ಬೆಂಗಳೂರು: ಆಕಸ್ಮಿಕವಾಗಿ ಗಾಯಗೊಂಡಿದ್ದ ನಾಗರಹಾವಿಗೆ (Cobra) ಶಸ್ತ್ರಚಿಕಿತ್ಸೆ ನಡೆಸಿ, ವನ್ಯಜೀವಿಯ ಜೀವ ಉಳಿಸಿರುವ ಘಟನೆ ವರದಿಯಾಗಿದೆ.
ಹೆಸರಘಟ್ಟ ಹೋಬಳಿ ವ್ಯಾಪ್ತಿಯ ಬಿಳಿಜಾಜಿ ಮತ್ತು ತೋರೆನಾಗಸಂದ್ರ ಗ್ರಾಮದ ಜಮೀನಿನಲ್ಲಿ ರೈತರು ಕೃಷಿ ಕಾರ್ಯ ನಡೆಸುವ ವೇಳೆ ಜೆಸಿಬಿ ಯಂತ್ರಕ್ಕೆ ಸಿಲುಕಿ ನಾಗರಹಾವು ಗಾಯಗೊಂಡಿತ್ತು.
ಈ ಕುರಿತಂತೆ ಸ್ಥಳೀಯ ಸ್ವಯಂಸೇವಕರಾದ ನೀಲಕಂಠ ನೀಡಿದ ಮಾಹಿತಿ ಆಧರಿಸಿ ಕಾನು ವನ್ಯ ಜೀವಿ ಸಂರಕ್ಷಣಾ ಫೌಂಡೇಷನ್ ಸಂಸ್ಥೆಯ ಉರಗ ತಜ್ಞ ಪ್ರಶಾಂತ್ ಗೋಪಿನಾಥ್ ಸ್ಥಳಕ್ಕೆ ತೆರಳಿ ಹಾವನ್ನು ರಕ್ಷಿಸಿದರು.
ಕೂಡಲೇ ಅದನ್ನು ರಾಜನಕುಂಟೆಯ ಕೇರ್ ಅಂಡ್ ಕ್ಯೂರ್ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಆರಿಫ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು,
ಹಾವು ಸದ್ಯಕ್ಕೆ ತೀವ್ರ ನೀಗಾದ ಅವಶ್ಯಕತೆ ಇದ್ದು, ಪೂರ್ಣ ಚೇತರಿಕೆ ಕಂಡ ನಂತರ ಅರಣ್ಯಕ್ಕೆ ಬಿಡಲಾಗುವುದು ಎಂದು ಕಾನು ವನ್ಯ ಜೀವಿ ಸಂರಕ್ಷಣಾ ಫೌಂಡೇಷನ್ ಸಂಸ್ಥೆಯ ಉರಗ ತಜ್ಞ ಪ್ರಶಾಂತ್ ಗೋಪಿನಾಥ್ ಹೇಳಿದ್ದಾರೆ.