ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಅಮಾವಾಸ್ಯೆ ಜನವರಿ.29.2025 ಬುಧವಾರ: ಈ ದಿನ ವಿಶೇಷವಾಗಿ ದುರ್ಗಾದೇವಿಯ ಆರಾಧನೆ ಮಾಡಿದರೆ ಅತ್ಯಂತ ಶುಭವಾಗುತ್ತದೆ. Astrology
ಮೇಷ ರಾಶಿ: ವಿದ್ಯೆಯಲ್ಲಿ ಸ್ವಲ್ಪ ಮರೆವು, ಏಕಾಗ್ರತೆಯ ಕೊರತೆ ಇರುತ್ತದೆ, ಏಕಾಗ್ರ ಚಿತ್ತವನ್ನು ಪಾಲಿಸಲು ಅಭ್ಯಾಸ ಮಾಡಿಕೊಳ್ಳಿ, ದೃಢವಾದ ನಿರ್ಧಾರದಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ, ಮುನ್ನುಗ್ಗಿ ಕಾರ್ಯಗಳನ್ನು ಬಿಡಬೇಡಿ. (ಪರಿಹಾರಕ್ಕಾಗಿ ಸ್ಕಂದನ ಪೂಜೆ ಆರಾಧನೆ ಮಾಡಿ ಶುಭವಾಗುತ್ತದೆ)
ವೃಷಭ ರಾಶಿ: ಧನಾಗಮನ, ಒಳ್ಳೆಯ ಮಾತುಕತೆ, ಯಶಸ್ಸು ಜೊತೆಗೆ ಮನಸ್ಸಿನಲ್ಲಿ ನೆಮ್ಮದಿ, ಒಳ್ಳೆಯ ನಿರ್ಧಾರ ಮಾಡುತ್ತೀರಿ. ಆದರೆ ಸ್ವಲ್ಪ ನಿಧಾನವಾಗುತ್ತದೆ.. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಎಣ್ಣೆಯ ದೀಪವನ್ನು ಪೂರ್ವಕ್ಕೆ ತಿರುಗಿಸಿ ಹಚ್ಚಿ ಶುಭವಾಗುತ್ತದೆ)
ಮಿಥುನ ರಾಶಿ: ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ.. ಸಂಬಂಧಿಕರೊಂದಿಗೆ ವಿರಸ.. ಯಾವುದೇ ಸಮಸ್ಯೆ ಇಲ್ಲ. ಮುಂದುವರೆಸಿ ಶುಭವಾಗುತ್ತದೆ, ಐಶ್ವರ್ಯವಂತರಾಗುತ್ತೀರಿ. (ಪರಿಹಾರಕ್ಕಾಗಿ ವೆಂಕಟೇಶನ ದೇವಾಲಯದಲ್ಲಿ ಪೂಜೆಯನ್ನು ಮಾಡಿಸಿ)
ಕಟಕ ರಾಶಿ: ಮಾತು ನಿಮ್ಮ ವ್ಯವಧಾನವನ್ನು ಕೆಡಿಸುತ್ತದೆ.. ಸೋಂಬೇರಿತನವನ್ನು ನಿಧಾನವಾಗಿ ದೂರ ತಳ್ಳಬೇಕು.. ಚಿಂತಿತ ಕಾರ್ಯದಲ್ಲಿ ಯಶಸ್ಸನ್ನು ಹೊಂದಬೇಕು. ನಿಧಾನ, ಹಣದ ವಿಷಯಗಳಲ್ಲಿ ಸ್ವಲ್ಪ ಎಚ್ಚರ. (ಪರಿಹಾರಕ್ಕಾಗಿ ಗುರುಗಳ ಸ್ಮರಣೆಯನ್ನು ಮಾಡಿ)
ಸಿಂಹ ರಾಶಿ: ಅತಿಯಾಗಿ ಚಿಂತಿಸಬೇಡಿ ಅನಾರೋಗ್ಯ ಚಿಂತೆ ಮಾಡಿದರೆ ಯಾವುದು ಶಾಂತವಾಗುವುದಿಲ್ಲ. ಮಂತ್ರ ಯಂತ್ರ ಮಾಡಿಸಿ ಉತ್ತಮವಾಗುತ್ತದೆ ಮಕ್ಕಳಿಗೆ ಸ್ವಲ್ಪ ಆಲಸ್ಯ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಮಲ್ಲಿಗೆಯ ಹೂವಿನಿಂದ ಪೂಜೆ ಮಾಡಿಸಿ)
ಕನ್ಯಾ ರಾಶಿ: ಚಿಂತೆ, ದುಃಖದಿಂದ ಹೊರಬನ್ನಿ.. ಮನಸ್ಸನ್ನು ತಳಮಳಗೊಳಿಸಿ ನಂತರ ದೂರ ಸರಿಯುತ್ತದೆ ಎಂಬ ಭಾವನೆ ಇರಲಿ.. ಅತಿಯಾದ ಅಂಜಿಕೆ ಬೇಡ. ಅತಿಯಾದ ನೋವನ್ನು ಪಡಬೇಡಿ. ಒಳ್ಳೆಯದಾಗುತ್ತದೆ, ಚಿಂತಿಸಬೇಡಿ. (ಪರಿಹಾರಕ್ಕಾಗಿ ಮನೆಯಲ್ಲಿ ಗಣಪತಿ ಹೋಮವನ್ನು ಮಾಡಿಸಿಕೊಳ್ಳಿ)
ತುಲಾ ರಾಶಿ: ಒಳ್ಳೆಯ ಮಾತುಗಳು ನಿಮ್ಮನ್ನು ಅತ್ಯಂತ ಎತ್ತರಕ್ಕೆ ಏರಿಸುತ್ತದೆ. ನಿರ್ಧಾರ ಮಾಡಿ ಆದರೆ ಬಂಧು ಮಿತ್ರರ ಜೊತೆ ಎಚ್ಚರಿಕೆ, ಮನೆಯಲ್ಲಿ ನೆಮ್ಮದಿಯ ವಾತಾವರಣ ಸ್ವಲ್ಪ ದಿನದ ಮಟ್ಟಿಗೆ ಇಲ್ಲ ವಾಗುತ್ತದೆ. (ಪರಿಹಾರಕ್ಕಾಗಿ ದುರ್ಗಾ ಸಪ್ತಶ್ಲೋಕಿಯನ್ನು ಪಾರಾಯಣ ಮಾಡಿ)
ವೃಶ್ಚಿಕ ರಾಶಿ: ಆಚರಣೆಗಳು ಮತ್ತು ಕೆಲಸಗಳು ಎರಡು ಸಹ ಅತ್ಯಂತ ಉನ್ನತ ಮಟ್ಟದ್ದಾಗಿದೆ. ಇದರಿಂದ ಕೆಲವರು ನಿಮ್ಮ ಮೇಲೆ ದೃಷ್ಟಿಯನ್ನು ಹಾಕುತ್ತಾರೆ,, ಹಾಗಾಗಿ ದೃಷ್ಟಿ ನಿವಾರಿಸಿಕೊಳ್ಳಿ.. ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತದೆ ಮಾತನ್ನು ಸರಿ ಮಾಡಿಕೊಳ್ಳಬೇಕು. ನಿರ್ಧಾರ ಮಾಡಿ ಆದರೆ ಎಲ್ಲರಿಗೂ ಹೇಳಿಕೊಳ್ಳಬೇಡಿ. (ಪರಿಹಾರಕ್ಕಾಗಿ ಮಹಾಗಣಪತಿಯ ದೇವಸ್ಥಾನದಲ್ಲಿ ಗರಿಕೆಯ ಪೂಜೆಯನ್ನು ಮಾಡಿಸಿ)
ಧನಸ್ಸು ರಾಶಿ: ಮನಸ್ಸಿನಲ್ಲಿ ವಿದ್ಯೆಯ ಲಾಭ ಅತ್ಯಧಿಕವಾಗಿ, ಅನುಕೂಲವಾಗಿದೆ ಎಂಬ ಭಾವನೆ ಮತ್ತು ಸ್ವಲ್ಪ ಅಹಂಕಾರ ಇದನ್ನು ನಿವಾರಿಸಿಕೊಳ್ಳಿ, ಇಲ್ಲವಾದರೆ ದೊಡ್ಡ ತೊಂದರೆಗೆ ಸೇರಿಕೊಳ್ಳುತ್ತೀರಾ.. ಬಂಧು ಮಿತ್ರರ ಜೊತೆ ಒಡನಾಟ ಹಿತವಾಗಿರಲಿ ಮತ್ತು ಮಿತವಾಗಿರಲಿ ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಮಕರ ರಾಶಿ: ಧನದ ವಿಚಾರಕ್ಕಾಗಿ ಮನೆಯಲ್ಲಿ ಮನಸ್ತಾಪ ಬೇಡ, ಆರೋಗ್ಯಕ್ಕಾಗಿ ಧನ್ವಂತರಿ ನಾಮ ಜಪವನ್ನು ಮಾಡಿಕೊಳ್ಳಿ.. ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನೆಡೆ, ಎಲ್ಲ ಕಾರ್ಯದಲ್ಲೂ ಅನುಕೂಲ ಸ್ವಲ್ಪಮಟ್ಟಿನ ಪ್ರಗತಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)
ಕುಂಭ ರಾಶಿ: ಎಲ್ಲ ಕಾರ್ಯಗಳಿಗೂ ನಾನು ಎಂದು ಮುಂದೆ ಹೋಗಬೇಡಿ, ಎಲ್ಲದರಲ್ಲೂ ಸಿಕ್ಕಿಹಾಕಿಕೊಳ್ಳುತ್ತೀರಾ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿದ್ಯಾಭ್ಯಾಸದಲ್ಲಿ ಸ್ವಲ್ಪ ತೊಂದರೆ, ಸೋಂಬೇರಿಗಳಾಗಬೇಡಿ ಜಾಗೃತರಾಗಿ ಇರಿ, ಅವಶ್ಯಕತೆಗಿಂತ ಹೆಚ್ಚು ಮಾತನಾಡಬೇಡಿ. ಪ್ರಸನ್ನ ಚಿತ್ತರಾಗಿರಿ ನಗುನಗುತ ಇರಿ. (ಪರಿಹಾರಕ್ಕಾಗಿ ರಾಮ ಮಂತ್ರವನ್ನು ಜಪಿಸಿ)
ಮೀನ ರಾಶಿ: ಎಲ್ಲ ಕಾರ್ಯದಲ್ಲೂ ಪ್ರಗತಿ, ಧರ್ಮ ಮತ್ತು ದೇವರ ಕಾರ್ಯದಲ್ಲಿ ಹೆಚ್ಚು ಉತ್ಸಾಹ.. ಪ್ರಜ್ಞೆಯಿಂದ ಕೆಲಸಗಳನ್ನು ಮಾಡುತ್ತೀರಿ, ದೃಢವಾದ ನಿರ್ಧಾರ.. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಆರೋಗ್ಯವಾಗಿದ್ದೀರಿ, ಚೆನ್ನಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಗಮನವಹಿಸುತ್ತೀರಿ, ದೃಢವಾದ ನಿರ್ಧಾರ ದಿಂದ ಎಲ್ಲವನ್ನು ಸಾಧಿಸುತ್ತೀರಿ. (ಪರಿಹಾರಕ್ಕಾಗಿ ಕೃಷ್ಣನಿಗೆ ಪಾರಿಜಾತ ಹೂಗಳಿಂದ ಪೂಜೆ ಮಾಡಿ)
ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ಮೊ-9945170572