Astrology: There is a possibility of making profits in business

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

Astrology: ಸೋಮವಾರ, ಸೆಪ್ಟೆಂಬರ್ 29, 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ನಿಮ್ಮ ಜೀವನದಲ್ಲಿ ನಡೆಯುವ ಸನ್ನಿವೇಶಗಳು ನಿಮಗೆ ಅನುಕೂಲವಾಗಿದ್ದರೂ ನೀವು ಬೇರೆಯವರ ಮೇಲೆ ಅವಲಂಬಿತ ರಾಗಿದ್ದರೆ ಸಮಸ್ಯೆಗಳು ಎದುರಾಗಬಹುದು. ಜಾಗೃತರಾಗಿರಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ವೃಷಭ ರಾಶಿ: ಸಮಯ ಕಳೆದಂತೆ ಹಣಕಾಸು ವಿಚಾರಗಳಲ್ಲಿ ಹೆಚ್ಚು ಜಾಗೃತರಾಗುತ್ತೀರಿ. ಇತರರನ್ನು ಹೆಚ್ಚು ಗೌರವದಿಂದ ನೋಡುತ್ತೀರಿ. ನಿಮ್ಮ ನಿರ್ಧಾರಗಳು ನಿಮಗೆ ತೃಪ್ತಿ ನೀಡಲಿದೆ.(ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ದಿನದ ಆರಂಭದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿದರೆ ಚಿಂತಿಸಬೇಡಿ, ಕಾಲ ಕಳೆದಂತೆ ಪರಿಸ್ಥಿತಿ ಉತ್ತಮವಾಗಲಿದೆ. ಮಧ್ಯಾಹ್ನದ ವೇಳೆಗೆ ಉತ್ಸಾಹ ದಿಂದಿರಲಿದ್ದೀರಿ. ದೇಹ ವಿಶ್ರಾಂತಿ ಬಯಸಿದರೆ, ವಿಶ್ರಾಂತಿ ಪಡೆದುಕೊಳ್ಳಿ. ಅತಿಯಾದ ಒತ್ತಡಕ್ಕೆ ಸಿಲುಕದಿರಿ.(ಭಕ್ತಿಯಿಂದ ಶ್ರೀ ಶಕ್ತಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಮನೆಯಲ್ಲಿ ಶುಭ ಸಮಾ ರಂಭಗಳು ನಡೆಯಬಹುದು. ಜವಾಬ್ದಾರಿಗಳು ಹೆಚ್ಚಾಗಲಿದೆ.ನಿಮ್ಮ ಪಾಲಿಗೆ ಬಂದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿ.ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರು ತ್ತದೆ. ಚೂಪಾದ ವಸ್ತುಗಳನ್ನು ಎಚ್ಚರಿಕೆಯಿಂದ ಬಳಸಿ. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಸಿಂಹ ರಾಶಿ: ಈವರೆಗೆ ಹಣಕಾಸಿನ ತೊಂದರೆ ಎದುರಾಗಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.ನೀವು ಎರಡು ಅಂಶಗಳ ಬಗ್ಗೆ ಗಮನವಿಟ್ಟುಕೊಳ್ಳ ಬೇಕು. ಒಂದು ತಾಳ್ಮೆ ಮತ್ತೊಂದು ಸಹನೆ.(ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ: ಎಲ್ಲಾ ಅಡೆತಡೆಗಳನ್ನು ಎದುರಿಸಿದ್ದೀರಿ.ಇತರರು ನಿಮ್ಮ ಆಜ್ಞೆ ಮತ್ತು ಸಲಹೆಗಳನ್ನು ನಿರಾಕರಿಸಿದರೆ ಒತ್ತಾಯಿಸಬೇಡಿ. ಬದಲಾಗಿ ಅವರೇ ಒಪ್ಪಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭ ವಾಗುವುದು.)

ತುಲಾ ರಾಶಿ: ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ,ನೀವು ಅಸಾಧಾರಣವಾಗಿ ಹೆಚ್ಚಿನ ಲಾಭವನ್ನು ಗಳಿಸಬಹುದು. ನೀವು ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ಇಂದು ಹಣದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗುತ್ತದೆ. ಜೊತೆಗೆ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಹೆಚ್ಚು ಶ್ರಮಿಸಬೇಕು. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.(ಭಕ್ತಿಯಿಂದ ಶ್ರೀ ಗಾಯತ್ರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ವ್ಯವಹಾರಗಳಲ್ಲಿ ಉತ್ತಮ ಅವಕಾಶಗಳು ಬರುವ ನಿರೀಕ್ಷೆಗಳಿವೆ. ಅದರಿಂದ ವಂಚಿತರಾಗದಿರಿ. ಮನಸ್ಸಿ ನಿಂದ ಆಲೋಚಿಸಬೇಡಿ.ಉದ್ವಿಗ್ನತೆಗೆ ಒಳಗಾಗದಿರಿ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ಸಲಹೆಗಳಿಂದ ಬರುವ ಒತ್ತಡಗಳಿಂದ ಹೊರಬನ್ನಿ. ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರಿ. ಸಂಗಾತಿಯು ವಿರುದ್ಧವಾದ ನಿರೀಕ್ಷೆಗಳನ್ನು ಹೊಂದಿದ್ದರೆ, ಅದರಿಂದ ಕುಗ್ಗಬೇಡಿ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ನೀವು ಯೋಚನೆ ಮಾಡಿ ಯೋಜಿಸಿದ ಕಾರ್ಯಗಳ ಮೇಲೆ ಗಮನಹರಿಸುವ ಸಮಯ ಬಂದಿದೆ.ಅದರತ್ತ ಗಮನಹರಿಸಿ. ವಿಳಂಬ ನೀತಿ ಅನುಸರಿಸದಿರಿ. ಸಾಧನೆ ಮಾಡು ವ ಸಮಯ ಸನ್ನಿಹಿತವಾಗಿದೆ. (ಭಕ್ತಿಯಿಂದ ಶ್ರೀ ಸವಿತೃ ಸೂರ್ಯ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ನಿಮ್ಮ ಮನಸ್ಥಿತಿ ಶೀಘ್ರದಲ್ಲೇ ಹಗುರವಾಗುತ್ತದೆ, ನಿಮ್ಮ ಸ್ವಂತ ವೈಯಕ್ತಿಕ ಭಾವನಾತ್ಮಕ ಗುರಿಗಳೊಂದಿಗೆ ಮುಂದುವರಿಯಲು ಇದು ಉತ್ತಮ ಸಮಯ. ನಿಮ್ಮ ದೃಢ ನಿರ್ಧಾರಗಳು ಹಾಗೆಯೇ ಇರಲಿ. ನೀವು ಮಕ್ಕಳು ಅಥವಾ ಕಿರಿಯ ಸಂಬಂಧಗಳ ಜವಾಬ್ದಾರಿಯನ್ನು ಹೊಂದಿದ್ದರೆ ಮಾತ್ರ ನೀವು ಸಂತೃಪ್ತರಾಗಿರುತ್ತೀರಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಮೀನ ರಾಶಿ: ನಿಮ್ಮೊಂದಿಗೆ ನೀವು ನಿಜವಾಗಿಯೂ ಶಾಂತಿಯಿಂದಿರಲು ಇನ್ನೂ ಕೆಲವು ಮಾರ್ಗಗಳಿವೆ.ಆದರೆ, ಇದು ಕೇವಲ ಭ್ರಮೆ ಎಂದು ನಿಮ್ಮ ಅಂತರಾಳದಲ್ಲಿ ನಿಮಗೆ ತಿಳಿದಿದೆ. ಆದ್ದರಿಂದ, ಪ್ರಸ್ತುತ ಸನ್ನಿವೇಶಗಳನ್ನು ಹೆಚ್ಚು ಮಾಡಿ, ವಿಶೇಷವಾಗಿ ಇತರ ಜನರು ನಿಮ್ಮ ಬಗ್ಗೆ ನಿಜವಾದ ಆಸಕ್ತಿಯನ್ನು ತೋರಿಸುತ್ತಿದ್ದಾರೆ.(ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಸಪ್ತಮಿ
ನಕ್ಷತ್ರ: ಮೂಲ ನಕ್ಷತ್ರ.

ಈ ದಿನದ ವಿಶೇಷ: ಸರಸ್ವತಿ ಹಬ್ಬ.
ದೇವಿ ಕಾಲರಾತ್ರಿ,ನವಿಲು ನೀಲಿ ಬಣ್ಣ, ನೈವೇದ್ಯ ಕೋಸಂಬರಿ, ಚಿತ್ರಾನ್ನ,ಮೊಸರನ್ನ

ರಾಹುಕಾಲ: 07:30AM ರಿಂದ 09:00AM
ಗುಳಿಕಕಾಲ: 01:30PM ರಿಂದ 03:00PM
ಯಮಗಂಡಕಾಲ: 10:30AM ರಿಂದ 12:00PM

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122

ರಾಜಕೀಯ

300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ ಸಿಎಂ: ಆರ್. ಅಶೋಕ್

300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ ಸಿಎಂ: ಆರ್.

ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ: ಆರ್. ಅಶೋಕ (R. Ashoka)

[ccc_my_favorite_select_button post_id="114973"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!