ಸ್ವಾತಂತ್ರ್ಯ ದಿನಾಚರಣೆಯಂದು ಸಾಂಸ್ಕೃತಿಕ ಸಿರಿವೈಭವ: ಪ್ರೇಕ್ಷಕರ ಮನ ಗೆದ್ದ, ಸ್ವಾತಂತ್ರ್ಯ ಧಾರೆಯ ಸಮರ ಧೀರರು, ನೃತ್ಯ ರೂಪಕ| ಫೋಟೋಗಳನ್ನು ನೋಡಿ

ಧಾರವಾಡ, (ಆಗಸ್ಟ್ 15); ಸ್ವಾತಂತ್ರ್ಯ ದಿನಾಚರಣೆಯ ವುಶೇಷ ಆಚರಣೆ ಮೂಲಕ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಗಳನ್ನು ಜನರಿಗೆ ಮತ್ತಮ್ಮೊ ಕಟ್ಟಿಕೊಡುವ ಮಹಾದಾಸೆಯಿಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಶಾಲಾ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ, ಪದವಿ ಪೂರ್ವ ಶಿಕ್ಷಣ ಇಲಾಖೆ,

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದ  ಸ್ವಾತಂತ್ರ್ಯ  ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕ  ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರೇಕ್ಷರ ಮನ ಗೆದ್ದಿತು.

ಶಂಕರ್ ಹಲಗತ್ತಿ ಸಂಚಾಲಕತ್ವದ ಮತ್ತು ನಟ, ಸಂಗೀತಗಾರ ಗದಿಗಯ್ಯ  ಹಿರೇಮಠ ಅವರು ರಚಿಸಿ, ಸಂಗೀತ ಸಂಯೋಜಿಸಿ, ಪ್ರಧಾನ ನಿರ್ದೇಶನ ಮಾಡಿದ್ದ ಈ ರೂಪಕಕ್ಕೆ ಗದಿಗಯ್ಯ ವಿ ಹಿರೇಮಠ, ಡಾ.ರಾಮು ಮೂಲಗಿ, ಡಾ.ಲಿಂಗರಾಜ ರಾಮಾಪೂರ, ಲಾಲಸಾಬ ನದಾಫ್ ಅವರು ಸಾಹಿತ್ಯ ರಚಿಸಿದ್ದರು.

ಸ್ವಾತಂತ್ರ್ಯ  ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕದಲ್ಲಿ ಧಾರವಾಡ ನಗರದ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ  ಮಕ್ಕಳಿಂದ  ಪ್ರಮೀಳಾ ಜಕ್ಕಣ್ಣವರ ನಿರ್ದೇಶನದ ಕಿತ್ತೂರು ರಾಣಿ ಚೆನ್ನಮ್ಮ ರೂಪಕ ಮತ್ತು  ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳಿಂದ ಸಿಕಂದರ ದಂಡಿನ ನಿರ್ದೇಶನದ ಮುಂಡರಗಿ  ಭೀಮರಾಯ ರೂಪಕ ಮತ್ತು ಕಿಟಲ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮಕ್ಕಳಿಂದ ಸೋಮಶೇಖರ ಕಾರಿಗನೂರ ನಿರ್ದೇಶನದ ನರಗುಂದದ ಬಾಬಾ ಸಾಹೇಬ್ ರೂಪಕ ಮತ್ತು ಮಹೇಶ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮಕ್ಕಳಿಂದ ಲಾಲಸಾಬ ನದಾಫ ನಿರ್ದೇಶನದ ಧಾರವಾಡದ ಖಿಲಾಪತ್ ಚಳವಳಿ ರೂಪಕ ಹಾಗೂ ಶ್ರೀ ಸತ್ಯಸಾಯಿ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳಿಂದ ಶೃತಿ  ಹುರಳಿಕೊಪ್ಪ ನಿರ್ದೇಶನದ ಮೈಲಾರ ಮಹಾದೇವಪ್ಪ ರೂಪಕಗಳು ಪ್ರದರ್ಶನವಾದವು.

ಈ ಐದು ರೂಪಕಗಳಲ್ಲಿ ಒಟ್ಟು 500 ವಿದ್ಯಾರ್ಥಿಗಳು ಅಭಿನಯಿಸಿದರು. ರಾಘವ ಕಮ್ಮಾರ ಅವರು ಸಂಗೀತ ಸಂಯೋಜಿಸಿ, ವಿಶ್ವರಾಜ ರಾಜಗುರು ಅವರೊಂದಿಗೆ ಗಾಯನ ಪ್ರಸ್ತುತ ಪಡಿಸಿದರು. ಜಾನಪದ ಗಾಯನವನ್ನು ಡಾ.ರಾಮೂ ಮೂಲಗಿ ಅವರು, ನೃತ್ಯ ಸಂಯೋಜನೆಯನ್ನು ವಿಜೇತಾ ವರ್ಣೇಕರ ಮತ್ತು ಮಲ್ಲನಗೌಡ ಪಾಟೀಲ ಅವರು, ವಸ್ತ್ರ ವಿನ್ಯಾಸವನ್ನು ಮುಕ್ತಾ ವರ್ಣೇಕರ ಅವರು ಮಾಡಿದ್ದರು.

ಈ ರೂಪಕಗಳನ್ನು ತಯ್ಯಾರಿಸುವಲ್ಲಿ  ಗದಿಗಯ್ಯ ಹಿರೇಮಠ,ಮಾಯಾ ಚಿಕ್ಕೆರೂರ, ಆರತಿ ದೇವಶಿಖಾಮಣಿ,  ಸಿ ಎಸ್ ಪಾಟೀಲ ಕುಲಕರ್ಣಿ, ಎನ್ ಬಿ ದ್ಯಾಪೂರ, ರಾಘವ ಕಮ್ಮಾರ, ಬಿ ಆರ್ ಜಕಾತಿ, ವಿಶ್ವರಾಜ್ ರಾಜಗುರು, ಸಿಕಂದರ್ ದಂಡಿನ,  ಶೃತಿ ಹುರಳಿಕೊಪ್ಪ, ಸೋಮಶೇಖರ ಕಾರಿಗನೂರ, ಲಾಲಸಾಬ ನದಾಫ, ಬಾಬಜಾನ್ ಮುಲ್ಲಾ, ಪವನ ಕುಲಕರ್ಣಿ, ಸ್ಟ್ಯಾಂಡಲಿ ಕಲ್ಲೂರ ಕಲಾವಿದರು ಶ್ರಮಿಸಿದ್ದರು.

ಬಾಲಬಳಗ ಮಕ್ಕಳಿಂದ ಖಾದಿ ನೂಲು ತೆಗೆಯುವ ಪ್ರಾತ್ಯಕ್ಷಿಕೆ: ಧಾರವಾಡ ಬಾಲಬಳಗ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥ ಡಾ. ಸಂಜಿವ ಕುಲಕರ್ಣಿ ನೇತೃತ್ವದಲ್ಲಿ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಚರಕದ ಮೂಲಕ ಖಾದಿ ನೂಲು ತೆಗೆಯುವ ಪ್ರಾತ್ಯಕ್ಷಿಕೆಯನ್ನು ನೀಡಿ, ಸಾರ್ವಜನಿಕರಲ್ಲಿ ಖಾದಿ ಮಹತ್ವ, ಜಾಗೃತಿ ಮೂಡಿಸಿದರು.

ಪಥ ಸಂಚಲನದ ಸ್ಪರ್ಧೆ ವಿಜೇತರು: ಇದೇ ಮೊದಲಬಾರಿಗೆ ಜಿಲ್ಲಾಡಳಿತದಿಂದ ಪಥಸಂಚಲನದಲ್ಲಿ ಉತ್ತಮ್ಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಲಾಯಿತು. 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಸಲಾಗಿದ್ದ ಕವಾಯತು ಪಥ ಸಂಚಲನದಲ್ಲಿ ಧಾರವಾಡ ಶಹರದ  ಎನ್.ಎ ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಗೆ ಪ್ರಥಮ ಬಹುಮಾನ, ಕಲಘಟಗಿ ತಾಲೂಕಿನ ಆಸ್ತಕಟ್ಟೆ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಗೆ ದ್ವಿತೀಯ ಬಹುಮಾನ ಹಾಗೂ ಧಾರವಾಡ ಶಹರದ ಆದರ್ಶ ವಿದ್ಯಾಲಯಕ್ಕೆ ತೃತೀಯ ಬಹುಮಾನವನ್ನು ನೀಡಿ,  ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ: ನೆಲದ ಮೇಲೆ ಕುಳಿತು ರೂಪಕ ಕಾರ್ಯಕ್ರಮ ವೀಕ್ಷಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್: 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನೆಲದ ಮೇಲೆ ಕುಳಿತು ಮೈದಾನದಲ್ಲಿ ನಡೆದ ರೂಪಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಶಾಲಾ ಮಕ್ಕಳು ಮೈದಾನದಲ್ಲಿ ಕಿರುನಾಟಕ, ನೃತ್ಯ, ದೇಶಭಕ್ತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಧ್ವಜಾರೋಹಣ ನೆರವೇರಿಸಿದ ನಂತರ ಸಚಿವ ಲಾಡ್ ಅವರು, ಈ ಎಲ್ಲಾ ಕಾರ್ಯಕ್ರಮಗಳನ್ನು ನೆಲದ ಮೇಲೆ ಸಾಮಾನ್ಯರಂತೆ ಕುಳಿತು ವೀಕ್ಷಿಸಿದರು. ಸಚಿವರೇ ತಮ್ಮೊಂದಿಗೆ ಕುಳಿತದ್ದು ಕಂಡ ಮಕ್ಕಳು ಹೆಚ್ಚಿನ ಸಂತೋಷಗೊಂಡರು. ಸಚಿವರ ಈ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ತಿದ್ದುಪಡಿ ಮಸೂದೆಗೆ ಸೋಲು; ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ

ತಿದ್ದುಪಡಿ ಮಸೂದೆಗೆ ಸೋಲು; ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ

ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಹೇಳಿದ್ದಾರೆ.

[ccc_my_favorite_select_button post_id="121096"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!