ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿ ಕಣಕ್ಕಿಳಿಯುತ್ತಾರೆ: ಬಿಜೆಪಿ-ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಮಹತ್ವದ ಸೂಚನೆ..!

ಚನ್ನಪಟ್ಟಣ, (ಆಗಸ್ಟ್.29): ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರನು ಒಂದು ಇಲ್ಲಿಯವರೆಗೂ ಕೂಡ ಚುನಾವಣೆಯ ದಿನಾಂಕ ನಿಗದಿ ಆಗಿಲ್ಲ.ಸದ್ಯ ಉಪ ಚುನಾವಣೆ ಎದುರಾಗಿರೋ ಹಿನ್ನಲೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ  ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಗುರುವಾರ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು;ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಪಕ್ಷವು ಕೂಡಾ NDA ಕೂಟದ ಒಂದು ಭಾಗವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಗೆಲ್ಲಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು: ಇನ್ನು ದೆಹಲಿಯಲ್ಲಿ ಸಿ.ಪಿ ಯೋಗೇಶ್ವರ್ ಪರ ಬಿಜೆಪಿ ನಾಯಕರ ಬ್ಯಾಟಿಂಗ್ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿಯ ಕೆಲ ರಾಜ್ಯನಾಯಕರು ಅವರವರ ಅಭಿಪ್ರಾಯ ತಿಳಿಸಿದ್ದಾರೆ.ಅದನ್ನ ನಾವು ವಿರೋಧ ಮಾಡಲ್ಲ, ಸ್ವಾಗತ ಮಾಡ್ತೇವೆ.ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು ಹಾಗೂ ನಮ್ಮ ನಾಯಕರಾದ ಕುಮಾರಸ್ವಾಮಿ ತೀರ್ಮಾನ ಮಾಡಿ.ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತೆ.ಯಾರೇ ಅಭ್ಯರ್ಥಿ ಆದರೂ ಎರಡೂ ಪಕ್ಷಗಳು ಬೆಂಬಲ ಕೊಡಬೇಕು.ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು.ಯಾರೇ ಅಭ್ಯರ್ಥಿ ಆದ್ರೂ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡ್ತಾರೆ ಎಂದು ತಿಳಿಸಿದರು.

ಮೈತ್ರಿ ಪಕ್ಷದ ಗೆಲುವು ಖಚಿತ: ಚನ್ನಪಟ್ಟಣ ಕ್ಷೇತ್ರ ಕಬ್ಜಗೆ ಡಿಕೆ ಶಿವಕುಮಾರ್ ಫ್ಲಾನ್ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು‌, ಬೆಂಗಳೂರು ಗ್ರಾಮಾಂತರದಲ್ಲಿ ಅವರ ಸಹೋದರ ಮೂರು ಬಾರಿ ಸಂಸದರಾಗಿದ್ರು.ಈಗ ಆ ಕ್ಷೇತ್ರವನ್ನೇ ಕಳೆದುಕೊಂಡಿದ್ದಾರೆ.

ಐದು ಕ್ಷೇತ್ರಗಳಲ್ಲಿ ಮಿತ್ರ ಪಕ್ಷಕ್ಕೆ ಹೆಚ್ಚು‌ ಲೀಡ್ ಸಿಕ್ಕಿದೆ.NDA ಪಕ್ಷಕ್ಕೆ ಜನರ ಬೆಂಬಲ, ಆಶೀರ್ವಾದ ಇರೋದು ಸ್ಪಷ್ಟವಾಗಿದೆ.ಕನಕಪುರ ಚನ್ನಪಟ್ಟಣದಲ್ಲೂ ದೊಡ್ಡ ಮಟ್ಟದ ಲೀಡ್ ಸಿಕ್ಕಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಗೆಲುವು ಖಚಿತ ಎಂದು ಸ್ಪಷ್ಟನೆ ನೀಡಿದ್ದಾರೆ.

ಕ್ಷೇತ್ರದ ಜನ ತಕ್ಕ ಉತ್ತರ ಕೊಡ್ತಾರೆ: ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಉದ್ಯೋಗ ಮೇಳ ಮತ್ತು ಧ್ವಜಾರೋಹಣ ಮಾಡಿ ಕ್ಷೇತ್ರದ ಜನರ ಓಲೈಕೆ ವಿಚಾರಕ್ಕೆ ಮಾತನಾಡಿದ ಅವರು ಸಾಮಾನ್ಯವಾಗಿ ಪ್ರೋಟೊಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಬೇಕು.ಆದರೆ ರಾಜ್ಯದ ಡಿಸಿಎಂ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಅದೇನೋ 20 ಜನ ಪಿಡಿಓ ಬದಲಾವಣೆ ಮಾಡ್ತೀವಿ, ಸೈಟ್ ಕೊಡ್ತೀವಿ ಅಂತ ಆಶ್ವಾಸನೆ ಕೊಡ್ತಿದ್ದಾರೆ.ಆದರೆ ರಾಜ್ಯದ ಜನತೆಗೆ ಕೊಟ್ಟಿರುವ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲ.ಚನ್ನಪಟ್ಟಣಕ್ಕೂ ಅದೇ ಸ್ಥಿತಿ ಬರುತ್ತೆ.ಇದಕ್ಕೆ ದೊಡ್ಡಮಟ್ಟದ ಪ್ರಚಾರ ಕೊಡೊ ಅಗತ್ಯ ಇಲ್ಲ ಎಂದರು.

ಸರ್ಕಾರದ ಸಾಕಷ್ಟು ಮಂತ್ರಿಗಳು ಪಂಚಾಯ್ತಿ ಮಟ್ಟಕ್ಕೆ ಬರ್ತಿದ್ದಾರೆ. ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆ ಗಮನಸೆಳೆಯಲಿದೆ.ಏನೇ ಇದ್ರೂ ಅಂತಿಮವಾಗಿ ತೀರ್ಮಾನ ಮಾಡೋದು ಕ್ಷೇತ್ರದ ಜನ. ಅವರೇ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು

ಮುಡಾ ಹಗರಣ ಮುಚ್ಚಾಕಲು ಕಾಂಗ್ರೆಸ್ ಷಡ್ಯಂತ್ರ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರುವ ಮೂಲಕ ಮುಡಾ ಹಗರಣ ಮುಚ್ಚಿ ಹಾಕಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ರಾಜಭವನ ಚಲೋ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಕಾಂಗ್ರೆಸ್ ಮುಡಾ ಹಗರಣವನ್ನು ಮುಚ್ಚಿ ಹಾಕುವ ತಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಆ.31 ರಂದು ಕಾಂಗ್ರೆಸ್‌ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ. ಕುಮಾರಸ್ವಾಮಿ ಅವರು ವೆಂಕಟೇಶ್ವರ ಮೈನಿಂಗ್ ವಿಚಾರವಾಗಿ ಆರೋಪ ಮಾಡ್ತಿದ್ದಾರೆ. ಆದರೆ ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಎಸ್‌ಐಟಿ ಲೋಕಾಯುಕ್ತಗೆ ವರದಿ ಕೊಡುವಂತೆ ಕೋರ್ಟ್ ಸೂಚಿಸಿದ್ದರೂ ವರದಿ ಕೊಟ್ಟಿಲ್ಲ. ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳೋದು ಅನಗತ್ಯ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!