ಕೊರಟಗೆರೆ, (ಆಗಸ್ಟ್ 31); ದಿನಪತ್ರಿಕೆ ವರದಿಗಾರ ಹಾಗೂ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಎಲ್. ಸುರೇಶ್ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತುಮಕೂರಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹಲವು ಪ್ರಶಸ್ತಿ ಭಾಜನರಾಗಿದ್ದು, ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಪತ್ರಕರ್ತರು, ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
ಕೊರಟಗೆರೆಯಲ್ಲೂ ಸಂತಾಪ: ಜಿ.ಎಲ್.ಸುರೇಶ್ ವರದಿಗಾರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ತಾಲೂಕು ಅಧ್ಯಕ್ಷ ಕೆ.ವಿ.ಪುರಷೋತ್ತಮ್ ಹೇಳಿದರು. ಪಟ್ಟಣದ ಕಾನಿಪ ಸಂಘದ ಕಚೇರಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ ಜಿ.ಎಲ್.ಸುರೇಶ್ ನಿಧನರಾದ ಹಿನ್ನೆಲೆ ಮೌನಾಚರಣೆ ಮಾಡಿ ಮಾತನಾಡಿದರು.
ಅನಾರೋಗ್ಯದ ನಡುವೆಯು ಪ್ರತಿದಿನ ಕಾಯಕವನ್ನು ಮುಂದುವೆರಸಿಕೊಂಡು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಪತ್ರಕರ್ತ ಎನ್.ಪದ್ಮನಾಬ್ ಮಾತನಾಡಿ, ಸುರೇಶ್ ಪ್ರತಿದಿನ ಪತ್ರಿಕೆ ವಿತರಣೆ ಜೊತೆಗೆ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ನಾವು ಮುಂದುವರೆಸಿಕೊಂಡು ಹೋಗ ಬೇಕಿದೆ ಎಂದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪತ್ರಕರ್ತ ಜಿ.ಎಲ್.ಸುರೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬದವರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಈ ವೇಳೆ ನಾಗರಾಜು, ಕೆ.ಬಿ. ಲೋಕೇಶ್. ಕೆ.ಎನ್.ಸತೀಶ್, ರಮೇಶ್, ಹರೀಶ್, ಲಕ್ಷ್ಮೀಶ್, ವಿಜಯ್ ಶಂಕರ್, ಮಂಜುನಾಥ್, ದೇವರಾಜು, ಸಿದ್ದರಾಜು, ನರಸಿಂಹ ಮೂರ್ತಿ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….