ಸಂಡೂರು: ಪ್ರೀತಿಸಿದ ಯುವತಿ ಸಿಗದ ಕಾರಣಕ್ಕೆ ಮನನೊಂದು ಯುವಕನೊಬ್ಬ ಸಂಡೂರಿನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ಹೊಸಪೇಟೆಯ ಪಾಪಿನಾಯಕನಹಳ್ಳಿಯ ಬಾಳೆಹಣ್ಣಿನ ವ್ಯಾಪಾರಿ ನವೀನ್ ಕುಮಾರ್ ಮೃತ ಯುವಕ.
ಯುವತಿ ಕುಟುಂಬಸ್ಥರ ಮೇಲೆ ಹಲ್ಲೆ: ನವೀನ್ ಸಂಡೂರಿನ ಶಿಕ್ಷಕರ ಕಾಲೋನಿಯ ಯುವತಿಯೊಬ್ಬಳನ್ನು ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದ. ಆಕೆಗೆ ಬಲವಂತವಾಗಿ ತಾಳಿಯನ್ನೂ ಕಟ್ಟಿದ್ದ ಎನ್ನಲಾಗಿದೆ.
ಶುಕ್ರವಾರ ಯುವತಿಯ ಮನೆಯ ಬಳಿಗೆ ಬಂದ ನವೀನ್, ಕುಟುಂಬಸ್ಥರೊಂದಿಗೆ ಜಗಳ ತೆಗೆದಿದ್ದ. ಯುವತಿಯನ್ನು ತನ್ನೊಂದಿಗೆ ಕಳುಹಿಸುವಂತೆ ಒತ್ತಾಯಿಸಿದ್ದ. ಈ ವೇಳೆ, ಮಾತಿಗೆ ಮಾತು ಬೆಳೆದು ಯುವತಿ, ಆಕೆಯ ತಾಯಿ ಮತ್ತು ಸೋದರನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ.
ಯುವತಿಯ ಸೋದರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಸಂಡೂರಿನ ಯಶವಂತನಗರದ ಗಂಡಿಮಲಿಯಮ್ಮ ದೇವಸ್ಥಾನದ ಹತ್ತಿರ ಕಾರು ಬಿಟ್ಟು ನವೀನ್ ಪರಾರಿಯಾಗಿದ್ದ.
ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ, ಶನಿವಾರ ರೈಲ್ವೆ ಹಳಿಯ ಮೇಲೆ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ನವೀನ್ ಮೃತದೇಹ ದೇಹ ಪತ್ತೆಯಾಗಿದೆ.