ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ವೃತ್ತಗಳಲ್ಲಿ 25 ವರ್ಷ5 ತಿಂಗಳು ನಿರಂತರವಾಗಿ ಸೇವೆ ಸಲ್ಲಿಸಿದ ಅಂಗನವಾಡಿ (Anganwadi) ಹೊಸಹಳ್ಳಿ ವೃತದ ಮೇಲ್ವಿಚಾರಕಿ ಬಿ. ಪದ್ಮ ಅವರು ವರ್ಗಾವಣೆಯಾಗಿದ್ದಾರೆ.
ಯಲಹಂಕ ಶಿಶು ಅಭಿವೃದ್ಧಿ ಇಲಾಖೆಗೆ ವರ್ಗವಾಣೆಯಾಗಿರುವ ಪದ್ಮ ಅವರನ್ನು ಇಂದು ಅಂಗನವಾಡಿ ಕಾರ್ಯಕರ್ತರು ಸನ್ಮಾನಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಅಂಗನವಾಡಿ ಕೇಂದ್ರ 2 ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದ್ಮ ಅವರನ್ನು ಇಂದು ಅಂಗನವಾಡಿ ಕಾರ್ಯಕರ್ತರು ಸನ್ಮಾನಿಸಿ, ಬೀಳ್ಕೊಟ್ಟರು.
ಇದೇ ವೇಳೆ ದೊಡ್ಡಬಳ್ಳಾಪುರ ಸಿಡಿಪಿಒ ಆಗಿ ವರ್ಗಾವಣೆಯಾಗಿರುವ ವಿ.ವಿನೋದ್ ರಾಜ್ ಅವರಿಗೆ ಸ್ವಾಗತ ಕೋರಲಾಯಿತು.
ಈ ವೇಳೆ ಹಿರಿಯ ಮೇಲ್ವಿಚಾರಕರಾದ ನಿರ್ಮಲ, ಜಯಲಕ್ಷ್ಮಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.