ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ವ್ಯಕ್ತಿಯೋರ್ವ ಮಹಿಳೆಯ ಹತ್ಯೆಗೆ ಯತ್ನಿಸಿರುವ (Attempted murder) ಘಟನೆ ರಾಜ್ಯ ಹೆದ್ದಾರಿ ಗೊಲ್ಲಹಳ್ಳಿ ಬಳಿಯ ಗುಂಡಮಗೆರೆ ಕ್ರಾಸ್ ಪೆಟ್ರೋಲ್ ಬಂಕ್ ಸಮೀಪ ನಡೆದಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ಸಾವಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಒಟ್ಟಿಗೆ ಬಂದ ಮಹಿಳೆ ಮತ್ತು ಪುರುಷ ಏಕಾಏಕಿ ಜಗಳಕ್ಕಿಳಿದಿದ್ದು, ಈ ವೇಳೆ ಮಹಿಳೆಯನ್ನು ರಸ್ತೆ ಬದಿಯ ಗಿಡಗಳ ಒಳಕ್ಕೆ ಎಳೆದೊಯ್ದು ಹತ್ಯೆಗೆ ಯತ್ನಿಸಿದ್ದಾನೆ, ಈ ವೇಳೆ ಆತನಿಂದ ತಪ್ಪಿಸಿಕೊಂಡು ಬರುವ ವೇಳೆ ಬೆನ್ನತ್ತಿ ಬಂದ ಆತ, ಆಕೆಯ ಕುತ್ತಿಗೆಗೆ ವೇಲ್‌ನಿಂದು ಬಿಗಿದು ಹತ್ಯೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ದಾರಿ ಹೋಕರು ವಾಹನಗಳ ನಿಲ್ಲಿಸಿ ಮಹಿಳೆಯನ್ನು ರಕ್ಷಿಸಿ, ಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಯಲ್ಲಿ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ವೇಳೆ ಆಕೆ ನನ್ನ ಹೆಂಡತಿ ಎಂದು ಆತ ಹೇಳಿದರೆ, ಆಕೆ ನನ್ನ ಗಂಡನಲ್ಲ, ನನ್ನ ಪತಿ ಬೇರೆಯಿದ್ದಾರೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.