ದೊಡ್ಡಬಳ್ಳಾಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆ ಮತ ಎಣಿಕೆ ಗೊಂದಲದ ಗೂಡಾಗಿದೆ.
ದೊಡ್ಡಬಳ್ಳಾಪುರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಹುಸ್ಕೂರು ಆನಂದ್ ಮತ್ತು ಬಿಜೆಪಿ ಬೆಂಬಲಿತ ಬಿಸಿ ಆನಂದ್ ಕುಮಾರ್ ಅವರ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆದಿತ್ತು.
ಬೆಂಗಳೂರು ಡೇರಿ ವೃತ್ತ ಸಮೀಪ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿತ್ತು.
ಆದರೆ ಮತದಾನದ ಬಳಿಕ ನಡೆಯಬೇಕಾಗಿದ್ದ ಮತ ಎಣಿಕೆ ಕಾರ್ಯಕ್ಕೆ ತಡೆ ಬಿದ್ದಿತ್ತು.
ದೊಡ್ಡಬಳ್ಳಾಪುರ ತಾಲೂಕಿನ ಗಲಿಬಿಲಿಕೋಟೆ ಮತ್ತು ತಂಬೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷರ ಮತದಾನದ ಹಕ್ಕಿನ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ, ಅಧಿಕಾರಿಗಳು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ ಕಾರಣ, ಮತ ಪೆಟ್ಟಿಗೆಯನ್ನು ಸೀಜ್ ಮಾಡಿ ರಕ್ಷಿಸಿಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಿಂತಿರುಗುತ್ತಿದ್ದಾರೆ.
ಆದರೆ ಇದೀಗ ಬಂದ ಮಾಹಿತಿ ಅನ್ವಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮತ ಎಣಿಕೆ ಮಾಡಲು ಮುಂದಾಗಿ, ಅಭ್ಯರ್ಥಿಗಳು, ಏಜೆಂಟ್‌ಗಳನ್ನು ಮತ್ತೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಎಣಿಕೆ ನಡೆಯುವುದೇ..?, ಎಣಿಕೆ ನಂತರ ಫಲಿತಾಂಶ ಪ್ರಕಟವಾಗುವುದೇ.?, ಅಥವಾ ನ್ಯಾಯಾಲಯದ ಆದೇಶದ ಬಳಿಕ ಪ್ರಕಟಿಸುವರೇ.? ಕಾದು ನೋಡಬೇಕಿದೆ.