ದೊಡ್ಡಬಳ್ಳಾಪುರ: ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ CC TV Camera ಅಳವಡಿಕೆ ಮಂಡಿಸಿದ್ದಾರೆ.
ಹೊಸಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪತ್ತೆಹಚ್ಚುವ ಮತ್ತು ಅಪರಾಧಗಳನ್ನು ತಡೆಯುವ ಸಲುವಾಗಿ ಠಾಣಾ ವ್ಯಾಪ್ತಿಯಲ್ಲಿನ ನೆಲ್ಲುಕುಂಟೆ ಕ್ರಾಸ್ ನಿಂದ ಅರೂಢಿ, ಬನವತಿವರೆಗೆ, ಲಿಂಗದವೀರನಹಳ್ಳಿ ಯಿಂದ ಬಂಕೆನಹಳ್ಳಿ ವರೆಗಿನ ವಿವಿಧ ಗ್ರಾಮಗಳಲ್ಲಿ ಕೂಡು ರಸ್ತೆ, ಮುಖ್ಯ ವೃತ್ತ, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ 23 ಸೋಲಾರ್ ಸಿಸಿ ಟಿವಿ ಅಳವಡಿಸಿದ್ದಾರೆ.
ಹೊಸಹಳ್ಳಿ ಗ್ರಾಮ ಪಂಚಾಯಿತಿ, ಅರೂಢಿ ಗ್ರಾಮ ಪಂಚಾಯಿತಿ, ದಾನಿಗಳ ನೆರವಿನಿಂದ 180ಡಿಗ್ರಿ ಧ್ವನಿಸಹಿತ ಗ್ರಹಿಸುವ ವ್ಯವಸ್ಥೆ ಹಾಗೂ ಸ್ಪೀಕರ್ ಹೊಂದಿರುವ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಈ ಎಲ್ಲಾ ಸಿಸಿ ಕ್ಯಾಮೆರಾ ಗಳನ್ನು ಹೊಸಹಳ್ಳಿ ಪೊಲೀಸ್ ಠಾಣೆಯ ಮಾನಿಟರ್ ಗೆ ನೇರ ಸಂಪರ್ಕ ಮಾಡಲಾಗಿದ್ದು, ದಿನದ 24 ಗಂಟೆಗೆಲ ಕಾಲ ಮಾನಿಟರ್ ಮಾಡಲಾಗುತ್ತದೆ
ಅಲ್ಲದೆ ಪೊಲೀಸ್ ಠಾಣೆ ಸಿಬ್ಬಂದಿಯ ಮೊಬೈಲ್ ಗೆ ಸಿಸಿ ಟಿವಿ ಮಾನಿಟರಿಂಗ್ ಆಪ್ ಲಿಂಕ್ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ನೀಡುವ ವ್ಯವಸ್ಥೆ ಹೊಂದಿವೆ.
ಹೊಸಹಳ್ಳಿ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಗ್ರಾಮಗಳಲ್ಲಿ ಅಪರಾಧ ಪತ್ತೆಹಚ್ಚುವ ಮತ್ತು ಅಪರಾಧಗಳನ್ನು ತಡೆಯುವುದು. ಪುಂಡರ ಹಾವಳಿಗೆ ಕಡಿವಾಣ, ಕುಡುಕರ ಉಪಟಳ ತಡೆಯಲು ಸಾಧ್ಯವಾಗಲಿದೆ.