ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದ ದ್ವಾದಶಿ ಜನವರಿ.26.2025: ಇಂದು ವಿಶೇಷವಾಗಿ ಮಹಾಕಾಳಿ ಅಮ್ಮನವರನ್ನು ಆರಾಧನೆ ಮಾಡಿದರೆ ದಿನ ಅತ್ಯಂತ ಶುಭವಾಗುತ್ತದೆ. Astrology
ಮೇಷ ರಾಶಿ: ಆರೋಗ್ಯದಲ್ಲಿ ಚಿಂತೆ, ಕಿರಿಕಿರಿ, ಎಲ್ಲವನ್ನು ಸಾಧಿಸಬೇಕೆಂಬ ಛಲ, ಇದರಿಂದ ಸ್ವಲ್ಪ ತೊಂದರೆಗೊಳಗಾಗುತ್ತೀರಿ, ಎಚ್ಚರಿಕೆಯಿಂದ ವರ್ತಿಸಿ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಪಾರಾಯಣ ಮಾಡಿ)
ವೃಷಭ ರಾಶಿ: ಎಲ್ಲಾ ಕಾರ್ಯವು ಸಹ ಸಾಧ್ಯ, ಹಾಗಾಗಿ ಸಾಧಿಸುವ ಮನೋದೈರ್ಯವನ್ನು ಮಾಡಿ.. ನಿರ್ವಿಘ್ನವಾಗಿ ಸಾಧನೆಗೆ ಎಲ್ಲ ಫಲಗಳು ದೊರಕುತ್ತವೆ. ಧನಾರ್ಜನೆ, ಮನಸ್ಸಿನಲ್ಲಿ ನೆಮ್ಮದಿ, ಪ್ರಶಾಂತತೆ ಉಂಟಾಗುತ್ತದೆ. (ಪರಿಹಾರಕ್ಕಾಗಿ ಮಹಾಗಣಪತಿಯ ಪೂಜೆಯನ್ನು ಮಾಡಿ)
ಮಿಥುನ ರಾಶಿ: ಅತಿಥಿ ಅಭ್ಯಾಗತರ ಸೇವೆಯನ್ನು ಮಾಡಿ. ಧಾನಾರ್ಜನೆ ಸ್ವಲ್ಪ ಹಿನ್ನಡೆ, ಜ್ಞಾನಿಗಳನ್ನು ಆಧರಿಸಿ ನಮಸ್ಕರಿಸಿ. ಅನ್ನದಾನವನ್ನು ಮಾಡಿ, ಸ್ಥಿರವಾದ ಭೋಗ ಭಾಗ್ಯಗಳು ಉಂಟಾಗಿ ಸೂಚಿಸುತ್ತಿರಿ..
(ಪರಿಹಾರಕ್ಕಾಗಿ ಗುರು ದತ್ತಾತ್ರೇಯರ ಪೂಜೆಯನ್ನು ಮಾಡಿ)
ಕಟಕ ರಾಶಿ: ವಿಚಾರಗಳ ಮೇಲೆ ಹಿಡಿತ ಇರಲಿ.. ಯಾವುದೇ ವಿಚಾರವಿದ್ದರೂ ಆಲೋಚಿಸಿ ಮಾತನಾಡಿ.. ದಿನೇ ದಿನೇ ಭಾದೆಯು ನಿವಾರಣೆ ಯಾಗುತ್ತದೆ. ಹರ್ಷ ಚಿತ್ತರಾಗಿರಿ, ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ )
ಸಿಂಹ ರಾಶಿ: ಚೆನ್ನಾಗಿ ಯೋಚಿಸಿ, ಅನುಭವಿಸಿ, ಚಿಂತಿಸಿ, ಅರ್ಥ ಮಾಡಿಕೊಂಡು ಮಾತನಾಡಿ.. ಭವಿಷ್ಯದಲ್ಲಿ ನಿಮ್ಮ ಮಾತೆ ನಿಮಗೆ ಕಂಟಕವಾಗಬಹುದು ಎಚ್ಚರ. (ಪರಿಹಾರಕ್ಕಾಗಿ ಅಮ್ಮನವರ ಸ್ತೋತ್ರವನ್ನು ಪಾರಾಯಣ ಮಾಡಿ)
ಕನ್ಯಾ ರಾಶಿ: ಎಲ್ಲ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ.. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)
ತುಲಾ ರಾಶಿ: ಮನಸ್ಸನ್ನು ಪ್ರಶಾಂತತೆಯ ಕಡೆ ತಲುಪಿಸಲು ಪ್ರಯತ್ನಿಸಿ. ಬೋಧನೆ ಮಾಡುವುದು ಸುಲಭ, ಅನುಸರಣೆ ಮಾಡುವುದು ಬಹಳ ಕಷ್ಟ ಎಂಬ ವಿಚಾರ ಮನದಟ್ಟಾಗಿರುತ್ತದೆ. ಯತ್ನ ಕಾರ್ಯದಲ್ಲಿ ಸ್ವಲ್ಪ ಜಯ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)
ವೃಶ್ಚಿಕ ರಾಶಿ: ಮನಸ್ಸು ನಾನಾ ವಿಕಾರಗಳಿಗೆ ವಾಲುತ್ತದೆ. ಎಲ್ಲ ಕಾರ್ಯದಲ್ಲೂ ಮನಸ್ಸನ್ನು ತೊಡಗಿಸಿ, ಇಲ್ಲವಾದರೆ ಜಯ ಅಪಜಯವಾಗುತ್ತದೆ. ಧನಾರ್ಜನೆ ಇಲ್ಲ, ವ್ಯಾಪಾರದಲ್ಲಿ ನಷ್ಟ, ಎಚ್ಚರಿಕೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)
ಧನಸ್ಸು ರಾಶಿ: ತಿರುಗಾಟ, ಕೆಲವು ನೋವಿನ ವಿಚಾರಗಳು.. ದಾನದ ಬಗ್ಗೆ ಸ್ವಲ್ಪ ಆಲೋಚನೆ, ಮನಸ್ಸಿನಲ್ಲಿ ವಿಕಾರ.. ಎಲ್ಲವೂ ಇದ್ದರೂ ನಾನು ಎಂಬ ಸಣ್ಣ ಅಲಂಕಾರ, ಇದರಿಂದ ಕಷ್ಟ ನಷ್ಟಗಳು ಅನುಭವಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಭೇಟಿ ಕೊಡಿ)
ಮಕರ ರಾಶಿ: ಸ್ವಾಭಿಮಾನಕ್ಕಿಂತ ನಾನು ಎನ್ನುವುದು ವಿಪರೀತ, ಇದರಿಂದ ತೊಂದರೆ ಜಾಸ್ತಿ ಆಗುತ್ತದೆ. ಕೆಲವು ತೊಂದರೆಗಳು, ಅದರಿಂದ ಅನಿಷ್ಟ ಆಚರಣೆಗೆ ಮನಸ್ಸು ಹೋಗುತ್ತದೆ. (ಪರಿಹಾರಕ್ಕಾಗಿ ಶಿವನ ಪೂಜೆ ಮಾಡಿ)
ಕುಂಭ ರಾಶಿ: ಅನಾವಶ್ಯಕವಾಗಿ ಮಾತನಾಡುವುದು ಕಮ್ಮಿ ಮಾಡಿ. ಎಲ್ಲರನ್ನೂ ಪ್ರೀತಿಸಿ, ಎಲ್ಲರೊಳಗೆ ಒಂದಾಗಿ ನೀವು ಸುಖವಾಗಿ ಇರುತ್ತೀರ..ಜೊತೆಗೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)
ಮೀನ ರಾಶಿ: ಚಿಂತೆ ತೀರ ಕಮ್ಮಿ, ಮನಸ್ಸನ್ನು ದೃಢವಾದ ನಿರ್ಧಾರದ ಕಡೆಗೆ ತಿರುಗಿಸಿ, ಇಲ್ಲವಾದರೆ ಅಹಿತಕರ ಘಟನೆ ನಡೆಯುತ್ತದೆ ಎಚ್ಚರಿಕೆ. ಯಾರನ್ನು ಹೀಯಾಳಿಸಬೇಡಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡಿ)
ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM
ಹೆಚ್ಚಿನ ಮಾಹಿತಿಗಾಗಿ; ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ. ಮೊ-9945170572