ಮುಂಬೈ: ಜಲಗಾಂವ್‌ನಿಂದ ಮುಂಬೈಗೆ ತೆರಳಬೇಕಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ (DCM) ಏಕನಾಥ್ ಶಿಂದೆ ಶುಕ್ರವಾರ ವಿಮಾನ ನಿಲ್ದಾಣಕ್ಕೆ ಬಂದು ಗಂಟೆಗಳ ಕಾಲ ಪೈಲಟ್‌ಗಾಗಿ ಕಾಯು ವಂತಾಯಿತು.
ಏಕೆಂದರೆ, ಡಿಸಿಎಂ ಶಿಂದೆ ಅವರ ವಿಮಾನದ ಪೈಲಟ್, ಪಾಳಿ ಮುಗಿಯಿತು ಎಂದು ವಿಶ್ರಾಂತಿಗೆ ತೆರಳಿದ್ದರು!
ಶಿಂದೆ ಶುಕ್ರ ವಾರ ಮಧ್ಯಾಹ್ನ 3.45ಕ್ಕೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ಶಿಂದೆ ಪಾಲ್ಟಿ ಯಾತ್ರೆಯಲ್ಲಿ ಭಾಗವಹಿಸಿ ಸಂತ ಮುಕ್ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ವಿಮಾನ ನಿಲ್ದಾಣಕ್ಕೆ ಬರುವುದು ತಡವಾಯಿತು. ಅಷ್ಟರವರೆಗೂ ಕಾದಿದ್ದ ಪೈಲಟ್ ತನ್ನ ಪಾಳಿ ಮುಗಿಯಿತು ಎಂದು ನಿರ್ಗಮಿಸಿದ್ದರು.
ಪೈಲಟ್ ನಿರ್ಗಮನಕ್ಕೆ ಅನಾರೋಗ್ಯವೂ ಕಾರಣ ಎನ್ನಲಾಗಿದೆ. ಶಿಂದೆ ಜತೆಗಿದ್ದ ಅಧಿಕಾರಿಗಳು ಪೈಲಟ್ ಮನವೊಲಿಸಿ ಕರೆತಂದಿದ್ದಾರೆ.
ಕೆಲವು ಗಂಟೆಗಳ ಕಾಯುವಿಕೆ ನಂತರ ಡಿಸಿಎಂ ಶಿಂದೆ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದರು.
ಶಿಂದೆ ನೆರವು: ಇದೇ ವೇಳೆ, ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಆದರೆ, ವಿಮಾನವನ್ನು ತಪ್ಪಿಸಿಕೊಂಡು ಜಲಗಾಂವ್ ವಿಮಾನ ನಿಲ್ದಾ ಣದಲ್ಲಿ ಪರದಾಡುತ್ತಿದ್ದ ಮಹಿಳೆಯೊಬ್ಬರಿಗೆ ಡಿಸಿಎಂ ಶಿಂದೆ ನೆರವಾಗಿದ್ದಾರೆ.
ತುರ್ತು ಚಿಕಿತ್ಸೆಗಾಗಿ ಮುಂಬೈಗೆ ತೆರಳಬೇಕಿದ್ದ ಮಹಿಳೆ, ವಿಮಾ ನ ನಿಲ್ದಾಣದಲ್ಲಿ ಪರದಾಡುತ್ತಿದ್ದ ವಿಷಯ ತಿಳಿದ ಶಿಂದೆ, ಮಹಿಳೆಯನ್ನು ಚಾರ್ಟರ್ಡ್ ಫ್ಲೈಟ್ ಮುಂಬೈಗೆ ಕರೆದೊಯ್ದಿದ್ದಾರೆ.