ಕೊತ್ವಾಲಿ (Harithalekhani): ಕೌಟುಂಬಿಕ ಕಲಹದ ಹಿನ್ನೆಲೆ ಸೊಸೆಯೋರ್ವರು ತನ್ನ ಅತ್ತೆಯ ಮನೆಯ ಬಾಗಿಲಲ್ಲಿ ಮೂರು ದಿನಗಳಿಂದ ಸತ್ಯಾಗ್ರಹ (Satyagraha) ಮಾಡ್ತಿರುವ ಘಟನೆ ಉತ್ತರಪ್ರದೇಶದ ಕೊತ್ವಾಲಿ ಪ್ರದೇಶದ ವಿಜ್ರವಾರ ಗ್ರಾಮದಲ್ಲಿ ನಡೆದಿದೆ.
ಶಿವಾಂಗಿ ತಿವಾರಿ ಎಂಬ ನವವಿವಾಹಿತ ಮಹಿಳೆ ಧರಣಿ ಕುಳಿತವರಾಗಿದ್ದು, ಪ್ರಾಣವನ್ನೇ ಕಳೆದುಕೊಂಡರೂ ಸಹ ತನ್ನ ತಾಯಿಯ ಮನೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ತನ್ನ ಅತ್ತೆ ಮನೆ ಮುಂದೆ ಸತ್ಯಾಗ್ರಹ ನಡೆಸುತ್ತಿದ್ದಾಳೆ.
ಕೌಟುಂಬಿಕ ಕಲಹದ ಕಾರಣ ಆಕೆಯನ್ನ ಅತ್ತೆ ಮನೆಯಿಂದ ಹೊರಕ್ಕೆ ತಳ್ಳಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರಂತೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಪೊಲೀಸರ ಮಾತಿಗೂ ಜಗ್ಗದ ಮಹಿಳೆ ತನ್ನ ಸತ್ಯಾಗ್ರಹ ಮುಂದುವರೆಸಿದ್ದಾರೆ.
ನಾನು ಮೂರು ದಿನಗಳಿಂದ ಪ್ರತಿಭಟನೆ ಮಾಡ್ತಿದ್ದೇನೆ. ಹೊಟ್ಟೆಗೆ ಏನೂ ಸೇವಿಸಿಲ್ಲ. ಮೂರು ದಿನಗಳಿಂದ ಕಾಯುತ್ತ ಕೂತಿದ್ದೇನೆ. ನನ್ನ ಪತಿ ಸಂಜೆಯೂ ಬಂದಿಲ್ಲ.
#झांसी : मऊरानीपुर कोतवाली क्षेत्र के विजरवारा गांव में एक नवविवाहिता ससुराल की चौखट पर तीन दिन से भूखी-प्यासी बैठी है। पीड़िता शिवांगी तिवारी का कहना है कि वह मायके नहीं जाएगी, चाहे जान चली जाए। घरेलू कलह से परेशान ससुरालीजन घर में ताला लगाकर फरार हो गए हैं। पुलिस ने मौके पर… pic.twitter.com/1WHTQqRt5w
— UttarPradesh.ORG News (@WeUttarPradesh) April 18, 2025
ಆತನಿಗಾಗಿ ಕಾಯುತ್ತಿದ್ದೇನೆ. ನನ್ನ ಪತಿ ನನಗೆ ಹೊಡೆಯುತ್ತಾರೆ. ಆದರೆ ಅವರನ್ನು ನಾನು ಬಿಟ್ಟು ಎಲ್ಲಿಗೆ ಹೋಗಬೇಕು? ನನಗೆ ನ್ಯಾಯ ಬೇಕು. ನ್ಯಾಯ ಸಿಗೋವರೆಗೂ ಎಲ್ಲಿಗೂ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ.