ದೊಡ್ಡಬಳ್ಳಾಪುರ (Doddaballapura); ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸದ್ದಡಗಿದ್ದ ಮಾಂಗಲ್ಯ ಸರ ಕಳವು ಪ್ರಕರಣ ಬೇಸಿಗೆ ಆರಂಭಕ್ಕೆ ಮುನ್ನವೇ ಮತ್ತೆ ಕಂಡುಬಂದಿದೆ.
ಅರಳುಮಲ್ಲಿಗೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಬಳಿ ಯಾರು ಇಲ್ಲದನ್ನು ಗಮನಿಸಿರುವ ದುಷ್ಕರ್ಮಿಗಳು, ಚಾಕಲೇಟ್ ಕೊಳ್ಳುವ ನೆಪದಲ್ಲಿ ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಅರಳುಮಲ್ಲಿಗೆ ನಿವಾಸಿ 74 ವರ್ಷದ ಯಶೋಧಮ್ಮ ಎನ್ನುವವರು ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕೆಂದು ಕುಳಿತಿದ್ದಾಗ ಘಟನೆ ನಡೆದಿದೆ.
ಹಲವು ದಿನಗಳಿಂದ ಹೊಂಚು ಹಾಕಿ, ಅಂಗಡಿ ಬಳಿ ಯಾರು ಇಲ್ಲದೇ ಇರುವುದನ್ನು ಗಮನಿಸಿರುವ ಇಬ್ಬರು ದುಷ್ಕರ್ಮಿಗಳು, 10 ರೂ ನೀಡಿ 5 ರೂಗೆ ಚಾಕಲೇಟ್ ಕೊಡುವಂತೆ ಯಶೋಧಮ್ಮ ಅವರಿಗೆ ಹೇಳಿದ್ದು, ಚಾಕಲೇಟ್ ನೀಡಿ, ಉಳಿದ 5 ರೂ ಚಿಲ್ಲರೆ ಹಣ ವಾಪಸ್ ನೀಡಲು ತಿರುಗಿದ ವೇಳೆ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಎರಡೆಳೆ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿ ಕಿತ್ತಿದ್ದಾನೆ.
ಈ ವೇಳೆ ಮಾಂಗಲ್ಯ ಸರ ತುಂಡಾಗಿದ್ದು, 40 ಗ್ರಾಂ ತೂಕದ ಸರ ಕಳ್ಳನ ಕೈಗೆ ಸಿಕ್ಕು ಸ್ಕೂಟರ್ ನಲ್ಲಿ ಕುಂಟನಹಳ್ಳಿ ಕಡೆಗೆ ಪರಾರಿಯಾದರೆ, ಉಳಿ 60 ಗ್ರಾಂ ತೂಕದ ಚೈನ್ ಮತ್ತು ಮಾಂಗಲ್ಯ ವೃದ್ಧೆಯ ಬಳಿಯೇ ಉಳಿದಿದೆ.
ಇನ್ನೂ ವಿಷಯ ತಿಳಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
2 ಲಕ್ಷದ 40 ಸಾವಿರ ಮೌಲ್ಯದ ಮಾಂಗಲ್ಯ ಸರ ಕಳ್ಳತನವಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.