ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ: ವಿಡಿಯೋ ನೋಡಿ

ಒಡಿಶಾ, (ಫೆ.08): ಪ್ರಧಾನಿ ನರೇಂದ್ರ ಮೋದಿ ಅವರ ಜಾತಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಒಡಿಶಾದ ಝಾರ್ಸುಗುಡಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜಾತಿಯ ಬಗ್ಗೆ ಸುಳ್ಳು ಹೇಳಿದ್ದಾರೆ. ಪ್ರಧಾನ ಮಂತ್ರಿ ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆಯೇ ಹೊರತು ಇತರೆ ಹಿಂದುಳಿದ ವರ್ಗಕ್ಕೆ (obc) ಅಲ್ಲ ಎಂದಿದ್ದಾರೆ

ಪ್ರಧಾನಿ ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ. ಅವರು ಗುಜರಾತ್ನ ತೆಲಿ ಜಾತಿಯಲ್ಲಿ ಜನಿಸಿದರು. ಈ ಸಮುದಾಯಕ್ಕೆ 2000ನೇ ಇಸವಿಯಲ್ಲಿ ಬಿಜೆಪಿ ಒಬಿಸಿ ಎಂಬ ಹಣೆಪಟ್ಟಿ ನೀಡಿತ್ತು. ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದರು. ಅವರು ಸಾಮಾನ್ಯ ವರ್ಗದಲ್ಲಿ ಜನಿಸಿದರು ಎಂಬ ಕಾರಣಕ್ಕಾಗಿ ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯು ಒಡಿಶಾದಿಂದ ಗುರುವಾರ ಛತ್ತೀಸ್‌ಗಢವನ್ನು ಪ್ರವೇಶಿಸಲಿದೆ. ಫೆಬ್ರವರಿ 14 ರಂದು ಯಾತ್ರೆಯು ಬಲರಾಂಪುರದಿಂದ ಜಾರ್ಖಂಡ್‌ಗೆ ತೆರಳಲಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!