ಬ್ಯಾಂಕಗಳಿಂದ ರೂ.10 ಲಕ್ಷ ವರೆಗೆ ಬೆಳೆ ಸಾಲ ನೀಡಲು ಅವಕಾಶವಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ (ಸೆ.14): ಈಗ ರೈತರು ಸಂಕಷ್ಟದಲ್ಲಿದ್ದೂ ಅನಗತ್ಯವಾಗಿ ಕೆಲವು ಬ್ಯಾಂಕ್ ಗಳು ಬೆಳೆಸಾಲ ನೀಡಲು ರೈತರಿಗೆ ಸಿಬಿಲ್ ರೇಟ್ ಕಡ್ಡಾಯ ಮಾಡುತ್ತಿವೆ. ಇದರಿಂದ ರೈತರಿಗೆ ಮತ್ತು ರೈತರು ಉತ್ಪಾದಿಸುವ ಆಹಾರದ ಮೇಲೆ ನೇರ ಪ್ರಭಾವ ಬೀರುತ್ತದೆ. ಬ್ಯಾಂಕರ್ಸ್ ಗಳು ಅನ್ವಯವಾಗದ ಕಾಯ್ದೆ, ನಿಯಮಗಳನ್ನು ಹೇಳಿ ರೈತರಿಗೆ ಬೆಳೆ ಸಾಲ ನೀಡುವಲ್ಲಿ ವಿನಾಕಾರಣ ತೊಂದರೆ ಕೊಡಬಾರದು. ಯಾವುದೇ ತಕರಾರು ಇಲ್ಲದೆ ರೈತರಿಗೆ ರೂ.10 ಲಕ್ಷ ವರೆಗೆ ಬೆಳೆಸಾಲ ನೀಡಲು ಆರ್.ಬಿ.ಐ  ಮಾರ್ಗಸೂಚಿಗಳಿವೆ. ಇದನ್ನು ಬ್ಯಾಕರ್ಸ್ ಗಳು ಪಾಲನೆ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.

ಅವರು ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕೇಂದ್ರ ಸರಕಾರದಿಂದ ಸಮುದಾಯ ಮತ್ತು ವ್ಯಕ್ತಿಗತ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರಕಾರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಬ್ಯಾಂಕಗಳು ನಿಗದಿತ ಗುರಿಗೆ ಅನುಗುಣವಾಗಿ ಸಾಲ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಅವರು ಮಾತನಾಡಿ,  ಕೃಷಿ ಬೆಳೆ ಸಾಲವು ಜೂನ್ 2024 ರ ಅಂತ್ಯಕ್ಕೆ 610.8 ಕೋಟಿ ರೂ. ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 650.34 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಮತ್ತು ಶೇ.106.47 ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ. 

ಕೃಷಿ ಅವಧಿ ಸಾಲವು ಜೂನ್ 2024 ರ ಅಂತ್ಯಕ್ಕೆ 615.66 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 641.57 ಕೋ.ರೂಗಳಷ್ಟು ಸಾಧನೆಯಾಗಿದೆ. ಶೇ. 104.18 ರಷ್ಟು  ತ್ರೈಮಾಸಿಕ ಗುರಿಗೆ ಸಾಧನೆಯಾಗಿದೆ. 

ಸೂಕ್ಷ್ಮ , ಸಣ್ಣ, ಹಾಗೂ ಮಧ್ಯಮ ಉದ್ಯಮಗಳು ಜೂನ್ 2024 ರ ಅಂತ್ಯಕ್ಕೆ 2357.81 ಕೋ.ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 3312.98 ಕೋ.ರೂ.ಗಳಷ್ಟು ಸಾಧನೆಯಾಗಿದೆ. ಶೇ.140.51 ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ.

 ಇತರೆ ಆಧ್ಯತಾ ವಲಯದಲ್ಲಿ ಜೂನ್ 2024 ರ ಅಂತ್ಯಕ್ಕೆ 180.23 ಕೋಟಿ.ರೂ.ಗಳಷ್ಟು  ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 147.8 ಕೋಟಿ.ರೂ. ಗಳಷ್ಟು ಸಾಧನೆಯಾಗಿದೆ. ಮತ್ತು ಶೇ 82.01 ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ. 

ಆಧ್ಯತಾ ರಹಿತಾ ವಲಯದಲ್ಲಿ ಜೂನ್ 2024 ರ ಅಂತ್ಯಕ್ಕೆ 1828.76 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ  ಅಂತ್ಯಕ್ಕೆ 2701.13 ಕೋಟಿ ರೂ.ಗಳಷ್ಟು  ಸಾಧನೆಯಾಗಿದೆ. ಶೇ.147.7 ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ. 

ಒಟ್ಟಾರೆಯಾಗಿ ಜೂನ್ 2024 ರ ಅಂತ್ಯಕ್ಕೆ 5593.26 ಕೋಟಿ ರೂ.ಗಳ ಗುರಿಯನ್ನು ಹೊಂದಿದ್ದು, 2024 ರ ಅಂತ್ಯಕ್ಕೆ 7453.82 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ.133.26 ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಆರ್.ಬಿ.ಐ ಜಿಲ್ಲಾ ಅಗ್ರಣೀಯ ಅಧಿಕಾರಿ ಅರುಣಕುಮಾರ, ಬ್ಯಾಂಕ್ ಆಪ್ ಬರೋಡಾ ದ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಪಾಟೀಲ, ನಬಾರ್ಡ್ ಎಜಿಎಮ್ ಮಯೂರ ಕಾಂಬ್ಳೆ ಅವರು ಮಾತನಾಡಿದರು.

ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ ಪ್ರಭುದೇವ ಎನ್.ಜಿ. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ  ವಿವಿಧ ಬ್ಯಾಂಕ್ ಗಳ ಪ್ರಾದೇಶಿಕ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ರೈತ ಪ್ರತಿನಿಧಿಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–

ರಾಜಕೀಯ

LPG ಸಮಸ್ಯೆಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ; ಪ್ರಲ್ಹಾದ್ ಜೋಶಿ

LPG ಸಮಸ್ಯೆಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ; ಪ್ರಲ್ಹಾದ್ ಜೋಶಿ

ಅಮೆರಿಕ ಮತ್ತು ಇಸ್ರೇಲ್ ಜತೆಗೂಡಿ ಇರಾನ್ ವಿರುದ್ದ ನಡೆಸುತ್ತಿರುವ ಯುದ್ಧ ಸೋಮವಾರ 38ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದ ಕಾರಣವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿ (LPG) ಪೂರೈಕೆ

[ccc_my_favorite_select_button post_id="120766"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆಗಾಗಿ ಮಗನ ಜಗಳ; ತಾಯಿ ಸಾವು..!

ಮದುವೆ (Marriage) ಮಾಡಿಲ್ಲವೆಂದು ಜಗಳ ತಗೆದ ಮಗ (Son) ಸ್ವಂತ ತಾಯಿಯನ್ನೇ (Mother) ಹೊಡೆದು ಕೊಂದಿರುವ (Murder) ಘಟನೆ ವರದಿಯಾಗಿದೆ.

[ccc_my_favorite_select_button post_id="120643"]
ಡಿವೈಡರ್‌ಗೆ ಡಿಕ್ಕಿ.. ಕಾರು ಪಲ್ಟಿ: ಬಾಲಕಿ ಸಾವು

ಡಿವೈಡರ್‌ಗೆ ಡಿಕ್ಕಿ.. ಕಾರು ಪಲ್ಟಿ: ಬಾಲಕಿ ಸಾವು

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ (Accident) ಪಲ್ಟಿಯಾದ ಪರಿಣಾಮ 9 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ.

[ccc_my_favorite_select_button post_id="120735"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]