ಬೆಳಗಾವಿ, (ಸೆ.02); ಬಡವರಿಗಾಗಿ ಜಾರಿಗೆ ತಂದ ಯೋಜನೆಯನ್ನು ಬಿಟ್ಟಿ ಯೋಜನೆ, ರಾಜ್ಯ ಆರ್ಥಿಕವಾಗಿ ದಿವಾಳಿ ಯಾಗುತ್ತಿದೆ ಎಂದು ಬೊಬ್ಹೆಯಿಟ್ಟ ವಿರೋಧ ಪಕ್ಷದ ಅಪಸ್ವರದ ನಡುವೆಯೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಚಾಲ್ತಿಯಲ್ಲಿದ್ದು, ಹಲವಾರು ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಗ್ಯಾರಂಟಿಯಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಯಿಂದ ಬಂದಂತಹ ಹಣದಿಂದ ಬಡ ಕುಟುಂಬದ ಗೃಹಿಣಿಯರು ಟಿವಿ, ಫ್ರಿಡ್ಜ್ ಖರೀದಿಸಿದರೆ, ಇತ್ತೀಚೆಗೆ ಮಹಿಳೆಯೋರ್ವರು ಸೊಸೆಗೆ ಅಂಗಡಿ ಇಟ್ಟುಕೊಟ್ಟಿದ್ದ ಬೆಳವಣಿಗೆಯ ನಡುವೆ ಮಹಿಳೆಯೊಬ್ಬರು ತಮ್ಮ ಪತಿಗೆ ಕಣ್ಣಿನ ಆಪರೇಷನ್ ಮಾಡಿಸಿ, ಬೆಳಕಾಗಿದ್ದಾರೆ.
ಬೆಳಗಾವಿ ನಗರದ ಅನಗೋಳದ ನಿವಾಸಿ ಅನಿತಾ ಬಡಿಗೇರ ಗೃಹಲಕ್ಷ್ಮೀ ಯೋಜನೆಯಿಂದ ಬಂದ ದುಡ್ಡಿನಿಂದ ತನ್ನ ಪತಿ ಚಂದ್ರಶೇಖರ ಅವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಉಪಯೋಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
ಚಂದ್ರಶೇಖರ ಅವರು ಬಹಳ ದಿನಗಳಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದರು. ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಬರುವ 2 ಸಾವಿರ ಹಣವನ್ನು ಕೂಡಿಟ್ಟು ಆಪರೇಷನ್ ಮಾಡಿಸಿದ್ದಾರೆ.
ಒಟ್ಟೂ 18 ಸಾವಿರ ಕಣ್ಣಿನ ಅಪರೇಷನ್ ಖರ್ಚಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳು ಬಡ ಜನರಿಗೆ ನೆರವಾಗಿದೆ. ಕಾಂಗ್ರೆಸ್ ಸರ್ಕಾರ 10 ವರ್ಷ ಪೂರೈಸಲಿ ಎಂದು ಅನಿತಾ ವಿಡಿಯೋ ಮೂಲಕ ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….