ಬೆಂಗಳೂರು, (ಆಗಸ್ಟ್.30): ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಲಭ್ಯವಿರುವ ನಾಟಿ ಹಸುವಿನ ಹಾಲಿನಿಂದ ತುಪ್ಪ ತಯಾರಿಸಿ ‘ನಂದಿನಿ ದೇಸಿ ಹಸುವಿನ ತುಪ್ಪ’ವನ್ನು ಕೆಎಂಎಫ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮೊದಲ ಹಂತವಾಗಿ ನಂದಿನಿ ದೇಸಿ ಹಸುವಿನ ತುಪ್ಪ ಇ ಕಾಮರ್ಸ್ ಅಥವಾ ಆನ್ಲೈನ್ ಮೂಲಕ ಮಾರಾಟವಾಗಲಿದೆ.
ಪ್ರಸ್ತುತ ದೇಸಿ ಹಸುವಿನ ತುಪ್ಪ 200 ಮಿ.ಲಿ. ಮತ್ತು 500 ಮಿ.ಲಿ. ಬಾಟಲ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 500 ಮಿ.ಲಿ. ಬಾಟಲ್‌ಗೆ 900 ರು.ಗಳು ಮತ್ತು 200 ಮಿಲಿ ಬಾಟಲ್ ಗೆ 400 ರು. ದರನಿಗದಿ ಮಾಡಲಾಗಿದೆ.
ದೇಸಿ ಹಸುಗಳಾದ ಶಾಹೀವಾಲ್, ಗಿರ್, ಅಮೃತ್ ಮಹಲ್ ಮತ್ತು ಹಳ್ಳಿಕಾರ್ ತಳಿಗಳಹಾಲು ಬಳಸಲಾಗುತ್ತದೆ. ಈಹಾಲಿನಲ್ಲಿ ಸರಾಸರಿಶೇ.4.8 ಜಿಡ್ಡಿನ ಅಂಶವಿರುತ್ತದೆ.
ದೇಸಿ ತಳಿಯ ಪ್ರತಿ ಲೀ. ಹಾಲಿಗೆ ರೂ.57.85 ದರ ನಿಗದಿಪಡಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….