Crime News; ಹುಬ್ಬಳ್ಳಿಯಲ್ಲಿ ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ.
ಇಲ್ಲಿನ ಮಂಟೂರ ರಸ್ತೆಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಶ್ಯಾಮ್ ಜಾಧವ್ ಮತ್ತೆ ಎಮ್.ಡಿ.ದಾವೂದ್ ಬ್ರದರ್ಸ್ ನಡುವೆ ಗಲಾಟೆ ಆಗಿದೆ ಎನ್ನಲಾಗಿದೆ.
ಗಂಗಾಧರ ನಗರದ ನಿವಾಸಿ ಶ್ಯಾಮ್ ಜಾಧವ್ ಮತ್ತು ಆತನ ಸಹಚರರು ಮಂಟೂರ ರಸ್ತೆಯ ಸ್ಮಶಾನಕ್ಕೆ ಶವಸಂಸ್ಕಾರಕ್ಕೆ ಹೋಗಿದ್ದರು. ಈ ವೇಳೆ ಎಮ್.ಡಿ.ದಾವೂದ್ ಸಹೋದರ ಜಿಲಾನಿ ನದಾಫ್ ಎಂಬಾತ ರಸ್ತೆಯಲ್ಲಿ ನಿಂತಿದ್ದ, ಆಗ ಶ್ಯಾಮ್ ಜಾಧವ್ ಸಹಚರರನ್ನು ಗುರಾಯಿಸಿ ನೋಡಿದ್ದಾನೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಜಾಧವ್ ಸಹಚರರು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗುಂಪಿನ ವರು ಪರಸ್ಪರ ತಲ್ವಾರ್, ಬಾಟಲಿ, ಹಾಗೂ ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್‌ನಲ್ಲಿ ದಾಖಲು ಮಾಡಲಾಗಿದೆ. ಕಿಮ್‌ಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ವಿಷ ಕುಡಿದು ಕುಟುಂಬದ ಮೂವರು ಆತ್ಮಹತ್ಯೆ
ಬೆಳಗಾವಿ: ಇಲ್ಲಿನ ಶಹಾಪುರದ ಜೋಶಿ ಮಾಳ ಪ್ರದೇಶದಲ್ಲಿ ಬುಧವಾರ ಒಂದೇ ಕುಟುಂಬದ ಮೂವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.
ತನ್ನಿಂದ ಅರ್ಧ ಕೆ.ಜೆ ಚಿನ್ನ ಪಡೆದು ಮರಳಿ ಕೊಡದೇ ಚಿನ್ನದ ವ್ಯಾಪಾರಿ ಮೋಸ ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರು ವುದಾಗಿ ಬರೆದಿದ್ದಾರೆ.
ಮಂಗಳಾ ಕುರಡೇಕರ್ (70 ವರ್ಷ) ಇವರ ಪುತ್ರ ಸಂತೋಷ (44 ವರ್ಷ), ಪುತ್ರಿ ಸುವರ್ಣ (42 ವರ್ಷ) ಮೃತಪಟ್ಟವರು. ಇನ್ನೊಬ್ಬ ಪುತ್ರಿ ಸುನಂದಾ (40 ವರ್ಷ) ಅವರೂ ವಿಷ ಸೇವಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಸಂತೋಷ ಅವರು ಚಿನ್ನದ ಚೀಟಿ ವ್ಯವಹಾರ ಮಾಡು ತ್ತಿದ್ದರು. ಅದರಲ್ಲಿ ಉಂಟಾದ ಮೋಸವೇ ಸಾವಿಗೆ ಕಾರಣ ವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಸಳ ಮಹಜರು ಮಾಡಿದ ಶಹಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 9ರ ಸುಮಾರಿಗೆ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯರ ಸಾವು ಪ್ರಕರಣ
ಚಿಕ್ಕಮಗಳೂರು: ಕೊಪ್ಪ ಪಟ್ಟಣದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೃತಪಟ್ಟ ಇಬ್ಬರು ಬಾಲಕಿಯರ ಸಾವಿನ ಪ್ರಕರಣದ ಕುರಿತು ತನಿಖೆಗೆ ನಿವೃತ್ತ ನ್ಯಾಯಾಧೀಶೆ ಎಸ್. ಶೋಭಾ ಅವರನ್ನು ನೇಮಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಆದೇಶಿಸಿದೆ.
2025ರ ಜೂನ್ 29ರಂದು ವಸತಿ ಶಾಲೆಯ ಸ್ನಾನದ ಮನೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿತ್ತು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸ್ಥಳೀಯರು ಕೊಪ್ಪದಲ್ಲಿ ಪ್ರತಿಭಟನೆ ನಡೆಸಿದ್ದರು.
2023ರ ಜುಲೈ 27ರಂದು ಇದೇ ಶಾಲೆಯ 9ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿನಿಯ ಶವ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿತ್ತು.
ಎರಡೂ ಪ್ರಕರಣಗಳನ್ನು ತನಿಖೆ ನಡೆಸಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಪ್ರಾಂಶು ಪಾಲೆ ರಜಿನಿ ಮತ್ತು ನಿಲಯ ಪಾಲಕ(ಪ್ರಭಾರ) ಸುಂದರ ನಾಯ್ಕ ಅವರನ್ನು ಅಮಾನತು ಮಾಡಿ ಮತ್ತೊಂದು ಆದೇಶ ವನ್ನು ಕಾಂತರಾಜು ಪಿ.ಸ್. ಹೊರಡಿಸಿದ್ದಾರೆ.