ದೊಡ್ಡಬಳ್ಳಾಪುರ: ಎರಡು ತಿಂಗಳ ಹಿಂದೆ ಕಾಣೆಯಾದ ವ್ಯಕ್ತಿಯೋರ್ವನ ಶವ ಅಸ್ಥಿಪಂಜರದ (skeleton) ರೀತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಕೂಗೋನಹಳ್ಳಿ ಬಳಿ ದೊರೆತಿದೆ.
ಮೃತ ವ್ಯಕ್ತಿಯನ್ನು ಕೂಗೋನಹಳ್ಳಿ ನಿವಾಸಿ 53 ವರ್ಷದ ಸುರೇಶ (Suresha) ಎಂದು ಗುರುತಿಸಲಾಗಿದೆ.
ಈತನ ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ತೀವ್ರವಾದ ನಿಯಮ ಹೇರಿದ್ದರಿಂದ ಬೇಸರಗೊಂಡು ಗ್ರಾಮದ ಹೊರವಲಯದಲ್ಲಿರುವ ಹುಣಸೆಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ಆದರೆ ಮರ ದಟ್ಟವಾಗಿದ್ದ ಕಾರಣ ಹಾಗೂ ಪಕ್ಕದಲ್ಲಿ ದ್ರಾಕ್ಷಿ ತೋಟದ ಕಾರಣ ಆತ್ಮಹತ್ಯೆ (Suicide) ಮಾಡಿಕೊಂಡಿರುವುದು ಯಾರಿಗೂ ತಿಳಿದುಬಂದಿಲ್ಲ.. ಸುರೇಶ್ ಕಾಣೆಯಾಗಿರುವ ಕುರಿತು ಕುಟುಂಬಸ್ಥರು ದೊಡ್ಡಬೆಳವಂಗಲ (Doddabelvangala) ಪೊಲೀಸ್ ದೂರು ನೀಡಿದ್ದರು.
ಇಂದು ಆಕಸ್ಮಿಕವಾಗಿ ಗ್ರಾಮಸ್ಥರು ಮರವನ್ನು ನೋಡಿದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಅಸ್ಥಿಪಂಜರ (skeleton) ಪತ್ತೆಯಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ಸುರೇಶನ ಶವ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.