Puri Jagannatha

ಹರಿತಲೇಖನಿ ದಿನಕ್ಕೊಂದು ಕಥೆ: ಪುರಿಯಲ್ಲಿ ಜಗನ್ನಾಥ ನೆಲೆಸಿದ ಪುರಾಣ

Harithalekhani; ದ್ವಾರಕೆಯ ಒಂದು ಸಂದರ್ಭ. ಕೃಷ್ಣ ಮತ್ತು ಬಲರಾಮ ಹೊರಗಡೆ ಹೋಗಿದ್ದಾರೆ. ಇವರಿಬ್ಬರ ಪ್ರೀತಿಯ ತಂಗಿ ಸುಭದ್ರ ಮನೆಯಲ್ಲಿ ಇದ್ದಳು. ಒಳಗೆ ಹೆಂಗಸರೆಲ್ಲ ಸೇರಿಕೊಂಡು ಮಾತಾಡ್ತಾ ಇರುವಾಗ, ಬಲರಾಮನ ತಾಯಿ ರೋಹಿಣಿ ಕೃಷ್ಣನ ತುಂಟಾಟದ ಕಥೆಗಳನ್ನು ಹೇಳಲು ಹೊರಟಳು.

ಆಗ ಅಲ್ಲಿದ್ದ ಎಲ್ಲರೂ ಕೃಷ್ಣನ ಕಥೆಯನ್ನು ಕುತೂಹಲದಿಂದ ಕೇಳಲು ಕಾತರರಾದರು. ಆದರೆ ಅಲ್ಲಿದ್ದ ಸುಭದ್ರೆಯನ್ನು ನೋಡಿ ಇವಳು ಇಲ್ಲೇ ಕೂತಿದ್ರೆ ಕೃಷ್ಣನ ಕಥೆಯನ್ನು ಸುಸೂತ್ರವಾಗಿ ಕೇಳಕ್ಕೆ ಬಿಡಲ್ಲ ಅವಳು ಮಧ್ಯ ಮಧ್ಯ ನೂರಾರು ಪ್ರಶ್ನೆ ಮಾಡುತ್ತಾಳೆ ಎಂದುಕೊಂಡು ನೀನು ಹೊರಗಡೆ ಹೋಗು ಎಂದು ಕಳಿಸಿದರು.

ಸುಭದ್ರೆ ಹೊರಗಡೆಗೇನೊ ಬಂದಳು. ಆದರೆ ಮನಸ್ಸಿನಲ್ಲಿ ನನ್ನನ್ನು ಹೊರಗಡೆ ಕಳಿಸ್ಬಿಟ್ಟು ಏನಂಥ ಗಹನವಾದ ವಿಚಾರ ಮಾತಾಡುತ್ತಾರೆ ಎಂದು ಕೇಳುವ ಕುತೂಹಲ. ಹೀಗಾಗಿ ಅವಳು ಅಲ್ಲೆ ಬಾಗಿಲು ಹತ್ತಿರ ಕಿವಿ ಕೊಟ್ಟು ಅವರಾಡುವ ಮಾತುಗಳನ್ನು ಆಲಿಸಲು ನಿಂತಿದ್ದಳು.

ಅದೇ ಹೊತ್ತಿಗೆ ಹೊರಗಡೆ ಹೋಗಿದ್ದ ಕೃಷ್ಣ ಬಲ ರಾಮರು ಬಂದು, ತಂಗಿಯ ಆ ಕಡೆ ಹೆಗಲ ಮೇಲೆ ಈ ಕಡೆ ಹೆಗಲ ಮೇಲೆ ಇಬ್ಬರು ಕೈ ಹಾಕಿ ನಿಂತುಕೊಂಡರು. ಅದೇ ಸಮಯಕ್ಕೆ ನಾರದರು ಬಂದರು. ಈ ದೃಶ್ಯವನ್ನು ನೋಡಿ ಬಹಳ ಸಂತೋಷವಾಯಿತು.

ಅದ್ಭುತವಾದ ದೃಶ್ಯ ಭೂಲೋಕದ ಪ್ರಾಣಿ ಪ್ರಪಂಚದ ಜೀವಿಗಳಿಗೆ ಅನುಕೂಲ ಮಾಡಿ ಕೊಡುವಂತಹ ರೂಪ. ನೀವು ಇದೇ ರೀತಿ ನಿಂತುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭ ಪುರಿಯಲ್ಲಿ ಜಗನ್ನಾಥನ ದೇವಾಲಯ ಆಗಲು ಮುಖ್ಯ ಘಟನೆ.

ಶತಮಾನದ ಹಿಂದೆ ಭಾರತದ ಮಧ್ಯ ಪ್ರದೇಶದ ಅವಂತಿ ರಾಜ್ಯವನ್ನು ಇಂದ್ರದ್ಯುಮ್ಯ ಎಂಬ ರಾಜನು ಆಳುತ್ತಿದ್ದನು. ಇವನ ತಂದೆ ಮಾಳವ ರಾಜ ಭರತ, ತಾಯಿ ಸುನಂದ. ಇಂದ್ರದ್ಯುಮ್ಯನು ಕೃಷ್ಣನ ಭಕ್ತನಾಗಿದ್ದು ಯಾದವ ಕುಲದವನು ಎಂದು ಹೇಳಲಾಗುತ್ತದೆ. ದೈವ ಭಕ್ತಿ ಹಾಗೂ ಪ್ರಜಾಸೇವೆ ಗಳಿಂದಲೇ ಬಹಳ ಪ್ರಸಿದ್ಧನಾಗಿದ್ದನು.

ಪುರಿಯ ಜಗನ್ನಾಥ ದೇವಾಲಯವನ್ನು ಇವನೇ ಕಟ್ಟಿಸಿದ್ದು ಎನ್ನಲಾಗಿದೆ. ಇವನಿಗೆ ಒಂದು ಹೊಸ ಸುದ್ದಿ ತಿಳಿಯುತ್ತದೆ. ಸಹ್ಯಾದ್ರಿ ಪರ್ವತಗಳ ಸಮೀಪ ನೀಲಾಚಲ ಪ್ರದೇಶದಲ್ಲಿ ವಿಶ್ರವಾಸು ಎಂಬ ಬೇಡ ಇದ್ದಾನೆ. ಇವನ ಬಳಿ ವಿಶೇಷವಾದ, ಶಕ್ತಿಶಾಲಿ ಯಾದ ಕೃಷ್ಣನ ವಿಗ್ರಹವಿದೆ ಈ ಬೇಡನು ಅಂಥ ಕೃಷ್ಣನನ್ನು ಗುಪ್ತವಾದ ಸ್ಥಳದಲ್ಲಿ ಇಟ್ಟುಕೊಂಡು ಯಾರಿಗೂ ಕಾಣದಂತೆ ಆರಾಧಿಸುತ್ತಿದ್ದಾನೆ.

ಅದರ ಹೆಸರು ‘ನೀಲ ಮಾಧವ’ ಎಂದು. ಇವನು ಕೃಷ್ಣನ ಪರಮ ಭಕ್ತ ಕೃಷ್ಣನಿಗೂ ಅವನನ್ನು ಕಂಡರೆ ಬಹಳ ಪ್ರೀತಿ ಎಂಬ ವಿಷಯ ರಾಜನ ಕಿವಿಗೆ ಬೀಳುತ್ತದೆ. ರಾಜನಿಗೆ ಆಶ್ಚರ್ಯ ಮತ್ತು ಸ್ವಲ್ಪ ಅಸೂಯೆ ಬರುತ್ತದೆ. ಏಕೆಂದರೆ ಕೃಷ್ಣನ ಪರಮಭಕ್ತ ತಾನೊಬ್ಬನೇ, ತನ್ನನ್ನು ಬಿಟ್ಟರೆ ಬೇರೆ ಯಾರು ಇರಲು ಸಾಧ್ಯವಿಲ್ಲ ಎಂದು ತಿಳಿದಿದ್ದನು. ಹೀಗಿರುವಾಗ ಅಂತಹ ಕೃಷ್ಣ ಭಕ್ತನನ್ನು ಹಾಗೂ ಅವನು ಪೂಜಿಸುವ ನೀಲ ಮಾಧವನನ್ನು ನೋಡಬೇಕು ಎಂಬ ಚಿಂತೆಯಲ್ಲಿದ್ದನು.

ನೀಲ ಮಾಧವ ಅಂದರೆ ಕೃಷ್ಣನ ಯುಗ ಅವಸಾನವಾಗಿ ಮಾನವ ಶರೀರ ಬಿಟ್ಟು ಭೌತಿಕವಾಗಿ ವೈಕುಂಠಕ್ಕೆ ಹೋಗುತ್ತಾನೆ.‌ ಪಾಂಡವರು, ಯಾದವರು ಶರೀರಕ್ಕೆ ಅಗ್ನಿಸ್ಪರ್ಶ ಮಾಡಿ ಹೊರಡುತ್ತಾರೆ. ಆದರೆ, ಕೃಷ್ಣನ ಕಾಲುಗಳನ್ನು ಜಿಂಕೆಯ ಕಾಲುಗಳೆಂದು ತಿಳಿದು ಕೃಷ್ಣನಿಗೆ ಬಾಣ ಹೊಡೆದ ಬೇಡನಾದ ‘ಜರಾ’ ಅಲ್ಲಿಯೇ ನಿಂತಿದ್ದನು.

ಅಗ್ನಿ ಆರಿದ ನಂತರ ಪ್ರಕಾಶಮಾನವಾದ ಒಂದು ವಸ್ತು ಕಾಣುತ್ತದೆ. ‘ಜರಾ’ ಅದನ್ನು ಕೃಷ್ಣನ ಹೃದಯ ನೀಲಿ ಬಣ್ಣದ ಕಲ್ಲಾಗಿದೆ ಎಂದು ಭಾವಿಸಿ ತೆಗೆದುಕೊಂಡು ಹೋಗುತ್ತಾನೆ. ಇನ್ನು ಕೆಲವು ಹೇಳಿಕೆಗಳ ಪ್ರಕಾರ ಚಿತಾ ಭಸ್ಮವನ್ನು ಪುರಿ ಯ ಸಮುದ್ರದಲ್ಲಿ ವಿಸರ್ಜಿಸುತ್ತಾರೆ.

ಸ್ವಲ್ಪ ದಿನಗಳಲ್ಲೆ ಜರನಿಗೆ ಸಮುದ್ರದೊಳಗೆ ಪ್ರಕಾಶಮಾನವಾದ ಸಾಲಿಗ್ರಾಮ ದಂತ ನೀಲಿ ಬಣ್ಣದ ಕಲ್ಲು ಸಿಗುತ್ತದೆ. ಅದನ್ನು ಕೃಷ್ಣನ ಹೃದಯವೆಂದು ಭಾವಿಸುತ್ತಾನೆ ಎಂದು ನಂಬಲಾಗಿದೆ.

ಶ್ರೀ ಕೃಷ್ಣನು ಅಶರೀರವಾಣಿ ಮೂಲಕ ಸಾಲಿಗ್ರಾಮದಂಥ ನೀಲಿ ಕಲ್ಲಿನಲ್ಲಿರುವ ನನ್ನ ರೂಪವನ್ನು ಪೂಜಿಸು ಎಂದು ಹೇಳಿದಂತೆ ಆಗುತ್ತದೆ. ಈ ನೀಲಿಕಲ್ಲನ್ನು ನೀಲಮಾಧವ ಎಂದು ತಿಳಿದ, ಜರಾ ಮತ್ತು ಅವನ ಪರಿವಾರದವರು ಗುಪ್ತ ವಾಗಿ ಪೂಜಿಸುತ್ತಿದ್ದರು.

ಒಂದು ದಿನ ಇವನ ಆಸ್ಥಾನಕ್ಕೆ ಒಬ್ಬ ಮಹರ್ಷಿಗಳು ಬಂದು, ಕಳಿಂಗ ರಾಜ್ಯದ ಒಂದು ಗುಹೆಯಲ್ಲಿ ಕೃಷ್ಣನ ನೈಜ ರೂಪವಾದ ನೀಲಮಾಧವನನ್ನು ಗುಪ್ತ ವಾಗಿ ಪೂಜಿಸುತ್ತಿದ್ದಾರೆ . ಆದರೆ ಎಲ್ಲಿದೆ ಎಂಬುದು ಗೊತ್ತಿಲ್ಲ. ಅದನ್ನು ನೀನು ಹುಡುಕಿಸಬೇಕು ಎಂದರು. ನೀಲ ಮಾಧವನನ್ನು ನೋಡುವ ಕಾತುರದಲ್ಲಿ ಚಿಂತಿತನಾಗಿದ್ದ ರಾಜನಿಗೆ ಈ ಸುಳಿವು ಸಿಕ್ಕ ಕೂಡಲೇ ಆಸ್ಥಾನದ ಚತುರ ಬ್ರಾಹ್ಮಣ ವಿದ್ಯಾಪತಿ ಎಂಬುವನನ್ನು ನೋಡಿಕೊಂಡು ಬರಲು ಕಳಿಸುತ್ತಾನೆ.

ವಿದ್ಯಾಪತಿ ಕಳಿಂಗ ರಾಜ್ಯದೆಲ್ಲೆಡೆ ಸಂಚರಿಸಿ ವಿಶ್ರವಾಸು ವನ್ನು ಹುಡುಕಿ ನೀಲ ಮಾಧವನನ್ನು ನನಗೆ ತೋರಿಸಿ ಎಂದು ಕೇಳುತ್ತಾನೆ. ಆದರೆ ವಿಶ್ರವಾಸು ಅದಕ್ಕೆ ಒಪ್ಪುವುದಿಲ್ಲ . ಏನಾದರೂ ಮಾಡಿ ತಿಳಿಯಲೇ ಬೇಕೆಂಬ ಹಠದಿಂದ ಅವನು ವಿಶ್ರವಾಸುವಿನ ವಿಶ್ವಾಸ ಗಳಿಸಲು ಅದೇ ಗ್ರಾಮದಲ್ಲಿ ತಂಗುತ್ತಾನೆ.

ಕೆಲ ಕಾಲದಲ್ಲಿ ವಿಶ್ರವಾಸುವಿನ ಮಗಳು ಲಲಿತಾಳ ಜೊತೆ ಪ್ರೀತಿ ಬೆಳೆಸಿ ಅವಳನ್ನು ವಿವಾಹ ಮಾಡಿಕೊಳ್ಳುತ್ತಾನೆ. ಈಗ ಪತ್ನಿಯ ಜೊತೆ ಸೇರಿ ನೀಲ ಮಾಧವನನ್ನು ತೋರಿಸಿ ಎಂದು ವಿಶ್ರವಾಸುವನ್ನು ಕೇಳುತ್ತಾನೆ. ಈಗ ಮಾವನಾದ ಕಾರಣ ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಆದುದರಿಂದ ವಿದ್ಯಾಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ನೀಲ ಮಾಧವನ ದರ್ಶನ ಮಾಡಿಸಲು ಕರೆದುಕೊಂಡು ಹೋಗುತ್ತಾರೆ.

ಬುದ್ಧಿವಂತ ವಿದ್ಯಾಪತಿ ಕೈಯಲ್ಲಿ ಸಾಸವೆ ಇಟ್ಟುಕೊಂಡು ಅದನ್ನು ಹಾದಿಯಲ್ಲಿ ಚೆಲ್ಲುತ್ತಾ ಹೋಗುತ್ತಾನೆ. ಗುಹೆ ಹತ್ತಿರ ಬಂದ ಕೂಡಲೇ ವಿಶ್ರವಾಸು ಅವನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾನೆ. ವಿದ್ಯಾಪತಿ ನೀಲಮಾಧವನನ್ನು ಕಣ್ತುಂಬ ನೋಡಿ. ಮೈಮರೆಯುತ್ತಾನೆ. ಅದೆಂಥ ಅದ್ಭುತ ರೂಪ ನೀಲಮಾದವನದು ಎಂದು ಮನಸ್ಸಿನಲ್ಲಿ ಅಂದುಕೊಂಡನು.

ರಾಜ ಹೇಳಿದ ಕೆಲಸವನ್ನು ವಿದ್ಯಾಪತಿ ಮುಗಿಸಿದನು. ರಾಜ್ಯಕ್ಕೆ ಬಂದು ಇಂದ್ರದ್ಯುಮ್ಯ ರಾಜನಿಗೆ ನೀಲ ಮಾಧವನನ್ನು ನೋಡಿ ಬಂದ ವಿಷಯವನ್ನು ತಿಳಿಸುತ್ತಾನೆ. ರಾಜನು ನೀಲಮಾಧವನನ್ನು ನೋಡುವ ತವಕದಲ್ಲಿ ಕಳಿಂಗ ರಾಜ್ಯಕ್ಕೆ ಹೋಗುತ್ತಾನೆ.

ಗುಹೆ ಬಳಿಯೂ ಬರುತ್ತಾನೆ. ಆದರೆ ನೀಲಮಾಧವನ ವಿಗ್ರಹ ಕಾಣಲಿಲ್ಲ. ರಾಜನಿಗೆ ಒಂದು ತರಹ ಮುಜುಗರವಾಗುತ್ತದೆ. ತನ್ನ ಕಣ್ಣಿಗೆ ನೀಲ ಮಾಧವ ಕಾಣಲಿಲ್ಲ ಎಂದು ನೋವಾಗುತ್ತದೆ.

ರಾಜನು ಹಠ ತೊಟ್ಟು ನೀಲಮಾಧವನ ದರ್ಶನ ಆಗುವ ತನಕ ಒಂದು ಹನಿ ನೀರು ಕುಡಿಯುವುದಿಲ್ಲವೆಂದು ತಪಸ್ಸಿಗೆ ಕುಳಿತು ಕೊಂಡನು.‌ ತಪಸ್ಸಿನಲ್ಲಿ ನಿರತನಾದ ಅವನು ಒಂದು ಸಮಯ ಸುಪ್ತಾವಸ್ಥೆಗೆ ಹೋಗುತ್ತಾನೆ. ಆಗ ಸಾಕ್ಷಾತ್ ವಿಷ್ಣು ದರ್ಶನ ಕೊಟ್ಟು, ಪುರಿಯ ಸಮುದ್ರದಲ್ಲಿ ಒಂದು ಮರದ ದಿಮ್ಮಿ ತೇಲಿ ಬರುತ್ತದೆ. ಅದರ ಜೊತೆ ಒಬ್ಬ ಶಿಲ್ಪಿಯು ಬರುತ್ತಾನೆ.

ಆ ಶಿಲ್ಪಿ ಆ ರೂಪವನ್ನು ನೋಡಿದ್ದನು. ಅವನ ಮೂಲಕ ವಿಗ್ರಹ ವನ್ನು ಕಡೆಸಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡು ಎಂದು ಹೇಳಿದಂತಾಗುತ್ತೆ. ಅದೇ ರೀತಿ ರಾಜ ಮರುದಿನ ಸೂರ್ಯೋದಯಕ್ಕೂ ಮೊದಲೇ ಸಮುದ್ರ ತೀರಕ್ಕೆ ಬಂದನು, ಸ್ವಲ್ಪ ಹೊತ್ತಿಗೆ ಮರದ ದಿಮ್ಮಿ ತೇಲಿ ಬಂದಿತು.

ಅದನ್ನು ಸೇವಕರಿಂದ ತರಿಸಿದನು. ಈ ಮರದ ದಿಮ್ಮಿಯನ್ನು ಕಡೆದು ವಿಗ್ರಹ ಮಾಡುವ ಶಿಲ್ಪಿಯನ್ನು ಎಲ್ಲಿ ಹುಡುಕಲಿ ಎಂದು ಯೋಚಿಸುತ್ತಿರುವಾಗಲೇ, ಶಿಲ್ಪಿ ಎದುರಿಗೆ ಪ್ರತ್ಯಕ್ಷನಾದನು. ಈ ಮರದ ದಿಮ್ಮಿ ಯಿಂದ ನಾನು ವಿಗ್ರಹಗಳನ್ನು ಕಡೆದು ಕೊಡುತ್ತೇನೆ. ಆರು ತಿಂಗಳು ಕಾಲಾವಕಾಶ ಬೇಕು. ವಿಗ್ರಹಗಳನ್ನು ಕಡೆಯಲು ನನಗೆ ಪ್ರತ್ಯೇಕವಾದ ಕೋಣೆಯಲ್ಲಿ ಆರು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಇಟ್ಟು ಬಾಗಿಲು ಹಾಕಿದರೆ ಯಾರೂ ಮಧ್ಯದಲ್ಲಿ ಬಂದು ನೋಡಬಾರದು ಎಂದನು. ರಾಜಾ ಅದಕ್ಕೆ ಒಪ್ಪಿ ಎಲ್ಲಾ ವ್ಯವಸ್ಥೆ ಮಾಡಿದನು.

4 ತಿಂಗಳಾಗುತ್ತಾ ಬಂದಿತು. ಕೋಣೆಯ ಹತ್ತಿರ ಹೋದರೂ ಒಂದೇ ಒಂದು ಕುಟ್ಟುವ, ಕತ್ತರಿಸುವ, ಅಥವಾ ಉಳಿ ಶಬ್ದ ಏನು ಕೇಳುತ್ತಿರಲಿಲ್ಲ ಹಾಕಿದ ಬಾಗಿಲು ಹಾಗೆ ಮುಚ್ಚಿತ್ತು.

ರಾಜಕಾರಣದ ಉದ್ದೇಶದಿಂದ ರಾಜನು ತನ್ನ ರಾಜ್ಯದಿಂದ ಬೇರೆ ರಾಜ್ಯಕ್ಕೆ ಪ್ರಯಾಣ ಹೊರಟನು. ರಾಜನ ಹೊರಟು ಎರಡೇ ದಿನಗಳಲ್ಲಿ ರಾಣಿಗೆ ಕುತೂಹಲ ಬಂದಿತು ಈ ಶಿಲ್ಪಿ ಏನು ಮಾಡು ತ್ತಿದ್ದಾನೆ, ಯಾವ ಶಬ್ದವು ಬರುತ್ತಿಲ್ಲ ಬದುಕಿದ್ದಾನೋ, ಸತ್ತಿದ್ದಾನೋ, ತಿಳಿಯುವುದಿಲ್ಲ, ತಿಳಿದುಕೊಳ್ಳುವ ಕುತೂಹಲದಿಂದ ಕೋಣೆಯ ಬಾಗಿಲು ತೆಗೆದಳು. ಆದರೆ ಅಲ್ಲಿ ಶಿಲ್ಪಿ ಇರಲಿಲ್ಲ ಮಾಯವಾಗಿದ್ದನು. ದಿಮ್ಮಿಯಲ್ಲಿ ಕೆತ್ತಲಾದ ಅರ್ಧಂಬರ್ಧ ಆಕಾರದ ಗೊಂಬೆಗಳಿದ್ದವು.

ರಾಜ ಊರಿಗೆ ಬಂದವನು ರಾಣಿಯನ್ನು ಯಾಕೆ ನೋಡಿದೆ ಎಂದು ಸಿಟ್ಟಿನಿಂದ ಪ್ರಶ್ನೆ ಮಾಡಿದ. ಇನ್ನೇನು ಮಾಡಿ ಪ್ರಯೋಜನವಿಲ್ಲವೆಂದು ತಿಳಿದು ಮುಂದೇನು ಗತಿ ಎಂದು ತಲೆ ಮೇಲೆ ಕೈಹೊತ್ತು ಕುಳಿತ.

ಆ ಸಮಯಕ್ಕೆ ನಾರದರು ಬಂದರು. ರಾಜನನ್ನು ಸಮಾಧಾನಪಡಿಸಿ, ಭಗವಂತನ ಇಚ್ಛೆ ಇಷ್ಟೆ ಇತ್ತು ಎಂದು ಕಾಣುತ್ತದೆ. ಪರಮಾತ್ಮನ ಪೂರ್ಣ ರೂಪವನ್ನು ನೋಡುವ ಅದೃಷ್ಟ ಇಲ್ಲ. ಅರ್ಧ ಕಡೆದ ಜಗನ್ನಾಥ ,ಬಲರಾಮ, ಸುಭದ್ರೆಯ ಗೊಂಬೆಗಳನ್ನೇ ಪ್ರತಿಷ್ಠಾಪನೆ ಮಾಡಿಸು ಎಂದು ರಾಜನಿಗೆ ಹೇಳಿ, ನಾರದರೆ ಮುಂದೆ ನಿಂತು ಪ್ರತಿಷ್ಠಾಪನೆ ಮಾಡಿಸಿದರು.

12 ವರ್ಷಕ್ಕೊಮ್ಮೆ ಈ ಮರದ ಗೊಂಬೆಗಳನ್ನು ವಿಸರ್ಜಿಸಿ ಬೇರೆ ಗೊಂಬೆಗಳನ್ನು ಕೆತ್ತನೆ ಮಾಡಿ ಪುನಹ ಪ್ರತಿಷ್ಠಾಪಿಸುತ್ತಾರೆ. ರಾಜ ಇಂದ್ರದ್ಯುಮ್ಯನು ತನ್ನ ಆಡಳಿತಾವಧಿಯಲ್ಲಿ ಜಗನ್ನಾಥನಿಗೆ ದೊಡ್ಡದಾಗಿ ಜಗನ್ನಾಥ ಮಂದಿರವನ್ನು ಕಟ್ಟಿಸಿದನು.

ಅಡುಗೆ ವಿಶೇಷ: ಪ್ರತಿದಿನ ಜಗನ್ನಾಥನ ನೈವೇದ್ಯಕ್ಕೆ 54 ಭಕ್ಷಗಳನ್ನು ಮಾಡುತ್ತಾರೆ. ವಿಶೇಷ ದಿನಗಳು ಅಂದರೆ ಮಕರ ಸಂಕ್ರಮಣ, ಗೋಕುಲಾ ಷ್ಟಮಿ ಇಂಥ ವಿಶೇಷ ದಿನಗಳಲ್ಲಿ 84 ಭಕ್ಷಗಳನ್ನು ಮಾಡಿ ಜಗನ್ನಾಥನಿಗೆ ಅರ್ಪಿಸುತ್ತಾರೆ.

250 ಒಲೆ ಇದೆ. ಅಡುಗೆ ಮನೆಯಲ್ಲಿ ಅಡುಗೆ ತಯಾರಿಸಲು 30 ಬೇರೆ ಬೇರೆ ಪಂಗಡಗಳಿವೆ. ಒಂದೇ ಸಲಕ್ಕೆ ಒಂದು ಲಕ್ಷ ಜನಕ್ಕೆ ಅಡುಗೆ ಮಾಡುವ ವ್ಯವಸ್ಥೆಯು ಇದೆ. ಇಲ್ಲಿ ಮಡಿಕೆಗಳಲ್ಲೇ ಆಹಾರ ಪದಾರ್ಥ ಮಾಡುತ್ತಾರೆ. ಮಡಿಕೆಗಳನ್ನು ಮಾಡಲು ವಿಶೇಷವಾದ ಒಂದು ಹಳ್ಳಿ ಇದೆ.

ಮಡಿಕೆಗಳನ್ನು ಒಲೆಗಳ ಮೇಲೆ ಒಂದರ ಮೇಲೆ ಒಂದರಂತೆ 10 ಮಡಿಕೆ ಗಳನ್ನು ಇಡುತ್ತಾರೆ. ಪದಾರ್ಥ ಬೇಯುವುದರಲ್ಲೂ ಒಂದು ವಿಶೇಷ ಇದೆ. ಅಂದರೆ ಒಲೆಯ ಮೇಲೆ ಒಂದರ ಮೇಲೆ ಒಂದು ಹತ್ತರಂತೆ ಇಡುವ ಮಡಿಕೆಗಳಲ್ಲಿ, ಮೇಲಿನ ಮಡಿಕೆಯಲ್ಲಿ ಮೊದಲು ಆಹಾರ ಬೇಯುತ್ತದೆ. ಆಮೇಲೆ ಎರಡನೇ ಮಡಿಕೆ ಆಮೇಲೆ ಮೂರು ಕೊನೇಗೆ ಕೆಳಗಿಟ್ಟ ಮಡಕೆಯಲ್ಲಿರುವ ಪದಾರ್ಥ ಬೇಯುತ್ತದೆ.

ಆಷಾಡ ಮಾಸದ ಏಕಾದಶಿ ಜಗನ್ನಾಥ ರಥೋತ್ಸವ ಮಾಡುತ್ತಾರೆ. ರಥೋತ್ಸವಕ್ಕೆ ರಥಗಳನ್ನು ಮಾಡಲು ದೊಡ್ಡ ಕಾಡನ್ನೇ ಬೆಳೆಸಿದ್ದಾರೆ. ದೊಡ್ಡ ರಥ ಜಗನ್ನಾಥನದು, ಅದಕ್ಕಿಂತ ಸ್ವಲ್ಪ ಚಿಕ್ಕದು ಬಲರಾಮ, ಇದಕ್ಕಿಂತ ಸ್ವಲ್ಪ ಚಿಕ್ಕದು ಸುಭದ್ರೆಯದು.

ರಥೋತ್ಸವದ ದಿನ ಅಲ್ಲಿನ ರಾಜ ಬಂದು, ರಾಜ ಪೋಷಾಕನ್ನು ತೆಗೆದು, ಸಾಧಾರಣ ಬಟ್ಟೆ ಹಾಕಿಕೊಂಡು ರಥದ ಮುಂದೆ ನೀರು ಹಾಕಿ ಬಂಗಾರದ ಹಿಡಿಯಿಂದ ಗುಡಿಸಿದ ಮೇಲೆ ರಥ ಹೊರಡುತ್ತದೆ. ಜಗನ್ನಾತನ ರಥ ಎಳೆಯಲು ದೇವಸ್ಥಾನದವರೆ ಆದ ನಾಲ್ಕು ಸಾವಿರ ಜನರಿದ್ದಾರೆ.

ರಥೋತ್ಸವ ಎಲ್ಲ ಮುಗಿದ ಮೇಲೆ, ರಥೋತ್ಸವದ ಮರದ ಹಲಿಗೆಗಳನ್ನು ಕಟ್ಟಿಗೆಗಳಾಗಿ ಮಾಡಿ ದೇವಸ್ಥಾನದ ಅಡುಗೆ ಮಾಡಲು ಬಳಸುತ್ತಾರೆ.ಪ್ರತಿ ವರ್ಷ ಹೊಸ ರಥಗಳನ್ನು ಮಾಡುತ್ತಾರೆ.ದ್ವಾಪರ ಯುಗದ ಕೃಷ್ಣಾ ವತಾರದ ನಂತರ, ಶ್ರೀ ಕೃಷ್ಣನು, ಓಡಿಸ್ಸಾದ ಪುರಿ ನಗರದಲ್ಲಿ ಹಲವಾರು ವೈಶಿಷ್ಟತೆಗಳೊಂದಿಗೆ ,ಅಣ್ಣ ಬಲರಾಮ, ಪ್ರೀತಿಯ ತಂಗಿ ಸುಭದ್ರೆಯ ಜೊತೆ ಜಗನ್ನಾಥನಾಗಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಜಗತ್ಪ್ರಸಿದ್ಧಿ ಯಾಗಿ ಬೆಳಗುತ್ತಿದ್ದಾನೆ.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!