ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ (illegal encroachments) ರೂ. 74.98 ಕೋಟಿ ಅಂದಾಜು ಮೌಲ್ಯದ ಒಟ್ಟು 19 ಎಕರೆ 0.03 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ (District Collector) ಜಿ.ಜಗದೀಶ (G. Jagadeesh) ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.
ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಹಳ್ಳ, ಖರಾಬು, ಸರ್ಕಾರಿ ತೋಪು, ಗೋಮಾಳ, ಸರ್ಕಾರಿ ಕುಂಟೆ, ಸರ್ಕಾರಿ ಖರಾಬು, ಗುಂಡುತೋಪು, ಸರ್ಕಾರಿ ಕರೆ, ಕಾಲುವೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಪಣತ್ತೂರು ಗ್ರಾಮದ ಸ.ನಂ 62 ರ ಸರ್ಕಾರಿ ಹಳ್ಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.21 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 4.20 ಕೋಟಿಗಳಾಗಿರುತ್ತದೆ.
ವರ್ತೂರು ಹೋಬಳಿಯ ದೊಡ್ಡಕನ್ನಲ್ಲಿ ಗ್ರಾಮದ ಸ.ನಂ 19/18 ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 6.00 ಕೋಟಿಗಳಾಗಿರುತ್ತದೆ.
ವರ್ತೂರು ಹೋಬಳಿಯ ಗುಂಜೂರು ಗ್ರಾಮದ ಸ.ನಂ. 7 ರ ಸರ್ಕಾರಿ ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.20 ಕೋಟಿಗಳಾಗಿರುತ್ತದೆ.
ವರ್ತೂರು ಹೋಬಳಿಯ ಯರಪ್ಪನಹಳ್ಳಿ ಗ್ರಾಮದ ಸ.ನಂ 20ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 3.00 ಕೋಟಿಗಳಾಗಿರುತ್ತದೆ.
ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಗ್ರಾಮದ ಸ.ನಂ 14ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.80 ಲಕ್ಷಗಳಾಗಿರುತ್ತದೆ.
ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮದ ಸ.ನಂ 131ರ ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.50 ಲಕ್ಷಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಜಿಗಣಿ-1 ಹೋಬಳಿಯ ಕಾಡುಜಕ್ಕನಹಳ್ಳಿ ಗ್ರಾಮದ ಸ.ನಂ. 6/1ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.05 ಲಕ್ಷಗಳಾಗಿರುತ್ತದೆ.
ಜಿಗಣಿ-2 ಹೋಬಳಿಯ ಬನ್ನೇರುಘಟ್ಟ ಗ್ರಾಮದ ಸ.ನಂ 147 ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.20 ಕೋಟಿಗಳಾಗಿರುತ್ತದೆ.
ಕಸಬಾ-2 ಹೋಬಳಿಯ ಸೊಪ್ಪಹಳ್ಳಿ ಗ್ರಾಮದ ಸ.ನಂ 46 ರ ಸರ್ಕಾರಿ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.20 ಲಕ್ಷಗಳಾಗಿರುತ್ತದೆ.
ಸರ್ಜಾಪುರ-2 ಹೋಬಳಿಯ ಚಿಕ್ಕನಾಗಮಂಗಲ ಗ್ರಾಮದ ಸ.ನಂ 99 ರ ಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.10 ಲಕ್ಷಗಳಾಗಿರುತ್ತದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರ ಹೋಬಳಿ ದೊಡ್ಡೇರಿ ಗ್ರಾಮದ ಸ.ನಂ 29ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.57 ಲಕ್ಷಗಳಾಗಿರುತ್ತದೆ.
ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಗ್ರಾಮದ ಸ.ನಂ 51ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.22 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 0.50 ಲಕ್ಷಗಳಾಗಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಭೈರೇಗೌಡನಹಳ್ಳಿ ಗ್ರಾಮದ ಸ.ನಂ 33ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.07 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.75 ಲಕ್ಷಗಳಾಗಿರುತ್ತದೆ.
ದಾಸನಪುರ ಹೋಬಳಿಯ ವಡ್ಡೇರಹಳ್ಳಿ ಗ್ರಾಮದ ಸ.ನಂ 20 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.20 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 2.00 ಕೋಟಿಗಳಾಗಿರುತ್ತದೆ.
ದಾಸನಪುರ ಹೋಬಳಿಯ ತೋಟದಗುಟ್ಟದಹಳ್ಳಿ ಗ್ರಾಮದ ಸ.ನಂ 39ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 01 ಎಕರೆ 0.04 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 7.50 ಕೋಟಿಗಳಾಗಿರುತ್ತದೆ.
ದಾಸನಪುರ ಹೋಬಳಿಯ ತೋಟದಗುಟ್ಟದಹಳ್ಳಿ ಗ್ರಾಮದ ಸ.ನಂ 47ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.30 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 6.00 ಕೋಟಿಗಳಾಗಿರುತ್ತದೆ.
ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಸ.ನಂ 159ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 6 ಎಕರೆ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 30 ಕೋಟಿಗಳಾಗಿರುತ್ತದೆ.
ದಾಸನಪುರ ಹೋಬಳಿಯ ಕೆಂಗನಹಳ್ಳಿ ಗ್ರಾಮದ ಸಂ.ನಂ 21 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 4 ಎಕರೆಯಾಗಿದ್ದು, ಅಂದಾಜು ಮೌಲ್ಯ 7.50 ಕೋಟಿಗಳಾಗಿರುತ್ತದೆ.
ಯಲಹಂಕ ತಾಲ್ಲೂಕಿನ ಹೆಸರಘಟ್ಟ-1 ಹೋಬಳಿಯ ಕುಂಬಾರಹಳ್ಳಿ ಗ್ರಾಮದ ಸ.ನಂ 9ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.80 ಲಕ್ಷಗಳಾಗಿರುತ್ತದೆ.
ಹೆಸರಘಟ್ಟ-2 ಹೋಬಳಿಯ ಶ್ಯಾನುಭೋಗನಹಳ್ಳಿ ಗ್ರಾಮದ ಸಂ.ನಂ 54 ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.23 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 1.36 ಕೋಟಿಗಳಾಗಿರುತ್ತದೆ.
ಯಲಹಂಕ -1 ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಸ.ನಂ 1ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.75 ಲಕ್ಷಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರು ಮತ್ತು ವಿವಿಧ ತಾಲ್ಲೂಕಿನ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.