ಹರ್ದೋ: ಪೆಟ್ರೋಲ್ ಬಂಕ್ (Petrol Bunk) ನಲ್ಲಿ ತಂದೆಯೊಂದಿಗೆ ಜಗಳ ಆಡಿದರಿಂದ ಕೆರಳಿದ ಯುವತಿ, ಪಂಪ್ ಉದ್ಯೋಗಿಯ ಎದೆಗೆ ಗನ್ ಇಟ್ಟು ವಾರ್ನಿಂಗ್ ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಹರ್ದೋಯಲ್ಲಿ ಭಾನುವಾರ ಸಂಜೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ Video ವೈರಲ್ ಆಗಿದೆ.
ಹರ್ದೋ ಜಿಲ್ಲೆಯ ಸ್ಯಾಂಡಿ ರಸ್ತೆಯಲ್ಲಿರುವ ಎಚ್ಚಿ ಸಿಎನ್‌ಜಿ ಪೆಟ್ರೋಲ್ ಪಂಪ್ಗೆ ಶಹಾಬಾದ್ ನಿವಾಸಿ ಎಕ್ಸಾನ್ ಖಾನ್ ತನ್ನ ಪತ್ನಿ ಮತ್ತು ಮಗಳು ಅರಿಬಾ ಜೊತೆ ಭಾನುವಾರ ತನ್ನ ವಾಹನಕ್ಕೆ ಇಂಧನ ತುಂಬಿಸಲು ಪಂಪ್ ಗೆ ಬಂದಿದ್ದರು.
ಸಿಎನ್‌ಜಿ ಭರ್ತಿ ಮಾಡುವಾಗ ಕೆಳಗಿಳಿಯುವಂತೆ ಸಿಬ್ಬಂದಿಗಳು ಹೇಳಿದ್ದಾರೆ. ಆಗ ಖಾನ್ ಮತ್ತು ಪಂಪ್ ಉದ್ಯಮಿ ರಜನೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ.
ವಾಗ್ವಾದ ತಾರಕಕ್ಕೇರಿದ್ದು, ಖಾನ್ ಅವರ ಮಗಳ ಅರಿಬಾ ಕಾರಿನಿಂದ ಇಳಿದು ಬಂದು ರಜನೀಶ್ ಗೆ ಬಂದೂಕು ತೋರಿಸಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Peak Law & Order in UP
— 𝗩eena Jain (@DrJain21) June 16, 2025
A CNG operator asked passengers to get down to fill gas in car. A lady got angry & came with a Rev@lver
If this happened in Bengaluru, it would have been the National news. But since it's UP, Godi media won't even report it 🙌
pic.twitter.com/GuoKYAwavD
ಈ ಘಟನೆಯ ಪ್ರತ್ಯಕ್ಷದರ್ಶಿಗಳ ಪ್ರಕಾರ ಯುವತಿ ರಜನೀಶ್ ಗೆ ಬೆದರಿಕೆ ಹಾಕಿದ್ದು, ನಿನ್ನ ಕುಟುಂಬದವರು ಕಂಡು ಹಿಡಿಯಲು ಸಾಧ್ಯವಾಗದ ಹಾಗೆ ಗುಂಡುಗಳನ್ನ ನಿನ್ನ ದೇಹದ ಒಳಗೆ ಹಾಕುತ್ತೇನೆ ಎಂದು ಹೆದರಿಸಿದ್ದಾರೆ ಎನ್ನಲಾಗಿದೆ.
ಇನ್ನು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಎಕ್ಸಾನ್ ಖಾನ್, ಪತ್ನಿ ಮತ್ತು ಮಗಳು ಅರಿಬಾ ಮೇಲೆ ಎಫ್‌ಐಆರ್ ದಾಖಲಾಗಿದೆ. ಹಾಗೆಯೇ, ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಲ್ಯಾಮ್ ಪೊಲೀಸ್ ಠಾಣೆಯ ಉಸ್ತುವಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪ್ರಕರಣ ಬೆಂಗಳೂರಿನಲ್ಲಿ (ಕರ್ನಾಟಕ) ಆಗಿದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗುತ್ತಿತ್ತು. ಉತ್ತರಪ್ರದೇಶದಲ್ಲಿ ಆದ ಘಟನೆ ಎಂಬ ಕಾರಣ ಅನೇಕ ಮಾಧ್ಯಮಗಳು ವರದಿ ಮಾಡುತ್ತಿಲ್ಲ ಎಂದು ಲೇವಡಿ ಮಾಡಲಾಗುತ್ತಿದೆ.