ದಿನ ಭವಿಷ್ಯ: ಶಾಲಿವಾಹನ, ಕ್ರೋಧಿ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಕರ 18, ಶ್ರವಣ ಮಹಾನಕ್ಷತ್ರ, ಮಾಘ ಮಾಸ, ಶುಕ್ಲ ಪಕ್ಷ, ಶನಿವಾರ, ಫೆ. 01. 2025 ದೈನಂದಿನ ರಾಶಿ ಭವಿಷ್ಯ.. Astrology
ಮೇಷ ರಾಶಿ: ನಿಮ್ಮ ಪ್ರಾಮಾಣಿಕ ಪ್ರಯತ್ನಗಳೇ ನಿಮ್ಮ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ ಶುದ್ಧ ಬಂಗಾರದಿಂದ ಒಡವೆಗಳನ್ನು ಮಾಡಲಾಗುವುದಿಲ್ಲ. (ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಇಂದು ಕೆಲವು ಸವಾಲು ಗಳಿರುತ್ತವೆ.ಆದರೆ ಅನುಭವಿ ವ್ಯಕ್ತಿಯಿಂದ ಸರಿಯಾದ ಸಲಹೆಯೊಂದಿಗೆ,ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ನಿಮ್ಮ ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸತಂತ್ರದ ಪ್ರಯೋಗ ಮಾಡುವಿರಿ. ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)
ಕಟಕ ರಾಶಿ: ನಿಮ್ಮನ್ನು ರಕ್ಷಿಸುವ ಗ್ರಹಗಳು ಉತ್ತಮ ಸ್ಥಿತಿಯಲ್ಲಿರುವುದರಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ ಘನತೆಗೆ ಕುಂದುಂಟು ಮಾಡುವವು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)
ಕನ್ಯಾ ರಾಶಿ: ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲವಿದೆ. ಅನೇಕ ಉತ್ತಮ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವಿರಿ. ವಿರೋಧಿಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಅತ್ಯಮೂಲ್ಯವಾದ ದಾಖಲೆ ಪತ್ರಗಳನ್ನು ಜತನದಿಂದ ಕಾಪಾಡುವುದು ಉತ್ತಮ . ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಸಂಕಷ್ಟದ ದಿನಗಳಿಂದ ಹೇಗೆ ಪಾರಾಗಬಹುದೆಂಬುದು ನಿಮ್ಮ ಅನುಭವ ತಿಳಿಸುತ್ತದೆ. ಈ ದಿನದ ಕ್ಲಿಷ್ಟಕರ ಸನ್ನಿವೇಶವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ನಿಮ್ಮ ಕ್ರಿಯಾಶೀಲ ಮತ್ತು ಯೋಜನಾಬದ್ಧ ಪ್ರಾವೀಣ್ಯತೆಯು ಗೌರವ ಆದರಗಳನ್ನು ತಂದು ಕೊಡುವುದು. ಹಿತಶತ್ರುಗಳ ಬಗ್ಗೆ ಎಚ್ಚರದಿಂದ ಇರಿ. (ಭಕ್ತಿಯಿಂದ ಶ್ರೀ ಗಾಯತ್ರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಮನೆಯ ವಿಚಾರಗಳಲ್ಲಿ ಕಾಳಜಿ ವಹಿಸಲು ಮುಂದಾಗುವಿರಿ. ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗುವುದು. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಉತ್ಸಾಹ ಹಾಗೂ ಸಮರ್ಪಕ
ನಡೆ ನುಡಿಗಳಿಂದಲೇ ಜನರನ್ನು ಆಕರ್ಷಿಸುವಿರಿ. ಪ್ರಶಂಸೆಗಳ ಸುರಿಮಳೆಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮೀನ ರಾಶಿ: ಈ ದಿನ ಬರುವ ಅಡೆ – ತಡೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಗುರುವು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಹಲವು ಬದಲಾವಣೆಗಳಿಗೆ ಇಂದು ಸಾಕ್ಷಿಯಾಗುವ ಸಂಭವ. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ರಾಹು ಕಾಲ: 09:21am – 10:47am ಅಶುಭ
ಯಮಘಂಡ ಕಾಲ: 01:40pm – 03:06pm ಅಶುಭ
ಗುಳಿಕ ಕಾಲ: 06:28am – 07:54am