ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇತಿಹಾಸದಲ್ಲೇ ಅತೀ ದೊಡ್ಡ ದುರಂತ ಎಂದೇ ಹೇಳಲಾಗಿರುವ ಏರ್ ಇಂಡಿಯಾ AI-171 ವಿಮಾನದ ಬಾಲ ಭಾಗದ ಅವಶೇಷಗಳಿಂದ ರಕ್ಷಣಾ ಪಡೆ ಇಂದು ಮತ್ತೊಂದು ಶವವನ್ನು ಪತ್ತೆ ಮಾಡಿದೆ.
ಲಂಡನ್‌ಗೆ ತೆರಳುತ್ತಿದ್ದ ವಿಮಾನ ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ 33 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿತ್ತು.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳದಲ್ಲಿ ಪುರಾವೆಗಳನ್ನು ಹುಡುಕುತ್ತಿರುವ ವಿಧಿವಿಜ್ಞಾನ ತಜ್ಞರು.
ಲಂಡನ್ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಸಂಭವಿಸಿದ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 275 ಏರಿಕೆಯಾಗಿದೆ ಮ
ಮೇಘಾನಿ ನಗರ ಪ್ರದೇಶದ ವೈದ್ಯಕೀಯ ಕಾಲೇಜಿನ ಬಳಿಯ ವೈದ್ಯರ ಹಾಸ್ಟೆಲ್ನ ಮೇಲ್ಪಾವಣಿಯಲ್ಲಿ ಹುದುಗಿಸಲಾದ ಬೋಯಿಂಗ್ 787-8 ಗ್ರೀಮ್‌ಲೈನರ್ ವಿಮಾನದ ಬಾಲದಲ್ಲಿ ಮೃತದೇಹ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.