ಬೆಂಗಳೂರು, (ಆಗಸ್ಟ್ 28); ಚಿತ್ರ ನಟ ದರ್ಶನ್ ಪ್ರಕರಣದ ಕುರಿತು ಕೆಲ ಖಾಸಗಿ ಸುದ್ದಿ ವಾಹಿನಿಗಳ ಅತಿರೇಕದ ವರ್ತನೆಗೆ ಸಾರ್ವಜನಿಕರು ಕೆರಳಿರುವಂತೆಯೇ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಬೇಸರ ವ್ಯಕ್ತಪಡಿಸಿದ್ದು, ದರ್ಶನ್ ಪ್ರಕರಣ ಬಿಟ್ ಬೇರೆ ಇಲ್ವೇನ್ರೀ ಎಂದು ವರದಿಗಾರರನ್ನು ಗದರಿದ್ದಾರೆ.
ಇಂದು ಸ್ವಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಪ್ರಕರಣವನ್ನು ಜೈಲು ಅಧಿಕಾರಿಗಳಿಗೆ ಬಿಟ್ಟು ಬಿಡಲಾಗಿದ್ದು, ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದರು.
ಈ ವೇಳೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ ಅಲ್ಲಿನ ಉಸ್ತುವಾರಿ ಸಚಿವರು ಜಮೀರ್ ಅಹಮದ್ ಖಾನ್ ಎಂದು ಚರ್ಚೆ ನಡಿತಾ ಇದೆ ಎಂದು ಪ್ರಶ್ನಿಸಲು ಮುಂದಾದ ವರದಿಗಾರನ ಪ್ರಶ್ನೆಯನ್ನು ತುಂಡರಿಸಿದ ಪರಮೇಶ್ವರ್, ಅದ್ ಬಿಟ್ ಬೇರೆ ಏನಾದ್ರೂ ಕೇಳ್ರಪ್ಪ, ದರ್ಶನ್ ಬಿಟ್ ಬೇರೆ ಏನೂ ಇಲ್ವೇನ್ರೀ..? ಎಂದು ಗದರಿದರು.
ಈ ವೇಳೆ ಅದೇ ಲೀಡಿಂಗ್ ಸ್ಟೋರಿ ಸಾರ್ ಎಂದು ಸುದ್ದಿವಾಹಿನಿ ಪತ್ರಕರ್ತ ರಾಗ ಹೇಳೆದಿದ್ದಕ್ಕೆ.. ಅದೇ ಆಯ್ತಲ್ಲ ವಾರ ಹೊಡೆದಿದ್ದೀರಿ, ಇನ್ನೇಷ್ಟು ದಿನ ಹೊಡೆಯಬೇಕು ಅಂತಾ ಇದ್ದೀರಿ ಎಂದು ಪರಮೇಶ್ವರ್ ಅವರು ಸುದ್ದಿವಾಹಿನಿಗಳನ್ನು ನಗುತ್ತಲೇ ಲೇವಡಿ ಮಾಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….