ಮೈಸೂರು (Harithalekhani): ಭಾರತೀಯ ಚಿತ್ರರಂಗದ ಖ್ಯಾತ ನಟ ಪ್ರಭುದೇವ (Prabhu Deva) ಅವರು ತಾಯಿಯ ಆಸೆಯಂತೆ ಅವರ ಹುಟ್ಟೂರಿನ ಸಮೀಪದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನೆರವೇರಿಸಿದ್ದಾರೆ.
ಪ್ರಭುದೇವ ಅವರು ಮೂಲತಃ ಮೈಸೂರು ಜಿಲ್ಲೆಯ ದೂರ ಗ್ರಾಮದವರಾಗಿದ್ದು, 25 ಲಕ್ಷ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ.
ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದಲ್ಲಿ ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಜಮೀನು ಖರೀದಿ ಮಾಡಿದ್ದರು.
ಈ ಜಮೀನಿನ ಪಕ್ಕದಲ್ಲೇ ಇದ್ದ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ದೇವಸ್ಥಾನ ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಹಾಗಾಗಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಅದೇ ದೇವಾಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು.
ಸದ್ಯ ತನ್ನ ತಾಯಿ ಆಸೆಯಂತೆ, ಗ್ರಾಮಸ್ಥರ ಬಯಕೆಯಂತೆ ನಟ ಪ್ರಭುದೇವ ದೇವಸ್ಥಾನದ ಜೀರ್ಣೋದ್ದಾರ ಮಾಡಿಸಿದ್ದಾರೆ.
ತಂದೆ, ತಾಯಿ ಹಾಗೂ ಪ್ರಭುದೇವ ಅವರು ದಂಪತಿ ಸಮೇತ ಪೂಜೆ ಮಾಡಿ ಕುಟುಂಬದ ಸದಸ್ಯರ ಜತೆ ಕಾಲ ಕಳೆದಿದ್ದಾರೆ.