ದೊಡ್ಡಬಳ್ಳಾಪುರ, (ಆಗಸ್ಟ್.26); ಜಿಕೆವಿಕೆಯ ಕೃಷಿ ವಿಶ್ವವಿದ್ಯಾನಿಲಯದ ಬಿ ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ಎಸ್ಎಸ್ ಕಾರ್ಯಕ್ರಮಕ್ಕಾಗಿ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹುಲುಕುಡಿ ವೀರಭದ್ರ ಸ್ವಾಮಿ ದೇವಸ್ಥಾನದ ಬಳಿ ಬೀಡುಬಿಟ್ಟಿದ್ದಾರೆ.
ಇಂದು ಈ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮದ ಅಡಿಯಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಸಮಗ್ರ ಪರಿಚಯವನ್ನು ಮಾಡಿಕೊಡಲಾಗಿದೆ.
ಅಲ್ಲದೆ ಇದೇ ವೇಳೆ ಪೊಲೀಸರು ಏಕೆ ಬೇಕು ಮತ್ತು ಭಾರತದ ಕೃಷಿಯನ್ನು ಅಭಿವೃದ್ಧಿಪಡಿಸಲು ಬಿ ಟೆಕ್ ವಿದ್ಯಾರ್ಥಿಗಳಾಗಿ ಏನು ಮಾಡುತ್ತೀರಾ..? ಎಂಬ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಡಾ.ಎಂಬಿ ನವೀನ್ ಕುಮಾರ್, ‘ಪೊಲೀಸರು ಜನಸ್ನೇಹಿಗಳಾಗಿ ಸದಾ ಸಾರ್ವಜನಿಕರ ಆಸ್ತಿಪಾಸಿಗಳ ರಕ್ಷಣೆಗಾಗಿ ಶ್ರಮಿಸುತ್ತಾರೆ. ಅಪರಾಧಗಳ ತಡೆಗೆ ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.
ಪೊಲೀಸರಿಂದ ಮಾತ್ರ ಅಪರಾಧಗಳ ತಡೆ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಮುಖ್ಯ. ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಮೂಹ ತಾತ್ಕಾಲಿಕ ಆಕರ್ಷಣೆ, ಮಾದಕ ವಸ್ತುಗಳಿಗೆ ಬಲಿಯಾಗದೇ ತಮ್ಮ ತಂದೆ ತಾಯಿಗಳ ಆಶಯದಂತೆ ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಬಂಧ ಸ್ಪರ್ಧೆಯ ವಿಜೇತರು
ಪ್ರಥಮ ಬಹುಮಾನ: ಸಹನ.ಸಿ.ಪಿ., ಯೋಗಿತ.ಇ.
ದ್ವಿತೀಯ ಬಹುಮಾನ; ಮುಸ್ಕಾನ್ ಸೈಯಿದ್, ಪ್ರೀತಿ ಪಾಟೀಲ್.
ತೃತಿಯ ಬಹುಮಾನ; ಕೀರ್ತಿ ಬನ್ನಿಗೋಳ್, ಸ್ಪಂದನ, ರಮ್ಯ ನಾಯ್ಕ್, ಹರ್ಷ ಜಿ ತೋಳೂರ್.
ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು.
ಈ ವೇಳೆ ಎನ್ಎಸ್ಎಸ್ ಕೋ ಆರ್ಡಿನೇಟರ್ ಡಾ.ಜಯಶ್ರೀ, ಡಾ.ಕೃಷ್ಣಮಾ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….