ಸಿಂಧನೂರು: ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದ ಎಂಎಸ್ಸಿ (MSC) ವಿದ್ಯಾರ್ಥಿನಿಯನ್ನು (Student) ಪರಿಚಿತ ಯುವಕ ಖಾಸಗಿ ಲೇಔಟ್ ಗೆ ಕರೆದೊಯ್ದು ಕತ್ತು ಕೊಯ್ದು ಕೊಲೆ (Murder) ಮಾಡಿ ಪರಾರಿಯಾಗಿರುವ ಘಟನೆ ಗುರವಾರ ಬೆಳಗ್ಗೆ ನಡೆದಿದೆ.
ಲಿಂಗಸೂಗೂರು ನಿವಾಸಿ ಅಬ್ದುಲ್ ವಾಹೀದ್ ಅವರ ಪುತ್ರಿ ಶಿಫಾ (22 ವರ್ಷ) ಕೊಲೆಗೀಡಾದ ವಿದ್ಯಾರ್ಥಿನಿ.
ಎಂದಿನಂತೆ ವಿದ್ಯಾರ್ಥಿನಿ ಶಿಫಾ ಗುರುವಾರ ಬೆಳಗ್ಗೆ ಲಿಂಗಸೂಗೂರಿನಿಂದ ಸಿಂಧನೂರಿನ ಕಾಲೇಜಿಗೆ ಬರುತ್ತಿದ್ದ ಸಂದರ್ಭ ಲಿಂಗಸೂಗೂರಿನಿಂದ ಬೈಕ್‌ನಲ್ಲಿ ಆಗಮಿಸಿದ್ದ ಪರಿಚಿತ ಯುವಕ, ಮಾತನಾಡುವುದಿದೆ ಬಾ ಎಂದು ಖಾಸಗಿ ಲೇಔಟ್‌ಗೆ ಕರೆದು ಕೊಂಡು ಹೋಗಿದ್ದಾನೆ.
ಈ ವೇಳೆ ದಿಢೀರ್ ಚಾಕು ತೆಗೆದು ಕತ್ತು ಕೊಯ್ದಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಯುವಕನೊಬ್ಬನನ್ನು ಲಿಂಗಸೂಗೂರಿನಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮೃತ ವಿದ್ಯಾರ್ಥಿನಿಯ ಪೋಷಕರ ರೋಧನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ, ಪಿಎಸ್ ಐಗಳಾದ ಯರಿಯಪ್ಪ, ಸುಜಾತ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.