ದೊಡ್ಡಬಳ್ಳಾಪುರ (Harithalekhani): ನಗರ ಬೆಸ್ಕಾಂ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ, ಏಪ್ರಿಲ್.20ರಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆಗೆಯ ವರೆಗೆ ವಿದ್ಯುತ್ ವ್ಯತ್ಯಯ (Power cut) ಉಂಟಾಗಲಿದೆ ಎಂದು ಬೆಸ್ಕಾಂ ಇಲಾಖೆಯ ಎಇಇ ವಿನಯ ಕುಮಾರ್ ಹೆಚ್‌ಪಿ ಅವರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 220/66/11ಕೆವಿ ಕೆಐಎಡಿಬಿ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುವ, F02-Birla Super, F08-Town and F22-Karenahalli ಫೀಡರ್ ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯುವುದರಿಂದ F02-Birla Super, F08-Town and F22-Karenahalli ಫೀಡರ್ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ಗಂಟೆಗೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು
ದೊಡ್ಡಬಳ್ಳಾಪುರ ನಗರದ ಖಾಸ್‌ಬಾಗ್, ದರ್ಗಾಪುರ, ಬ್ರಾಹ್ಮಣರ ಬೀದಿಯ ಬೆಳ್ಳಿ ಗಣೇಶ ಪರಿವರ್ತಕ, ವೀರಾಪುರ, ವೀವೆಕಾನಂದ ನಗರ, ತಿಪ್ಪಾಪುರ, ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಚೌಡೇಶ್ವರಿ ಗುಡಿ ಬೀದಿ, ತೂಬಗೆರೆ ಪೇಟೆ.
ಕಲಾಸಿಪಾಳ್ಯ, ಸಂಜಯನಗರ, ಚೈತನ್ಯನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭದ್ರನಪಾಳ್ಯ, ಗಾಂಧಿನಗರ, ಕೆರೆ ಬಾಗಿಲು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)