ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಂಥನ ಕೇಂದ್ರದ ವತಿಯಿಂದ ನಾಳೆ (ಮೇ.18) ಸಾಹಿತ್ಯ ಸಂಗಮ ಪ್ರಕಟಿತ “ಹಿಂದುತ್ವ” (Hindutva) ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಭಗತ್ ಸಿಂಗ್ ಕ್ರೀಡಾಂಗಣದ ಸಮೀಪವಿರುವ ಶಿವಗಂಗಾ ಸಂಘ ಕಾರ್ಯಾಲಯದಲ್ಲಿ ಮೇ.18 ಭಾನುವಾರ ಸಂಜೆ 5.30ಕ್ಕೆ “ಹಿಂದುತ್ವ” ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ವಿಶ್ವಕೇಂದ್ರದ ವಕೀಲರು ಹಾಗೂ ವಿಶ್ವಸ್ತರಾದ ಕ್ಷಮಾ ನರಗುಂದ ಅವರು ಭಾಗವಹಿಸಲಿದ್ದಾರೆ.