ಕೊಚ್ಚಿ (Harithalekhani): ಮಾದಕ ದ್ರವ್ಯ ನಿಷೇಧ ಕಾಯ್ದೆಯ ಸೆಕ್ಷನ್ 27 ಮತ್ತು 29 ರ ಅಡಿಯಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೋನನ್ನು (Shine chacko) ಕೇರಳ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಮಲಯಾಳಂ ನಟ ಶೈನ್ ಟಾಮ್ ಚಾಕೊ ತಂಗಿದ್ದ ಹೋಟೆಲ್‌ಗೆ ಕೇರಳದ ಕೊಚ್ಚಿ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು. ಆದರೆ ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ನಟ ಅಲ್ಲಿಂದ ಪರಾರಿಯಾಗಿದ್ದರು.
ನಟ ಹೊಟೇಲ್‌ನಿಂದ ಪರಾರಿಯಾಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಎರಡು ದಿನಗಳ ಶೋಧದ ನಂತರ ನಟ ಚಾಕೋನನ್ನು ಪೊಲೀಸರು ಬಂಧಿಸಿದ್ದಾರೆ.
Actor Shine Tom Chacko has been apprehended once again by authorities in Kochi for alleged violations of the Narcotic Drugs and Psychotropic Substances (NDPS) Act#ShineTomChacko pic.twitter.com/MDKMDbMsA6
— Milagro Movies (@MilagroMovies) April 19, 2025
ಇತ್ತೀಚೆಗಷ್ಟೇ ನಟಿ ವಿನ್ನಿ ಅಲೋಸಿಯಸ್ ಅವರು ಶೈನ್ ಟಾಮ್ ಚಾಕೊ ಶೂಟಿಂಗ್ ಸೆಟ್‌ನಲ್ಲಿ ಡ್ರಗ್ಸ್ ಸೇವನೆ ಮಾಡುವ ಬಗ್ಗೆ ಆರೋಪ ಮಾಡಿ ಮಲಯಾಳಂ ಚಲನಚಿತ್ರ ಸಂಘಕ್ಕೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಪೊಲೀಸರು, ಶೈನ್ ತಂಗಿದ್ದ ಹೋಟೆಲ್‌ಗೆ ಏ.16ರಂದು ರಾತ್ರಿ ತೆರಳಿದ್ದರು. ಈ ಬಗ್ಗೆ ಸುಳಿವು ಸಿಕ್ಕಿದ್ದಂತೆ ನಟ ರೂಮ್ ಕಿಟಕಿಯಿಂದ ಹಾರಿ ಪರಾರಿಯಾಗಿದ್ದರು.