ಶ್ರಿನಗರ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ (J&K Assembly) ನಡೆಯುತ್ತಿರುವ ಗದ್ದಲ ತೀವ್ರ ಸ್ವರೂಪ ಪಡೆದಿದ್ದು ಇಂದು ಕೋಲಾಹಲ ಸೃಷ್ಟಿಯಾಗಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವುದರ ವಿರುದ್ಧ ಪ್ರತಿಭಟನೆಯ ವೇಳೆ ಬಾವಿಗೆ ನುಗ್ಗಿದ ಪ್ರತಿಪಕ್ಷ ಸದಸ್ಯರನ್ನು ಹೊರಹಾಕಲು ಸ್ಪೀಕರ್ ಅಬ್ದುಲ್ ರಹಿಮ್ ರಾಥರ್ ಸೂಚಿಸಿದ್ದಾರೆ.
ಈ ವೇಳೆ ಬಿಜೆಪಿ ಶಾಸಕರು ಮತ್ತು ಮಾರ್ಷಲ್‌ಗಳ ನಡುವೆ ವಾಗ್ವಾದ ನಡೆದಿದ್ದು, ವಿಧಾನಸಭಾ ಅಧಿವೇಶನವನ್ನು ಬಿಜೆಪಿ ಶಾಸಕರು ಅಕ್ಷರಶಃ ಸಂತೆ ಮಾರುಕಟ್ಟೆಯನ್ನಾಗಿ ಮಾರ್ಪಾಡು ಮಾಡಿದ್ದಾರೆ.
ಇಂದು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಮೊನ್ನೆ ಅಂಗೀಕರಿಸಿದ ನಿರ್ಣಯದ ವಿರುದ್ಧ ಪ್ರತಿಭಟಿಸಿದ್ದರಿಂದ ಗದ್ದಲ ಉಂಟಾಯಿತು.
ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಕೆರಳಿದ ಬಿಜೆಪಿ ಶಾಸಕರು ಕೂಡ ಸದನದ ಬಾವಿಗೆ ಹಾರಿ ವಿವಿಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
#WATCH | Srinagar | By orders of the J&K Assembly Speaker Abdul Rahim Rather, BJP MLAs entering the well of the House marshalled out pic.twitter.com/yHbRS1VEsw
— ANI (@ANI) November 8, 2024
ಅಂತಿಮವಾಗಿ ಕಲಾಪದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿ ಸ್ಪೀಕರ್ ಮಾರ್ಷಲ್ ಗಳನ್ನ ಕರೆದು, ನಿಯಮ ಉಲ್ಲಂಘಿಸಿದ ಸದಸ್ಯರನ್ನ ಹೊರದಬ್ಬಲು ಸೂಚಿಸಿದರು.
ಜಮ್ಮು ಕಾಶ್ಮೀರ ಚುನಾವಣೆ ನಂತರ ಮೊದಲ ಕಲಾಪ ಆರಂಭ ಆದಾಗಿನಿಂದಲೂ ವಿಧಾನಸಭೆಯಲ್ಲಿ ಪ್ರತಿಭಟನೆ, ಆರೋಪ ಪ್ರತ್ಯಾರೋಪ ಜೋರಾಗಿದ್ದು, ಕಲಾಪ ನಡೆಸಲು ತೀವ್ರ ತೊಂದರೆ ಆಗುತ್ತಿದೆ.