ಹೈದರಾಬಾದ್: ತೆಲುಗು ಸುದ್ದಿ ವಾಹಿನಿಗಳಲ್ಲಿ 18 ವರ್ಷಗಳಿಂದ ನಿರೂಪಕಿಯಾಗಿ, ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಶ್ವೇಚ್ಛಾ ವೋತಾರ್ಕರ್ (Swetcha Votarkar) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಹಿಂದೆ ಟಿವಿ 9 ತೆಲುಗಿನ ಸುದ್ದಿ ನಿರೂಪಕಿಯಾಗಿದ್ದ ಶ್ವೇಚ್ಛಾ ಪ್ರಸ್ತುತ ಟಿ ನ್ಯೂಸ್ ಚಾನೆಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಹೈದರಾಬಾದ್‌ನ ಜವಾಹರ್ ನಗರದಲ್ಲಿನ ಮನೆಯಲ್ಲಿ ರೂಮ್‌ನಲ್ಲಿನ ಫ್ಯಾನ್‌ಗೆ ಲುಂಗಿಯಿಂದ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶ್ವೇಚ್ಛಾ ದೇಹ ಪತ್ತೆಯಾಗಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಶ್ವೇಚ್ಛಾ ತಾಯಿ ಶ್ರೀದೇವಿ ಹಾಗೂ ಮಗಳೊಂದಿಗೆ ಜತೆ ವಾಸಿಸುತ್ತಿದ್ದರು. ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಶ್ವೇಚ್ಛಾ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ಗಂಟೆಗಳ ಮೊದಲು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ರು. ಅದರಲ್ಲಿ ಧ್ಯಾನ ಮಗ್ನ ಸ್ಥಿತಿಯಲ್ಲಿ ಮರದಡಿ ಕುಳಿತಿರುವ ತಮ್ಮದೇ ಫೋಟೋವನ್ನು ಹಂಚಿಕೊಂಡಿದ್ದರು.
ಬುದ್ಧನ ಬೋಧನೆ ಉಲ್ಲೇಖಿಸಿ ಸಂದೇಶ ಬರೆದಿದ್ದರು. ಮನಸ್ಸು ಶಾಂತವಾಗಿದ್ದರೆ, ಆತ್ಮ ಮಾತನಾಡುತ್ತದೆ ಎಂದು ಬರೆದಿರುವುದು ಚರ್ಚೆ, ಶಂಕೆಗೆ ಕಾರಣವಾಗಿದೆ.