಮಹಾಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ವೆಂಕರಾವ್ ನಾಡಗೌಡ.
ಖಜಾಂಚಿಯಾಗಿ ಶಾಸಕ ಬಿ.ಎನ್.ರವಿಕುಮಾರ್.
ಪ್ರಧಾನ ಕಾರ್ಯದರ್ಶಿಯಾಗಿ ಎ.ಪಿ.ರಂಗನಾಥ್, ಆರ್.ಪ್ರಕಾಶ್, ಡಾ.ಸೈಯದ್ ರೋಷನ್ ಅಬ್ಬಾಸ್, ರೆಹಮತುಲ್ಲಖಾನ್, ಸುಧಾಕರ್ ಲಾಲ್, ಶಿವಕುಮಾರ್ ನಾಟೇಕರ್, ಶಾರದ ಅಪ್ಪಾಜಿಗೌಡ, ರೂತ್ ಮನೋರಮ, ಮಲ್ಲೇಶಬಾಬು, ವೀರಭದ್ರಪ್ಪ ಹಾಲಹರವಿ.
ಕಾರ್ಯದರ್ಶಿ ಮಹಾಂತಯ್ಯಮಠ, ಶಂಸಿ ತಬ್ರಾಜ್, ಐಲಿನ್ ಜಾನ್ ಮಠಪತಿ, ಬಿ.ಕಾಂತರಾಜ್, ಡಾ.ವಿಜಯಕುಮಾರ್, ಡಾ.ಶೀಲಾ ನಾಯಕ್, ರೋಷನ್ ಬಾವಾಜಿ, ಚಂದ್ರಕಾಂತ್ ಶೇಕಾ, ಕನ್ಯಕುಮಾರಿ, ಸಿದ್ದಬಸಪ್ಪಯಾದವ್ ಅವರನ್ನು ನೇಮಕ ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….