Continued widespread rain: One person dead, another missing

ಮುಂದುವರೆದ ವ್ಯಾಪಕ ಮಳೆ: ಓರ್ವ ವ್ಯಕ್ತಿ ಸಾವು, ಮತ್ತೋರ್ವ ಕಣ್ಮರೆ

ಧಾರವಾಡ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಡಳಿತವು ವ್ಯಾಪಕ ಮತ್ತು ನಿರಂತರ ಮಳೆಯಿಂದ (Rain) ಹಾನಿಯಾಗುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಜನ ಜಾನುವಾರುಗಳನ್ನು ರಕ್ಷಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ಕುರಿತು ಪ್ರಕಟಣೆ ನೀಡಿ, ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಪ್ರಾಧಿಕಾರದ ಸಭೆ ಜರುಗಿಸಿ, ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸಂಭವನೀಯ ಹಾನಿ ಪ್ರದೇಶಗಳ ಕುರಿತು ಸುರಕ್ಷತಾ ಕ್ರಮಗಳನ್ನು ಮತ್ತು ತಕ್ಷಣಕ್ಕೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು.

ಅದರಂತೆ ಕಳೆದ 24 ಗಂಟೆ ಅಂದರೆ ಜೂನ್ 12 ರ 8:30 ಗಂಟೆಯವರೆಗೆ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತದ ಮುಂಜಾಗ್ರತೆಯಿಂದ ಯಶಸ್ವಿಯಾದ ರಕ್ಷಣಾ ಕಾರ್ಯ: ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ (ಜೂ.12 ರ ಬೆಳಿಗ್ಗೆ 8:30 ರ ವರೆಗೆ) ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲಾಡಳಿತದ ಮುಂಜಾಗೃತಾ ಕ್ರಮಗಳಿಂದಾಗಿ ಬಹುತೇಕ ಸ್ಥಳಗಳಲ್ಲಿ ಉಂಟಾಗಿದ್ದ ಅಪಾಯವನ್ನು ಸಮರ್ಥವಾಗಿ ನಿರ್ವಹಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನ, ಜನುವಾರು ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕುಂದಗೋಳದಲ್ಲಿ ಓರ್ವ ವ್ಯಕ್ತಿ ಸಾವು, ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಕಣ್ಮರೆ

ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮದ ಹತ್ತಿರ ಹಳ್ಳದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31 ವರ್ಷ) ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದೆ.

ಇವರೊಂದಿಗೆ ಇದ್ದ ಕುಂದಗೋಳ ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25 ವರ್ಷ) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26 ವರ್ಷ) ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತು ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬಳ್ಳಿನಗರ ತಾಲೂಕು ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್ ಹತ್ತಿರ ಬೈಕಿನಲ್ಲಿ ರಸ್ತೆ ದಾಟುವಾಗ ಹುಸೇನಸಾಬ ಸಯ್ಯದಸಾಬ ಕಳಸ (58 ವರ್ಷ) ಅವರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಯಾಗಿದೆ.

ಇವರೊಂದಿಗೆ ಬೈಕ್‍ನಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ.

ತಹಶೀಲ್ದಾರ ಕಲ್ಲನಗೌಡ ಆರ್.ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಾಡಳಿತವು ಕಣ್ಮರೆಯಾದ ವ್ಯಕ್ತಿಯ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ತಪಾಸಣೆ ಕಾರ್ಯ ಮುಂದುವರೆದಿದೆ.

ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲು ಬೆಳಗಾವಿಯಿಂದ ಇಂದು ಸಂಜೆ ಎಸ್‍ಡಿಆರ್‍ಎಫ್ ತಂಡ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ನವಲಗುಂದ; ನವಲಗುಂದ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಗೆ ಯಮನೂರ ಗ್ರಾಮದ ಬೈಪಾಸ್ ಬಳಿ ಇರುವ ಕಾಶೀನಾಥ ಖೋಡೆ ಅವರ ಜಮೀನುದಲ್ಲಿ ನಿರ್ಮಿಸಿದ್ದ ಮನೆ ಸುತ್ತಲೂ ಬೆಣ್ಣಿಹಳ್ಳದ ನೀರು ಆವರಿಸಿ ಮನೆಯಲ್ಲಿ ನಾಲ್ಕು ಜನ ಕಾರ್ಮಿಕರು ಸಿಲುಕಿಕೊಂಡಿದ್ದರು.

ಪೊಲೀಸ್ ಹಾಗೂ ಅಗ್ನಿಶಾಮಕ ಪಡೆಗಳ ಸಹಾಯದಿಂದ ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಬೆಳಗಾವಿಯ ಬಸವರಾಜ್ ಭಂಡಾರಿ, ವಿಜಯಲಕ್ಷ್ಮಿ ಭಂಡಾರಿ, ರಮ್ಯಾ ಭಂಡಾರಿ, ಸೌಮ್ಯ ಭಂಡಾರಿ ಹಾಗೂ ಅವರ ಸಾಕುನಾಯಿ, ಬೆಕ್ಕುನ್ನು ರಕ್ಷಿಸಲಾಯಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮತ್ತು ತಹಶೀಲ್ದಾರ ಸುಧೀರ ಸಾವುಕಾರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಈಜು ತಜ್ಞರೊಂದಿಗೆ ರಕ್ಷಣೆ ಮಾಡಿ ನೀರಿನಿಂದ ಹೊರ ತರಲಾಯಿತು. ನಂತರ ಅವರ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯವಾಗಿದ್ದ ಮಾಹಿತಿ ಪಡೆದು ಅವರನ್ನು ಅವರ ಊರಿನತ್ತ ಕಳಿಸಲಾಯಿತು ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕು ಜಾನುವಾರುಗಳ ರಕ್ಷಣೆ, 2 ಹಾನಿ

ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ನಿಗರಿಹಳ್ಳಕ್ಕೆ ಹಬ್ಬಳ್ಳಿ ನಗರ, ಉಣಕಲ್ ಮತ್ತು ನವಲೂರ ಕಡೆಯಿಂದ ಬಾರಿ ಪ್ರಮಾಣದ ಮಳೆ ನೀರು ಬಂದಿದ್ದರಿಂದ ಹಳ್ಳದಲ್ಲಿ ಹಾಕಲಾಗಿದ್ದ ಕುರಿ ಶೆಡ್‍ಗೆ ರಾತ್ರಿ 12 ಗಂಟೆಗೆ ಸುಮಾರಿಗೆ ಹಳ್ಳದ ನೀರು ಬಂದು ಶೆಡ್‍ನಲ್ಲಿರುವ ಅಂದಾಜು 100 ಕುರಿಗಳು 3 ಜನರು ಸಿಲುಕಿಕೊಂಡಿದ್ದರು.

ಹುಬ್ಬಳ್ಳಿ ತಹಶೀಲ್ದಾರ ಜೆ.ಬಿ.ಮಜ್ಜಗಿ ಹಾಗೂ ಡಿವಾಯ್‍ಎಸ್‍ಪಿ ವಿನೋಧ ಮುಕ್ತೆದಾರ ಅವರ ನೇತೃತ್ವದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ತಂಡದವರು ಪರಿಹಾರ ಕ್ರಮಗಳನ್ನು ಕೈಗೊಂಡು ಶೆಡ್‍ನಲ್ಲಿ ಸಿಲುಕಿದ್ದ ಕುರಿಗಳ ಮಾಲೀಕರಾದ ಬ್ಯಾಹಟ್ಟಿ ಗ್ರಾಮದ ಹಜರೇಸಾಬ ಹುಸೇನಸಾಬ ನೂಲ್ವಿ ಮತ್ತು ರಾಯಪ್ಪ ರಾಮಪ್ಪ ಕಬ್ಬೇರ ಹಾಗೂ ಆಯಟ್ಟಿ ಗ್ರಾಮದ ಹನಮಂತಪ್ಪ ಕಲ್ಲಪ್ಪ ಬೇವೂರ ಅವರನ್ನು ರಕ್ಷಿಸಲಾಯಿತ್ತು. ಮತ್ತು ಅಂದಾಜು 100 ಕುರಿಗಳನ್ನು ಅಗ್ನಿ ಶಾಮಕ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಗಿದೆ. ಇವುಗಳ ಪೈಕಿ ಎರಡು ಕುರಿಗಳು ಹಳ್ಳದಲ್ಲಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಾಗಿದೆ.

ಹುಬ್ಬಳ್ಳಿ ತಾಲ್ಲೂಕು ಇಂಗಳಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಣ್ಣಿ ಹಳ್ಳಕ್ಕೆ ನೀರು ಬಂದು ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾರರಾದ ಇಂಗಳಳ್ಳಿ ಗ್ರಾಮ ನಿವಾಸಿಗಳಾದ ಹುಸೇನಸಾಬ ದುದುಸಾಬ ತಹಶೀಲ್ದಾರ, ಚನಬಸಪ್ಪ ಮಲ್ಲಪ್ಪ ಕುರಿ ಮತ್ತು ಮೌಲಾಸಾಬ ಪಕ್ರುಸಾಬ ನದಾಫ ಅವರನ್ನು ಪೊಲೀಸ್ ಹಾಗೂ ಅಗ್ನಿಶಾಮಕ ತಂಡಗಳು ರಕ್ಷಣೆ ಮಾಡಿದವು.

ಈ ಮೂವರಿಗೆ ಸೇರಿದ್ದ ಅಂದಾಜು 470 ಕುರಿ ಮತ್ತು ಆಡುಗಳನ್ನು ಅಗ್ನಿಶಾಮಕ ಇಲಾಖೆಯವರ ಸಹಾಯದಿಂದ ಬೋಟ್ ಮೂಲಕ ಹೊರಗಡೆ ತಗೆದು ರಕ್ಷಿಸಲಾಗಿದೆ. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮತ್ತು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ ಹತ್ತಿರದ ಬೆಣ್ಣಿಹಳ್ಳದಲ್ಲಿ ಸಿಲುಕಿದ ಮೊರಬ ಗ್ರಾಮದ ಮೂರು ಜನರನ್ನು ರಕ್ಷಣೆ ಮಾಡಲಾಗಿದ್ದು ಮತ್ತು 300 ಕುರಿಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಜೆ.ಬಿ. ಮಜ್ಜಗಿ, ಹೆಚ್ಚುವರಿ ಎಸ್.ಪಿ. ನಾರಯಣ ಭರಮನಿ, ಸ್ಥಳೀಯ ಪೊಲೀಸ್ ಅಧಿಕಾರಿಗಳು, ಗ್ರಾಮೀಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಹಾಯಕ ಕೃಷಿ ನಿರ್ದೇಶಕರು, ಹುಬ್ಬಳ್ಳಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಮತ್ತು ಗ್ರಾಮ ಪಂಚಾಯತ ಸದಸ್ಯರು ಹಾಜರಿದ್ದರು.

ಮನೆಹಾನಿ

ನಿರಂತರ ಮಳೆಯಿಂದಾಗಿ ಜಿಲ್ಲೆಯ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ 3 ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ತಾಲೂಕಿನ ತಹಶೀಲ್ದಾರರು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಶಾಸಕ ಎಮ್.ಆರ್.ಪಾಟೀಲ ವಿವಿಧ ಗ್ರಾಮಗಳಿಗೆ ಭೇಟಿ

ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಎಮ್.ಆರ್.ಪಾಟೀಲ ಅವರು ಕುಂದಗೋಳ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಕುಂದಗೋಳ ತಾಲೂಕಿನ ಬೆನಕನಹಳ್ಳಿ, ಹಿರೇನರ್ತಿ, ಬಸಪೂರ ಬೆನಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಸಕರು ಭೇಟಿ ನೀಡಿದರು. ಬೆನಕನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರು ವಾಸಿಸುವ ಓಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಕೆಲ ಮನೆಗಳ ಒಳಗಡೆ ನೀರು ನುಗ್ಗಿದ್ದನ್ನು ಪರಿಶೀಲಿಸಿದರು.

ಹಿರೇನರ್ತಿ ಗ್ರಾಮದ ಬ್ರಿಡ್ಜ್, ರಸ್ತೆ ಕುಸಿದ ಬಗ್ಗೆ, ಶಾಲಾ ಆವರಣದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ತುಂಬಿದ ಬಗ್ಗೆ, ಚರಂಡಿ ದುರಸ್ತಿ ಬಗ್ಗೆ ಪರಿಶೀಲನೆ ಮಾಡಿದರು. ಬಸಪೂರ ಗ್ರಾಮದ ಕೆರೆಯ ಕೊಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ರಾಜು ಮಾವರಕರ ಸೇರಿದಂತೆ ವಿವಿಧ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು, ಇತರರು ಇದ್ದರು.

ಧಾರವಾಡ ಜಿಲ್ಲೆಯ ಹವಾಮಾನ ವರದಿ

ರಾಜ್ಯ ಹವಾಮಾನ ಇಲಾಖೆಯ ವರದಿಯಂತೆ ಜೂನ್ 11, 2025 ರಂದು ಹುಬ್ಬಳ್ಳಿ ತಾಲ್ಲೂಕಿನ ಶಿರುಗುಪ್ಪಿ ಹೊಬಳಿಯಲ್ಲಿ 90.8 ಮೀ.ಮೀ ಗರಿಷ್ಠ ಪ್ರಮಾಣದ ಹಾಗೂ ಅಳ್ಳಾವರ ತಾಲ್ಲೂಕಿನ ಅಳ್ಳಾವರ ಹೊಬಳಿಯಲ್ಲಿ 4.8 ಮೀ.ಮೀ ಕನಿಷ್ಠ ಪ್ರಮಾಣದ ಮಳೆಯಾಗಿರುವ ವರದಿಯಾಗಿದೆ.

ಮುಂದಿನ ಮೂರು ದಿನಗಳ ಹವಾಮಾನ ವರದಿಯಂತೆ ಜೂನ್ 12 ರಂದು ಎಲ್ಲೋ ಅಲರ್ಟಿ, ಜೂನ್ 13 ಮತ್ತು 14 ರಂದು ಆರೆಂಜ್ ಅಲರ್ಟಿ ಇರುತ್ತದೆ.

ಜೂನ್ 6 ರಿಂದ ಜೂನ್ 12 ರವರೆಗೆ ಮಳೆಯಿಂದ ಕೈಗೊಂಡ ಕ್ರಮಗಳು: ರಾಜ್ಯ ಹವಾಮಾನ ಇಲಾಖೆಯ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಜೂನ್ 12 ರಂದು ಒಂದು ದಿನ ರೆಡ್ ಅಲರ್ಟ್ ಹಾಗೂ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹವಾಮಾನ ಇಲಾಖೆಯಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಂತೆ ಈಗಾಗಲೇ ಆದೇಶಿಸಲಾಗಿದೆ. ಮತ್ತು ಧಾರವಾಡ ಜಿಲ್ಲೆಯ ಜಲಪ್ರದೇಶಗಳಲ್ಲಿ ಸಾರ್ವಜನಿಕರ ಅನಧಿಕೃತ ಪ್ರವೇಶವನ್ನು ನಿಭರ್ಂಧಿಸುವ ಬಗ್ಗೆ ಆದೇಶ ನೀಡಲಾಗಿದೆ.

ಪ್ರವಾಹಕ್ಕ ಒಳಗಾಗುವ ಪ್ರದೇಶಗಳಿಗೆ ಹಾಗೂ ಸಮಸ್ಯೆ ಇರುವ ಸ್ಥಳಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರ ಭೇಟಿ ನೀಡಿ, ಸಾರ್ವಜಿಕರ ಸಮಸ್ಯೆಗಳಿಗೆ ಸ್ಪಂಧಿಸಿದ ಪರಿಹರಿಸಲು ಕ್ರಮವಹಿಸಲಾಗಿದೆ.

ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಅಚ್ಚು-ಕಟ್ಟು ಪ್ರದೇಶದ ಪ್ರಸ್ತುತ ಹಾಗೂ ಮುಂದಿನ ಒಂದು ವಾರ ಸಂಭವಿಸಬಹುದಾದ ಮಳೆ ಪ್ರಮಾಣದ ವಿವರಗಳನ್ನು ರಾಜ್ಯ ಹವಾಮಾನ ಇಲಾಖೆಯಿಂದ ಪಡೆದುಕೊಂಡು ತಾಲ್ಲೂಕಿನ ಅಧಿಕಾರಿ, ಸಿಬ್ಬಂದಿಗಳಿಗೆ ಈ ಕುರಿತು ಜಾಗೃತಿ ಹಾಗೂ ಮುನ್ನೆಚ್ಚರಿಕೆ ವಹಿಸಲು ಪ್ರಾಧಿಕಾರದಿಂದ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯ ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳದ ದಡದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಕುರಿತು ಡಂಗುರ ಸಾರುವ ಮೂಲಕ ಹಾಗೂ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ತಾಲೂಕುವಾರು ಮಳೆ ಮಾಹಿತಿ : ಕಳೆದ 24 ಗಂಟೆಯಲ್ಲಿ ಧಾರವಾಡ ತಾಲೂಕಿನಲ್ಲಿ 6.6 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 19.9 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 188 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಹುಬ್ಬಳ್ಳಿ ತಾಲೂಕಿನಲ್ಲಿ 4.2 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 71.5 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 1602 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಕಲಘಟಗಿ ತಾಲೂಕಿನಲ್ಲಿ 4.0 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 9.2 ರಷ್ಟು ವಾಸ್ತವಿಕವಾಗಿ ಮಳೆಯಾಗಿದ್ದು, ಶೇ. 130 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಕುಂದಗೋಳ ತಾಲೂಕಿನಲ್ಲಿ 4.2 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 63.2 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 1405 ರಷ್ಟು ಹೆಚ್ಚುವರಿ ಮಳೆಯಾಗಿದೆ.

ನವಲಗುಂದ ತಾಲೂಕಿನಲ್ಲಿ 3.2 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 56.7 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 1672 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಹುಬ್ಬಳ್ಳಿ ನಗರ 3.2 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 30.4 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 850 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಅಳ್ಳಾವರ ತಾಲೂಕಿನಲ್ಲಿ 7.1 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, ಕೇವಲ 4.8 ರಷ್ಟು ವಾಸ್ತವಿಕವಾಗಿ ಮಳೆಯಾಗಿದ್ದು, ಶೇ. -32 ರಷ್ಟು ಮಳೆ ಕೊರತೆಯಾಗಿದೆ.

ಅಣ್ಣಿಗೇರಿ ತಾಲೂಕಿನಲ್ಲಿ 7.1 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 56.9 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 701 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ (ಜೂ.12 ರ ಬೆಳಿಗ್ಗೆ 8:30 ರ ವರೆಗೆ) 4.7 ಮಿಲಿಮೀಟರ್ ಆಗಬೇಕಿದ್ದ ಸಾಮಾನ್ಯ ಮಳೆಗೆ, 40.9 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 770 ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ತುರ್ತು ಸಂಪರ್ಕಕ್ಕಾಗಿ ಸಹಾಯವಾಣಿ ಕೇಂದ್ರಗಳು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಇತರ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಜಿಲ್ಲೆಯ ಮಹಾನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ನಿರಾಶ್ರಿತರು, ಬಾಧಿತರು ಮತ್ತು ಸಾರ್ವಜನಿಕರು ತುರ್ತಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರ ಅವರ ಕಾರ್ಯಾಲಯದಲ್ಲಿ ಮತ್ತು ಮಹಾನಗರ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿ, ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿ, ಕ್ರಮಕೈಗೊಂಡಿದ್ದಾರೆ.

ಅದರಂತೆ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 0836-2445508 ಹಾಗೂ 1077, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ: 0836-2233860, ಧಾರವಾಡ ತಹಶೀಲ್ದಾರರ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 0836-2233822, ಅಳ್ಳಾವರ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 0836-2385544, ಹುಬ್ಬಳ್ಳಿ ನಗರ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 0836-2358035, ಹುಬ್ಬಳ್ಳಿ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ:0836-2233844, ಕಲಘಟಗಿ ತಹಶೀಲ್ದಾರರ ಕಾರ್ಯಾಲಯಾದ ಸಹಾಯವಾಣಿ ಸಂಖ್ಯೆ:08370-284535, ಕುಂದಗೋಳ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 08304-290239.

ನವಲಗುಂದ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 08380-229240, ಅಣ್ಣಿಗೇರಿ ತಹಶೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 8618442759 ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು 0836-2213888, 0836-2213889, 0836-2213869 ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಮತ್ತು ತೊಂದರೆಗಿಡಾದ ಸಾರ್ವಜನಿಕರು ವಾಟ್ಸಪ್ ಸಂದೇಶದ ಮೂಲಕ ಸಹಾಯವಾಣಿ 8277803778 ಗೆ

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!