ಬೆಂಗಳೂರು: ಫೇಸ್‌ಬುಕ್ ಲೈವ್ ವಿಡಿಯೋ ಮೂಲಕ ಮಾತನಾಡಿ ವೈರಲ್ ಆಗುವ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಜಗದೀಶ್ ಅವರ ಮೇಲೆ ಜನವರಿ 24ರ ಸಂಜೆ ಹಲ್ಲೆಯಾಗಿದೆ.
ಜನವರಿ 23ರಂದು ಅವರು ಕೊಡಿಗೇಹಳ್ಳಿಯ ರಸ್ತೆಯೊಂದರಲ್ಲಿ ಅಣ್ಣಮ್ಮ ದೇವಿ ಉತ್ಸವ ಕಾರಣಕ್ಕಾಗಿಯೇ ರಸ್ತೆ ಬಂದ್ ಮಾಡಿದ್ದರ ಬಗ್ಗೆ ಪ್ರಶ್ನಿಸಿದ್ದರು. ಆಗ ಗಲಾಟೆಯಾಗಿ ಜಗದೀಶ್ ಸ್ಥಳೀಯರೊಂದಿಗೆ ಹೊಡೆದಿದ್ದರು.
ಇದರ ಬೆನ್ನಲ್ಲೇ, ಜ. 24ರಂದು ಸಂಜೆ ಜಗದೀಶ್ ಅವರು ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಅವರ ಕಾರನ್ನು ನಿಲ್ಲಿಸಿದ ಜನ ಅವರ ಮೇಲೆ ಹಲ್ಲೆ, ಮಾಡಿ ಅವರ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೊದಲು ಅವರ ಕಾರು ನಿಲ್ಲಿಸಿ ವಾಗ್ವಾದಕ್ಕಿಳಿದ ಅವರು ಜಗದೀಶ್ ಅವರು ಕಾರಿನಿಂದ ಕೆಳಗಿಳಿದು ಮಾತನಾಡುವಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಇದ್ದರೆಂದು ಹೇಳಲಾಗಿದೆ.
Bigboss fame Lawyer Jagadish was attacked by few miscreants. #Bbk11 pic.twitter.com/Z2pvgq6BGV
— 👑Che_ಕೃಷ್ಣ🇮🇳💛❤️ (@ChekrishnaCk) January 24, 2025
ಹಲ್ಲೆ ನಡೆಸಿದ ನಂತರ ಅವರ ಕಾರನ್ನು ಜನರು ಪುಡಿಗಟ್ಟಿದ್ದಾರೆ. ಅಷ್ಟರಲ್ಲಿ ಜಗದೀಶ್ ಅವರ ಗನ್ ಮ್ಯಾನ್ ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗುತ್ತಿದ್ದು, ನಂತರ ಗುಂಪು ಚದುರಿಹೋಗಿದೆ ಎಂದು ವರದಿಯಾಗಿದೆ.
ಆನಂತರ, ಗನ್ ಮ್ಯಾನ್ ಅವರು ಜಗದೀಶ್ ರನ್ನು ಕರದುಕೊಂಡು ಸಹಕಾರ ನಗರದಲ್ಲಿರುವ ಜಗದೀಶ್ ಅವರ ನಿವಾಸಕ್ಕೆ ತಲುಪಿಸಿದ್ದಾರೆ. ಆದರೆ, ಗಲಾಟೆ ನಡೆಸಿದ ವ್ಯಕ್ತಿಗಳು ಅವರ ಮನೆಗೂ ಹೋಗಿ ಅಲ್ಲಿಯೂ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಜಗದೀಶ್ ಸಿಎಂ ಸಿದ್ದರಾಮಯ್ಯ ಅವರನ್ನು ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆಂದು ವರದಿಯಾಗಿದೆ.