ಗೊಂಡಿಯಾ; ಕಾಡು ಪ್ರಾಣಿಗಳ ಕಂಡ್ರೆ ಓಡೋಗಿ ಮನೆ ಸೇರೇದೋ ನೋಡಿದ್ದೀವಿ. ಆದ್ರೆ ಇಲ್ಲೊಂದು ಕಡೆ ಹುಲಿಯನ್ನು (Tiger) ಕೈಗೆ ಸಿಕ್ಕ ಕಲ್ಲುಗಳಿಂದ ಓಡಿಸುತ್ತಾ ಯುವಕರು ಸಾಗಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಹುಲಿಯ ಮೇಲೆ ಕಲ್ಲು ಎಸೆಯುತ್ತಾ ಯುವಕರು.. ಹುಲಿ ಹಿಂದಕ್ಕೆ ತಿರುಗುತ್ತಿದ್ದಂತೆ ಯುವಕರು ಓಟ ಕಿತ್ತಿದ್ದಾರೆ.
ಮಹಾರಾಷ್ಟ್ರದ ಗೊಂಡಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜಮೀನು ಬಳಿ ಓಡಾಡುತ್ತಿದ್ದ ಹುಲಿಯ ಮೇಲೆ ಯುವಕರು ಕೈಗೆ ಸಿಕ್ಕ ಕಲ್ಲುಗಳನ್ನು ಎಸೆದು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹುಲಿ ಇದ್ದಕ್ಕಿದ್ದಂತೆ ದಾಳಿ ಮಾಡಲು ಹಿಂತಿರುಗಿದ್ದು, ಯುವಕರು ಎದ್ನೋಬಿದ್ನೋ ಎಂಬಂತೆ ಓಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ