ದೊಡ್ಡಬಳ್ಳಾಪುರ(Doddaballapura): ತಾಲ್ಲೂಕಿನ ಬೈಯ್ಯಪ್ಪನಹಳ್ಳಿ ಗ್ರಾಮದ ಮಂಗಳಮ್ಮ ಅವರ ತೋಟದ ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಚಿರತೆ ಬೇಟೆಯಾಡಲು ವಿಫಲಪ್ರಯತ್ನ ನಡೆಸಿರುವ ವಿಡಿಯೋ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ತಡ ರಾತ್ರಿ ತೋಟದ ಮನೆಯ ಬಳಿ ಬಂದಿರುವ ಚಿರತೆ ನಾಯಿಗಳನ್ನು ಹಿಡಿಯಲು ಕಾಲುವೆಯಲ್ಲಿ ಅವಿತು ಹೊಂಚು ಹಾಕಿದೆ. ಇದನ್ನು ಗಮನಿಸಿದ ಎರಡು ನಾಯಿಗಳು ಜೋರಾಗಿ ಬೊಗಳುವ ಮೂಲಕ ಗಲಾಟೆ ಹೆಚ್ಚಾಗುತ್ತಲೇ ಹಾಗೂ ತೋಟದಲ್ಲಿ ಅಳವಡಿಸಿರುವ ಸೋಲಾರ್ ಸಿ.ಸಿ. ಟಿವಿ ಕ್ಯಾಮರ ಮುಂದೆ ರಾತ್ರಿ ವೇಳೆ ಯಾವುದಾದರು ಪ್ರಾಣಿ, ಮನುಷ್ಯ ಬಂದರೆ ಬೆಳಕು ಬರುತ್ತದೆ. ಈ ರೀತಿಯ ಬೆಳಕು ಬಂದಿರುವುದರಿಂದಲು ಸಹ ಚಿರತೆ ಗಾಬರಿಗೊಂಡ ಓಡಿ ಹೋಗಿದೆ.
ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಸಿಕೊಳ್ಳುತ್ತಲೇ ಇತ್ತು. ಆದರೆ ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ಮಂಗಳಮ್ಮ ಅವರ ತೋಟದ ಮನೆಯಲ್ಲಿನ ಸಿ.ಸಿ.ಟಿವಿ ಕ್ಯಾಮಾರದಲ್ಲಿ ಚಿರತೆ ಒಡಾಡುತ್ತಿರುವ ದೃಶ್ಯ ಸೆರೆಯಾದರೆ ನಂತರ ರೈತರು ಸಂಜೆ ವೇಳೆ ತೋಟಗಳ ಕಡೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.