ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ (Pahalgam terrorist attack), ಯಶಸ್ವಿ ಆಪರೇಷನ್ ಸಿಂಧೂರದ (Operation Sindoora) ಕುರಿತು ಏಕಾಏಕಿ ಪಾಕ್ ಜೊತೆ ಕದನ ವಿರಾಮ (ceasefire), ಏರ್ ಇಂಡಿಯಾ ವಿಮಾನ ಪತನ (Air India plane crash) ಕುರಿತಂತೆ ಮೋದಿ (Modi) ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಸರಣಿ ವಾಗ್ದಾಳಿಗೆ ಗುರಿಯಾಗಿದೆ.
ವಿಮಾನ ಪತನದ ಕುರಿತು ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ ಎಂದಿರುವ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಸಂಸದ ಸಂಜಯ್ ರಾವುತ್ ವಾಗ್ದಾಳಿ ಬೆನ್ನಲ್ಲೇ ಕಾಂಗ್ರೆಸ್, ಭಾರತ ಮತ್ತು ಪಾಕಿಸ್ತಾನದ ನಡುವೆ “ಕದನ ವಿರಾಮ” ತಂದಿದ್ದೇನೆ ಎಂದು 13 ಸಂದರ್ಭಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ “ತುತ್ತೂರಿ” ಊದಿದ್ದಾರೆ ಎಂದು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಗಳ ಬಗ್ಗೆ ಯಾವಾಗ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಕೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ಚಿಟ್ ಮಾಡಿ, “ಇಂದು ಅಧ್ಯಕ್ಷ ಟ್ರಂಪ್ 79 ವರ್ಷಗಳಿಗೆ ಕಾಲಿಡುತ್ತಿದ್ದಾರೆ. ಮೇ 10, 2025 ರಿಂದ ಜೂನ್ 13, 2025 ರ ನಡುವಿನ 34 ದಿನಗಳಲ್ಲಿ, ಅವರು 3 ವಿಭಿನ್ನ ದೇಶಗಳಲ್ಲಿ 13 ವಿಭಿನ್ನ ಸಂದರ್ಭಗಳಲ್ಲಿ ಅಮೆರಿಕದೊಂದಿಗಿನ ವ್ಯಾಪಾರವನ್ನು ಕ್ಯಾರೆಟ್ ಮತ್ತು ಕೋಲಿನಂತೆ ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ತಂದಿದ್ದಾರೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ಇದೇ ವೇಳೆ ಅವರು (ಟ್ರಂಪ್) ಎರಡೂ ದೇಶಗಳನ್ನು (ಭಾರತ-ಪಾಕ್) ಸರಿ ಸಮಾನ ಎಂಬಂತೆ ಮಾತಾಡಿದ್ದಾರೆ.
ಮೋದಿ ಅವರೇ ನೀವು ಯಾವಾಗ ಮಾತನಾಡುತ್ತೀರಿ ಎಂದು ಕಾಂಗ್ರೆಸ್ ನಾಯಕರು ಪೋಸ್ಟ್ನಲ್ಲಿ ಕೇಳಿದ್ದಾರೆ.
ಅಲ್ಲದೆ ಅಮೆರಿಕ ಅಧ್ಯಕ್ಷರ ಉಲ್ಲೇಖಗಳು ಮತ್ತು ಮಾಧ್ಯಮ ವರದಿಗಳ ಲಿಂಕ್ಗಳೊಂದಿಗೆ ಟ್ರಂಪ್ ಹೇಳಿಕೆಗಳನ್ನು ನೀಡಿದ ಸಂದರ್ಭಗಳ ಪಟ್ಟಿ ಮತ್ತು ವಿವರಗಳನ್ನು ರಮೇಶ್ X ನಲ್ಲಿ ಹಂಚಿಕೊಂಡಿದ್ದಾರೆ.
अमेरिका के राष्ट्रपति डोनाल्ड ट्रंप आज 79 वर्ष के हो गए हैं।
— Jairam Ramesh (@Jairam_Ramesh) June 14, 2025
10 मई 2025 से 13 जून 2025 के बीच के 34 दिनों में उन्होंने 3 अलग-अलग देशों में 13 बार सार्वजनिक रूप से यह दावा किया कि भारत और पाकिस्तान के बीच संघर्ष विराम उन्हीं की वजह से हुआ – और वह भी इस दावे के साथ अमेरिका के साथ… pic.twitter.com/pFPxlP8RtO
“ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ” ಎಂದು ಟ್ರಂಪ್ ತಮ್ಮ ಹೇಳಿಕೆಯನ್ನು ಪುನರಾವರ್ತಿಸುತ್ತಿರುವಾಗ, ಅಮೆರಿಕ ಅಧ್ಯಕ್ಷರು “13 ಬಾರಿಗೆ” ತಮ್ಮ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಆದರೆ ಪ್ರಧಾನಿ ಮೋದಿ ಅವರ ಬಗ್ಗೆ ಮೌನವಾಗಿದ್ದಾರೆ ಎಂದು ರಮೇಶ್ ಶುಕ್ರವಾರ ಹೇಳಿದರು.
“ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ” ಮತ್ತು “ವ್ಯಾಪಾರದೊಂದಿಗೆ” ಅದನ್ನು ನಿಲ್ಲಿಸಿದೆ ಎಂಬ ತನ್ನ ಹೇಳಿಕೆಯನ್ನು ಪುನರಾವರ್ತಿಸಿದ ಟ್ರಂಪ್ ಅವರ X ಹೇಳಿಕೆಯ ವೀಡಿಯೊ ಕ್ಲಿಪ್ ಅನ್ನು ರಮೇಶ್ ಹಂಚಿಕೊಂಡಿದ್ದಾರೆ.
ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಭಾರತ ದುಃಖದಲ್ಲಿ ಮುಳುಗಿರುವಾಗ, ಅಧ್ಯಕ್ಷ ಟ್ರಂಪ್ “13 ಬಾರಿಗೆ” ಭಾರತ ಮತ್ತು ಪಾಕಿಸ್ತಾನದ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ರಮೇಶ್ ಕಿಡಿಕಾರಿದ್ದಾರೆ.