ಬಾಗಲಗುಂಟೆ: ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಸಮೀಪದ ಬಾಗಲಗುಂಟೆಯ ಭುವನೇಶ್ವರಿ ನಗರದಲ್ಲಿ ನಡೆದಿದೆ.
ರಾಯಚೂರು ಮೂಲದ ವಿಜಯಲಕ್ಷ್ಮಿ (35 ವರ್ಷ) ಗುರುವಾರ ತಡರಾತ್ರಿ ತನ್ನ ಇಬ್ಬರು ಮಕ್ಕಳಾದ ಭುವನ್ (1 ವರ್ಷ), ಬೃಂದಾ(4 ವರ್ಷ) ರನ್ನು ನೇಣು ಬಿಗಿದು ಕೊಲೆ ಮಾಡಿ, ಆ ಬಳಿಕ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶುಕ್ರವಾರ ಮೂವರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೃತ ವಿಜಯಲಕ್ಷ್ಮಿ ಅವರ ಪತಿ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಹಲವು ಬಾರಿ ಜಗಳವಾಡಿದ್ದರಂತೆ. ಈ ಕುರಿತು ಕುಟುಂಬದ ಹಿರಿಯರು ಸಾಕಷ್ಟು ಬಾರಿ ರಾಜಿ ಸಂಧಾನ ಮಾಡಿ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ.
ಗುರುವಾರ ರಾತ್ರಿಯೂ ಇಬ್ಬರ ನಡುವೆ ಜಗಳವಾಗಿತ್ತು ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ದಂಪತಿಯು ಹಲವು ವರ್ಷಗಳಿಂದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದರು.
ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಿಯಕರನ ಜತೆ ಲಾಡ್ಜ್‌ಗೆ ಬಂದು ಹೆಣವಾದ ಮಹಿಳೆ
ಯಲಹಂಕ: ನ್ಯೂಟೌನ್ ಲಾಡ್ಜ್‌ನಲ್ಲಿ ಬೆಂಕಿ ದುರಂತದಲ್ಲಿ ಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟೆಸ್ಟ್ ಸಿಕ್ಕಿದೆ. ಬೆಂಕಿಯಲ್ಲಿ ಯುವಕ ಬೆಂದು ಹೋಗಿದ್ದು, ಬೆಂಕಿಯಿಂದ ಆವರಿಸಿದ ಹೊಗೆಯಿಂದಲೇ ಯುವತಿ ಸಾವಿನ ಮನೆ ಸೇರಿದ್ದಾಳೆ.
ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ದುರಂತ ಸಾವು ಕಂಡಿದ್ದಾಳೆ. ಗಂಡ ಮೂವರು ಮಕ್ಕಳಿಗಾಗಿ ದುಡಿಯಲು ಬೆಂಗಳೂರಿಗೆ ಬಂದವಳು ಪ್ರಿಯತಮನ ತೆಕ್ಕೆಗೆ ಸಿಲುಕಿ ಹೆಣವಾಗಿದ್ದಾಳೆ.
ಒಂದು ವಾರದಿಂದ ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ಲಾಡ್ಜ್‌ನಲ್ಲಿ ರೂಮ್ ಮಾಡಿ ಕೊಂಡಿದ್ದರಂತೆ
ಕಾವೇರಿಗೆ 2016ರಲ್ಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎನ್ನಲಾಗಿದೆ. ಆದರೆ ದುಡಿಯಲು ಗಂಡ ಮಕ್ಕಳನ್ನು ಊರಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಗಾರೇ ಕೆಲಸ ಮಾಡುತ್ತಿದ್ದ ರಮೇಶನ ಪರಿಚವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಹೀಗಾಗಿ ಈ ಜೋಡಿ ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿತ್ತು ಎಂದು ವರದಿಯಾಗಿದೆ.
ಗುರುವಾರ ಬೆಳಗ್ಗೆ ಲಾಡ್ಜ್‌ನಲ್ಲಿ ಇಬ್ಬರಿಗೂ ಜಗಳ ಆಗಿದ್ದು, ಮಧ್ಯಾಹ್ನ ಕಾವೇರಿ ರೂಂನ ಲ್ಲಿದರೆ, ರಮೇಶ್ ಹೊರಗಡೆ ಹೋಗಿ ಪೆಟ್ರೋಲ್ ತಂದಿದ್ದ. ಈ ವೇಳೆ ರೂಮ್‌ಗೆ ಮತ್ತೊಬ್ಬ ವ್ಯಕ್ತಿ ಬಂದು ಹೋಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ರೂಮಿನಲ್ಲಿ ಕಾವೇರಿ ಹಾಗೂ ರಮೇಶನಿಗೆ ಇಬ್ಬರಿಗೂ ಮತ್ತೆ ಗಲಾಟೆ ಆಗಿರುವ ಸಾಧ್ಯತೆಯಿದ್ದು ಈ ವೇಳೆ ರಮೇಶ ಪೆಟ್ರೋಲ್ ಸುರಿದುಕೊಂಡು ಮೇನ್ ಡೋರ್ ಲಾಕ್ ಮಾಡಿದ್ದಾನೆ.
ಭಯದಲ್ಲಿ ಕಾವೇರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂಗೆ ಓಡಿ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಬಳಿಕ ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆದರೆ ಅಷ್ಟೊತ್ತಿಗಾಗಲೇ ಬೆಂಕಿ ಇಡೀ ರೂಂ ವ್ಯಾಪಿಸಿದೆ.
ಬೆಂಕಿಯಿಂದಾಗಿ ರಮೇಶ್ ಸಾವಾಗಿದ್ದು, ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಸಾವನ್ನಪಿದಾಳೆ ಎನ್ನಲಾಗುತ್ತಿದೆ. ಕಾವೇರಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಂದವಳು ರಮೇಶನ ಜತೆ ಪರಲೋಕ ಸೇರಿದ್ದಾಳೆ. ಈ ಬಗ್ಗೆ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.