ಬೆಂಗಳೂರು, (ಆಗಸ್ಟ್ 30); ಒಡಹುಟ್ಟಿದ ತಂಗಿ ಮನೆಯಲ್ಲೇ ಕಳ್ಳತನ ಮಾಡಿದ್ದ ಅಕ್ಕನನ್ನು ಬಂಧಿಸಿರುವ ಆಡುಗೋಡಿ ಠಾಣೆ ಪೊಲೀಸರು 5.50 ಲಕ್ಷ ರೂ. ಬೆಲೆ ಬಾಳುವ 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡ ತೋಗೂರು ನಿವಾಸಿ ಶಶಿಕಲಾ(31) ಬಂಧಿತ ಸಹೋದರಿ. ಈಕೆ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು.
ಶಶಿಕಲಾ ಅವರ ತಂಗಿಯ ಗಂಡನ ಅನಾರೋಗ್ಯದ ಕಾರಣ ತಮ್ಮ ಮನೆಗೆ ಬೀಗ ಹಾಕಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅಕ್ಕನ ಮನೆಗೆ ವಿಶ್ರಾಂತಿ ಪಡೆಯಲು ಬಂದಿದ್ದರು. ಆ ವೇಳೆ ಮಾತ್ರೆ ತರಲು ಶಶಿಕಲಾ ಅವರಿಗೆ ಇವರ ದ್ವಿಚಕ್ರ ವಾಹನವನ್ನು ಕೊಟ್ಟಿದ್ದರು.
ಆ ವೇಳೆ ಶಶಿಕಲಾ ದ್ವಿಚಕ್ರ ವಾಹನ ಕೀ ಜೊತೆಗೆ ತಂಗಿಯ ಮನೆಯ ಕೀಯನ್ನು ನೋಡಿ ಬೊಮ್ಮನಹಳ್ಳಿ ಹತ್ತಿರದ ಹೊಸರೋಡ್‌ನಲ್ಲಿ ವಾಸವಿರುವ ಆಕೆಯ ದೊಡ್ಡಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಮನೆಯ ಸ್ವಲ್ಪದೂರದಲ್ಲಿ ದ್ವಿ-ಚಕ್ರ ವಾಹನ ನಿಲ್ಲಸಿ, ದೊಡ್ಡಮ್ಮಳಿಗೆ ಅಲ್ಲೇ ಇರುವಂತೆ ತಿಳಿಸಿ, ಔಷಧಿಯನ್ನುತೆಗೆದುಕೊಂಡು ಬರುತ್ತೇನೆಂದು ಹೇಳಿದ್ದಾಳೆ.
ನಂತರ ತಂಗಿ ಮನೆಗೆ ಬಂದು ಮನೆಯ ಬಾಗಿಲನ್ನು ತೆಗೆದು ಒಳ ಪ್ರವೇಶಿಸಿ, ಕೊಠಡಿಯ ಬೀರುವಿನ ಲಾಕರ್‌ನ್ನು ಮುರಿದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ವಾಪಸ್ಸಾಗಿದ್ದಳು.
ಕೆಲ ದಿನಗಳ ಬಳಿಕ ಶಶಿಕಲಾ ತಂಗಿ ತನ್ನ ಮನೆಗೆ ವಾಪಾಸ್ಸಾದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಿಸಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ದೂರುದಾರರ ಅಕ್ಕನೇ ಮನೆಗೆ ಬಂದು ಹೋಗಿರುವುದು ಗೊತ್ತಾಗಿದೆ. ನಂತರ ಅಕ್ಕನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಂಗಿ ಮನೆಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಈ ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ ಶಿಕಾರಿಪಾಳ್ಯ ಮತ್ತು ಹೋಸರೋಡ್‌ನ ಜ್ಯೂವೆಲರಿ ಶಾಪ್‌ಗಳಲ್ಲಿ ಅಡಮಾನವಿಟ್ಟಿದ್ದ 42 ಗ್ರಾಂತೂಕದ ಚಿನ್ನಾಭರಣವನ್ನು ಹಾಗೂ ವಾಸವಿರುವ ಮನೆಯಿಂದ 32 ಗ್ರಾಂ ತೂಕದ ಚಿನ್ನಾಭರಣ ಮತ್ತು 354 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ಸ್ ಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….