ಶಿವಮೊಗ್ಗ: ಕಾಂತಾರಾ-1 (Kantara-1) ಸಿನಿಮಾ ಚಿತ್ರೀಕರಣ ವೇಳೆ ಮತ್ತೊಂದು ಅವಘಡ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಸೇರಿ ಅವರ ತಂಡ ಅಪಾಯದಿಂದ ಪಾರಾಗಿದೆ.
ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕಾಂತಾರ-1 ಸಿನಿಮಾ ಶೂಟಿಂಗ್ ನಡೆಯುತ್ತಿ ದ್ದು, ಶನಿವಾರ ಸಂಜೆ ಶೂಟಿಂಗ್ ಮುಗಿಸಿ ದೋಣಿಯಲ್ಲಿ ವಾಪಸ್ಸು ಹಿಂತಿರುಗುತಿದ್ದ ವೇಳೆ ಕ್ಯಾಮೆರಾ ಒಂದು ದೋಣಿಯಿಂದ ಜಾರಿತು ಎನ್ನಲಾಗಿದ್ದು, ಇದನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ದೋಣಿ ಆಯತಪ್ಪಿದೆ.
ದೋಣಿಯಲ್ಲಿದ್ದ ರಿಷಬ್ ಶೆಟ್ಟಿ ಸೇರಿದಂತೆ ಐದಾರು ಜನ ನೀರಿಗೆ ಬಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಬಹುತೇಕ ದಡದ ಸಮೀಪ ಬಂದಿದ್ದರಿಂದ ನೀರಿಗೆ ಬಿದ್ದವರು ಆರಾಮವಾಗಿ ದಡ ಸೇರಿದ್ದಾರೆ.
ಒಂದು ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಯಾವುದೇ ಅನಾಹುತ ನಡೆಯದೆ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.