ದೊಡ್ಡಬಳ್ಳಾಪುರ; ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಆಚರಣೆಯನ್ನು (Muharram) ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ಸಡಗರದಿಂದ ಆಚರಿಸಿದರು.
ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳು ನಡೆದವು. ಉಪವಾಸ ಹಾಗೂ ಹಬ್ಬದ ಆಚರಣೆಗಳು ನಡೆದವು.
ಹಿಂದು ಮತ್ತು ಮುಸಲ್ಮಾನ ಬಾಂಧವರು ಸಕ್ಕರೆ ಕಡಲೇಪಪ್ಪು ನೇವೇದ್ಯ ಅರ್ಪಿಸಿ ಬಾಬಯ್ಯನಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರದ ದರ್ಗಾ ಮೊಹಲ್ಲಾ,ಚಿಕ್ಕಪೇಟೆ, ಈದ್ಗಾ ಮೊಹಲ್ಲಾಗಳಲ್ಲಿನ ಆಶುಖಾನಾದಲ್ಲಿ ಮೊಹರಂ ಬಾಬಯ್ಯನ ಪೂಜೆಯ ಸಮಾರೋಪದ ಅಂಗವಾಗಿ ವಿಶೇಷ ಅಲಂಕಾರ ಪ್ರಾರ್ಥನೆಗಳು ನಡೆಯಿತು.

ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಕಾಡನೂರು ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು.
ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆಯುವ ಮೊಹರಂ ಐತಿಹಾಸಿಕ ಮತ್ತು ಭಾವೈಕ್ಯತೆ ಕೂಡಿದೆ. ಶನಿವಾರ ರಾತ್ರಿ ಗ್ರಾಮದ ಆಶುಖಾನ ಕೆಂಡ ಹಾಯುವ ಮೂಲಕ ಹರಕೆ ತೀರಿಸಲಾಯಿತು. ಈ ವೇಳೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳು ನಡೆದವು.