ಫಿರೋಜ್‌ಪುರ: ಕ್ರಿಕೆಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಯುವಕ ಸಿಕ್ಸ್ ಹೊಡೆದ ಬೆನ್ನಲ್ಲೇ ಹೃದಯಾಘಾತ (Heart Attack) ಸಂಭವಿಸಿ, ಮೈದಾನದಲ್ಲೇ ಸಾವನಪ್ಪಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತನನ್ನು ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಪಂಜಾಬ್‌ನ ಫಿರೋಜ್‌ಪುರದ ಡಿಎವಿ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಬ್ಯಾಟ್ಸ್‌ಮನ್‌ಗೆ ಹೃದಯಾಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ.
ಸಹ ಆಟಗಾರರಿಗೆ ಏನಾಗುತ್ತಿದೆ ಎಂದು ಅರ್ಥವಾಗುವ ಹೊತ್ತಿಗೆ, ಆ ಯುವಕ ನೆಲದ ಮೇಲಗಿ ಅಸುನೀಗಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಯುವಕರು ಅಕಾಲಿಕ ಮರಣ ಹೊಂದುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಅನೇಕರು ಕೋವಿಡ್ ಲಸಿಕೆಯ ಮೇಲೆ ಆರೋಪ ಮಾಡುತ್ತಿದ್ದಾರೆ.