ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ (Bhopal) ಐಶ್‌ಬಾಗ್ ಕ್ರೀಡಾಂಗಣದ ಬಳಿ ಹೊಸದಾಗಿ ನಿರ್ಮಿಸಲಾದ ರೈಲ್ವೆ ಮೇಲ್ವೇತುವೆ ಉದ್ಘಾಟನೆಗೂ ಮುನ್ನವೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.
ಈ ಮೇಲ್ವೇತುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೇಂದ್ರದ ಮೋದಿ ಸರ್ಕಾರದ ಟೆಕ್ನಲೋಜಿಯಾ, ಟೆಕ್ನಲೋಜಿಯಾ ವಿಶೇಷ ಸೇತುವೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.
Newly built Bridge in Bhopal with 90 Degrees turn 😂 pic.twitter.com/LgFwuB2gza
— Hyderabad Intellectuals Forum 🇮🇳 (@HydForum) June 11, 2025
ಮಾರ್ಚ್ 2023ರಲ್ಲಿ ಕಾಮಗಾರಿ ಪ್ರಾರಂಭವಾದ ಸೇತುವೆ ಸದ್ಯ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.
ಒಟ್ಟು 648 ಮೀಟರ್ ಉದ್ದ ಮತ್ತು 8.5 ಮೀಟರ್ ಅಗಲದ ಈ ಸೇತುವೆಯನ್ನು 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಸೇತುವೆ ತೀಕ್ಷ್ಮವಾದ 90 ಡಿಗ್ರಿಯ ತಿರುವು ಹೊಂದಿದೆ.
This is the Aishbagh rail-over-bridge in Bhopal. Madhya Pradesh PWD took 10 years to create this engineering marvel. Apart from being a traffic choke point, that 90° turn is a disaster waiting to happen, unless there’s proper banking, signage, speed breakers, and lighting.
— Satyamurthy Nageswaran (@satya_murthy) June 12, 2025
How… pic.twitter.com/fjHpKIN9lv
ಪ್ರತಿನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ಈ ಮೇಲ್ವೇತುವೆಯಲ್ಲಿ 90 ಡಿಗ್ರಿಯ ತಿರುವು ಇರುವುದು ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇದು ಅಪಘಾತದ ಕೇಂದ್ರ ಸ್ಥಳವಾಗುವುದರಲ್ಲಿ ಎರಡು ಮಾತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, ಅನಾಹುತಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿಯ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಕೂಡ ಈ ಮೇಲ್ವೇತುವೆ ನಿರ್ಮಾಣದ ಬಗ್ಗೆ ವ್ಯಂಗ್ಯವಾಡಿದ್ದು, ಪ್ರಧಾನಿ ಮೋದಿ ಕಾಲದ ವಿಶೇಷ ಸೇತುವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.